Gruhajyoti Scheme news: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ವಿದ್ಯುತ್ ಬಳಕೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತದೆ ವಿದ್ಯುತ್ ಬೇಡಿಕೆಯುುಹೆಚ್ಚುತ್ತಿರುವಂತ ಹಿನ್ನೆಲೆಯಲ್ಲಿಯೇ ಜನರ ಬೇಡಿಕೆಗಳು ತಕ್ಕಂತೆ ವಿದ್ಯುತ್ ಅನ್ನು ಒದಗಿಸಿ ಕೊಡುವುದು ಸರ್ಕಾರಕ್ಕೆ ಅತಿ ದೊಡ್ಡ ಸವಾಲಾಗಿದೆ ಅದರಲ್ಲೂ ಉಚಿತವಾಗಿ ವಿದ್ಯುತ್ ಅನ್ನು ಗೃಹಜ್ಯೋತಿ ಯೋಜನೆ ಯಡಿಯಲ್ಲಿ ನೀಡುತ್ತಿರುವುದರಿಂದ ಸರಕಾರಕ್ಕೆ ಆರ್ಥಿಕ ಹೊರೆ ಜಾಸ್ತಿಯಾಗಿದೆ .
ಆದರೆ ಈ ಎಲ್ಲಾ ಸಮಸ್ಯೆಗಳನ್ನು ಹೊರತು ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಇಂಧನ KJ ಜಾರ್ಜ್ ತಿಳಿಸಿದ್ದಾರೆ ರಾಜ್ಯದಲ್ಲಿ ವಿದ್ಯುತ್ ನ ಬಿಕ್ಕಟ್ಟು ಉಂಟಾಗಿದೆ ಅನಿಯಮಿತ ಪವರ್ ಕಟ & ಜನರನ್ನು ಕಾಡುತ್ತಿರುವಂತ ಹಿನ್ನೆಲೆಯಲ್ಲಿ ಸಚಿವರು ಸ್ಪಷ್ಟತೆಯನ್ನು ನೀಡಿದ್ದಾರೆ.
ವಿದ್ಯುತ್ ಸಾಲವನ್ನು ಪಡೆದುಕೊಳ್ಳಲು ಸರ್ಕಾರದ ನಿರ್ಧಾರವಾಗಿದೆ !
ಇತ್ತೀಚಿನ ದಿನಮಾನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ನ ಬಳಕೆ ಹೆಚ್ಚಾಗಿ ಸಾಗಿದೆ ಇಡೀ ಬೇಸಿಗೆಯ ಕಾಲದಲ್ಲಿ ಬಳಕೆ ಮಾಡುವಷ್ಟು ವಿದ್ಯುತ್ ಅನ್ನು ಆಗಸ್ಟ್ ಒಂದೇ ತಿಂಗಳಿನಲ್ಲಿ ಬಳಕೆ ಮಾಡಲಾಗಿದೆ ಅಕ್ಟೋಬರ್ ತಿಂಗಳಿನಲ್ಲಿ ಸರಿಸುಮಾರು 15,000 ಮೆಗಾ ವ್ಯಾಟಗಿಂತಲೂ ಹೆಚ್ಚಿನ ವಿದ್ಯುತ್ ನ ಬೇಡಿಕೆ ಇದೆ.
ಬಿಸಿ ಹೆಚ್ಚಾಗಿರುವುದರಿಂದ ಹಿನ್ನೆಲೆಯಲ್ಲಿ ಮತ್ತು ಮಳೆ ಇಲ್ಲದೆಯೇ ಕೃಷಿ ಭೂಮಿಯ ಒಣಗುತ್ತಿರುವಂತ ಹಿನ್ನೆಲೆಯಲ್ಲಿ ರೈತರಿಗೆ ಕೂಡ ವಿದ್ಯುತ್ ಅನ್ನು ಬಳಸಿಕೊಂಡು ನೀರಾವರಿಯ ಕೆಲಸ ಮಾಡಬೇಕಿದೆ ಇದೆಲ್ಲ ಕಾರಣಕ್ಕೆ ವಿದ್ಯುತ್ ನ ಬಳಕೆ ದಿನದಿಂದಲೇ ದಿನಕ್ಕೆ ಜಾಸ್ತಿ ಆಗುತ್ತಿದೆ ಹಾಗಾಗಿಯೇ ಸರ್ಕಾರ ಇನ್ನು ಮುಂದೆ ವಿದ್ಯುತ್ ಅನ್ನು ಸರಿಯಾಗಿ ನೀಡುತ್ತದೆಯೋ ಇಲ್ಲೋ ಎನ್ನುವುದು ಸಮಸ್ಯೆಯು ಜನರನ್ನು ಕಾಡಿದೆ.
ಲೋಡ್ ಶೆಡ್ಡಿಂಗ್ ಭಯವು ಬೇಡ ?
ಮಾರ್ಚ್ ತಿಂಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ವಿದ್ಯುತ್ ಅನ್ನು ನೀಡಬೇಕು ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಆಗುತ್ತದೆ.
ಆದರೆ ಸರ್ಕಾರವು ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದು ಹೊರಗಡೆ ರಾಜ್ಯದಿಂದ ವಿದ್ಯುತ್ ಅನ್ನು ಸಾಲ ಪಡೆಯುತ್ತೇವೆ ಹೊರತು ಯಾವುದೇ ಕಾರಣಕ್ಕೂ ರಾಜ್ಯದ ಜನತೆಗೆ ವಿದ್ಯುತ್ತಿನ ವಿಚಾರದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ತಿಳಿಸಲಾಗಿದೆ.
ಟೆಂಡರ್ ಕರೆಯಲು ಸೂಚನೆ!!
ಸರ್ಕಾರವು ಈಗಾಗಲೇ ವಿದ್ಯುತ್ತಿನ ಅಭಾವದ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯನ್ನು ನಡೆಸಿದ್ದು ರಾಜ್ಯದಲ್ಲಿರುವ ವಿದ್ಯುತ್ತಿನ ಉತ್ಪಾದನೆಗೆ 2 ಲಕ್ಷ ಟನ್ ಕಲ್ಲಿದ್ದಲುಗಳು ಒದಗಿಸಲು ವಿನಂತಿಸಿಕೊಳ್ಳಲಾಗಿದೆ ಇದಕ್ಕೆ ಕೇಂದ್ರ ಸರಕಾರದ ಒಪ್ಪಿಗೆಯನ್ನು ಸೂಚಿಸಿದೆ.
ಇದರ ಜೊತೆಗೆ ಉತ್ತರ ಪ್ರದೇಶದ ಸರ್ಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು 300 ರಿಂದ 600 ಮೆಗಾ ವ್ಯಾಟ್ ವಿದ್ಯುತ್ ಅನ್ನು ಒದಗಿಸಲು ಉತ್ತರ ಪ್ರದೇಶದ ಸರ್ಕಾರ ಒಪ್ಪಿಕೊಂಡಿದೆ ಇದೇ ರೀತಿ ರಾಜಸ್ಥಾನದ ಸರ್ಕಾರದೊಂದಿಗೂ ಕೂಡ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ
ರಾಜ್ಯದಲ್ಲಿ ವಾಸಿಸುವಂತ ಯಾವುದೇ ಜನರಿಗೆ ವಿದ್ಯುತ್ ಕೂರತೆ ಉಂಟಾಗಬಾರದು ಎಂದು ಬೆಸ್ಕಾಂ ಎಸ್ಕಾಂ ಮೊದಲಾದವು ವಿದ್ಯುತ್ ಸರಬರಾಜು ಕಂಪನಿಗಳಿಗು ತಿಳಿಸಲಾಗಿದೆ ಇದರ ಜೊತೆಗೆ ವಿದ್ಯುತ್ ಅನ್ನು ಖರೀದಿಯ ಟೆಂಡರ್ ಅನ್ನು ಅಲ್ಪಾವಧಿಗೆ ಕರೆಯಲಾಗಿದೆ.
ರಾಜ್ಯದಲ್ಲಿ 270 ರಿಂದ 280 ಮಿಲಿಯನ್ ಯೂನಿಟ್ ವರೆಗೆ ವಿದ್ಯುತ್ ನ ಬೇಡಿಕೆಯೂ ಇದೆ ಆದರೆ ಸುಮಾರು 30 ರಿಂದ 40 ಮಿಲಿಯನ್ ಯೂನಿಟ್ ನಷ್ಟು ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ ಇದನ್ನು ಸರಿಮಾಡುವದಕ್ಕೆ ಹೆಚ್ಚುವರಿ ವಿದ್ಯುತ್ ನ ಉತ್ಪಾದನೆ ಮಾಡಬೇಕ. ಒಟ್ಟಿನಲ್ಲಿ ಸರ್ಕಾರವು ಒಂದಲ್ಲ ಒಂದು ಕ್ರಮವನ್ನು ಕೈಗೊಳ್ಳುವುದರ ಮೂಲಕ ರಾಜ್ಯದಲ್ಲಿ ಇರುವ ಜನರಿಗೆ ಯಾವುದೇ ವಿದ್ಯುತ್ ನ ಸಮಸ್ಯೆ ಆಗದಂತೆ ಗಮನವನ್ನು ಹರಿಸುತ್ತೇವೆ ಎನ್ನುವ ಮಾಹಿತಿ ನೀಡಿದೆ ಒಟ್ಟಿನಲ್ಲಿ ಕನಾ೯ಟಕದ ಜನತೆಗೆ ಯಾವುದೇ ರೀತಿಯ ವಿದ್ಯುತ್ ನ ಕೂರತೆ ಆಗದಂತೆ ನೋಡಿಕೊಳ್ಳುತ್ತೇವೆ ಏಂದು ಬರವಸೆ ನೀಡಿದ್ದಾರೆ.
ಓದುಗರ ಗಮನಕ್ಕೆ : ಕರ್ನಾಟಕ ಶಿಕ್ಷಣವು ತನ್ನ ಓದುಗರಿಗೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ನಿಮಗೆ ತಿಳಿಸುವುದಿಲ್ಲ ಮತ್ತು ಇಂಥಹ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಪೇಜ್ ಅನ್ನು ಅನುಸರಿಸಿ.
ಇಲ್ಲಿ ವರೆಗೆ ಈ ಲೇಖನವನ್ನು ಓದಿದಕ್ಕೆ ಧನ್ಯವಾದಗಳು