ನಮಸ್ಕಾರ ಸ್ನೇಹಿತರೇ…. ಗೃಹಲಕ್ಷ್ಮಿ ಯೋಜನೆ ಮುಖಾಂತರ ಪ್ರತಿ ಮನೆಯ ಯಜಮಾನಿಯರು ಪ್ರತಿ ತಿಂಗಳು ಕೂಡ ಎರಡು ಸಾವಿರ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತವಾಗಿ ಒಂಬತ್ತನೇ ಕಂತಿನ ಹಣವನ್ನು ಕೂಡ ಏಪ್ರಿಲ್ 19 ನೇ ದಿನಾಂಕದಿಂದ, ಎಲ್ಲಾ ಫಲಾನುಭವಿಗಳ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ. ಏಕೆಂದರೆ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಕೂಡ ಆರಂಭವಾಗಲಿದ್ದು. ಆ ಕಾರಣಕ್ಕಾಗಿ ಎಲ್ಲರ ಖಾತೆಗೆ ಮುಂಚಿತವಾಗಿಯೇ ಒಂಬತ್ತನೇ ಕಂತಿನ ಹಣವನ್ನು ಕೂಡ ಜಮಾ ಮಾಡಿದೆ ಸರ್ಕಾರ. ಕಳೆದ ತಿಂಗಳಿನಲ್ಲಿ ಎಂಟನೇ ಕಂತಿನ ಹಣವನ್ನು ಕೂಡ ಏಪ್ರಿಲ್ 10ರವರೆಗೆ ಎಲ್ಲ ಜಿಲ್ಲೆಗಳಿಗೂ ಕೂಡ ಬಿಡುಗಡೆ ಮಾಡಲಾಗಿತ್ತು, ಈಗ ಎಲ್ಲರಿಗೂ ಕೂಡ ಎಂಟನೇ ಕಂತಿನ ಹಣ ಬಂದಿದೆ. ಹಣ ಬರದಿದ್ದರೂ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
8ನೇ ಕಂತಿನ ಹಣ ಎಲ್ಲರ ಖಾತೆಗೆ ಜಮಾ ಆಗಿದೆ.
ಮಾರ್ಚ್ 20 ರಿಂದ ಏಪ್ರಿಲ್ ಹತ್ತರವರೆಗೂ ಕೂಡ 8ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿತ್ತು, ಒಂದೊಂದು ನಿಗದಿ ಜಿಲ್ಲೆಗಳಿಗೂ ಕೂಡ ಒಂದೊಂದು ನಿಗದಿ ದಿನಗಳಲ್ಲಿ ಬಿಡುಗಡೆ ಮಾಡಿ. ಆ ಫಲಾನುಭವಿಗಳಿಗೆ ಹಣವನ್ನು ಕೂಡ ಅವರ ಖಾತೆಯಲ್ಲಿ ಜಮಾ ಮಾಡಿದ್ದು ಸರ್ಕಾರ, ಅದೇ ರೀತಿ ಪ್ರಸ್ತುತ ತಿಂಗಳಿನಲ್ಲೂ ಕೂಡ 9ನೇ ಕಂತಿನ ಹಣವನ್ನು ಚುನಾವಣೆ ಮುಂಚಿತವಾಗಿಯೇ ಬಿಡುಗಡೆ ಮಾಡಿ ಎಲ್ಲರ ಖಾತೆಗೆ ಕೂಡ ಹಣವನ್ನು ಜಮಾ ಮಾಡಿದೆ.
ನೀವು ಕೂಡ ಪ್ರಸ್ತುತ ದಿನಗಳಲ್ಲಿ ಎಲ್ಲಾ ಕಂತಿನ ಹಣವನ್ನು ಕೂಡ ಪಡೆದಿದ್ದೀರಿ ಎಂದರೆ ನಿಮಗೂ ಕೂಡ ಒಂಬತ್ತನೇ ಕಂತಿನ ಹಣ ಬಂದಿದೆ. ಒಟ್ಟು 14 ಜಿಲ್ಲೆಗಳಿಗೆ ಮಾತ್ರ 9ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಆ 14 ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆ ಕೂಡ ಸೇರಿಕೊಂಡಿದ್ದರೆ ನಿಮಗೂ ಕೂಡ ಹಣ ಬಂದಿರುತ್ತದೆ.
ಇದನ್ನು ಓದಿ :- ಚುನಾವಣೆಯಲ್ಲಿ Vote ಹಾಕದವರ ಬ್ಯಾಂಕ್ ಖಾತೆಯಿಂದ 350 ರೂ ಹಣ ಕಡಿತ ! Fact Check
ಗೃಹಲಕ್ಷ್ಮಿಯರ ಖಾತೆಗೆ 9ನೇ ಕಂತಿನ ಹಣ ಜಮಾ !
ಹೌದು ಸ್ನೇಹಿತರೆ ಈಗಾಗಲೇ ಲಕ್ಷಾಂತರ ಜನರಿಗೆ ಒಂಬತ್ತನೇ ಕಂತಿನ ಹಣ ಕೂಡ ಬಿಡುಗಡೆಯಾಗಿದೆ. ಏಪ್ರಿಲ್ 19 ನೇ ತಾರೀಖಿನಿಂದ ಎಲ್ಲರ ಖಾತೆಗಳಿಗೂ ಕೂಡ 9ನೇ ಕಂತಿನ ಹಣ ಹೋಗಿದೆ ಎಲ್ಲರಿಗೂ ಕೂಡ ಈ ಒಂದು ಮಾಹಿತಿ ತಿಳಿದಿಲ್ಲ ಅಥವಾ ಬಂದಿದ್ದರೂ ಕೂಡ ಅವರು ಬೇರೆ ಕಂತಿನ ಹಣ ಇರಬಹುದು ಎಂದು ಅಂದುಕೊಂಡಿರುತ್ತಾರೆ. ಆದರೆ ಅದು ಒಂಬತ್ತನೇ ಕಂತಿನ ಹಣ ವಾಗಿರುತ್ತದೆ. ಆ 9ನೇ ಕಂತಿನ ಹಣ ಬಂದಿದೆಯೋ ಬಂದಿಲ್ಲವೋ ಎಂಬುದನ್ನು ನೀವು ಫೋನಿನಲ್ಲಿ ಚೆಕ್ ಮಾಡಿಕೊಳ್ಳಬಹುದು.
14 ಜಿಲ್ಲೆಗಳಿಗೆ ಬಿಡುಗಡೆಯಾಯಿತು 9ನೇ ಕಂತಿನ ಹಣ !
ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಕೇಂದ್ರ, ಹಾಗೂ ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿತ್ರದುರ್ಗ, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬೆಂಗಳೂರು ದಕ್ಷಿಣ, ಉಡುಪಿ,
ಗೃಹಲಕ್ಷ್ಮಿ ಯೋಜನೆಯ ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ವಿಧಾನ !
- ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕೂಡ DBT ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬೇಕು.
- ಡೌನ್ಲೋಡ್ ಮಾಡಿಕೊಂಡ ಬಳಿಕ ಡಿವಿಟಿ ಮೊಬೈಲ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ.
- ಒಪ್ಪನ್ ಮಾಡಿಕೊಂಡ ನಂತರ ಲಾಗಿನ್ ಆಗಬೇಕು. MPIN ಬಳಸಿಕೊಂಡು ಲಾಗಿನ್ ಪ್ರಕ್ರಿಯೆಯನ್ನು ಮುಗಿಸಿರಿ.
- ನಂತರ ಹೊಸ ಪುಟ ತೆರೆಯುತ್ತದೆ. ಅಲ್ಲಿ ನೀವು ಸೆಲೆಕ್ಟ್ ಮಾಡಿಕೊಂಡಿರುವಂತಹ ಭಾಷೆಯಲ್ಲಿಯೇ ಪಾವತಿ ಸ್ಥಿತಿ ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದರೆ ಪೇಮೆಂಟ್ ಸ್ಟೇಟಸ್ ಎಂಬುದು ಕಾಣುತ್ತದೆ. ಅದರ ಮೇಲೆ ಕ್ಲಿಕಿಸಿ.
- ಆನಂತರ ಎಲ್ಲಾ ಸರ್ಕಾರಿ ಯೋಜನೆಯ ಸ್ಟೇಟಸ್ ಗಳನ್ನು ಕೂಡ ಇಲ್ಲಿ ನೋಡುತ್ತೀರಿ. ನೀವು ಯಾವ ಯೋಜನೆಯ ಸ್ಟೇಟಸ್ ಅನ್ನು ನೋಡಲು ಬಯಸುತ್ತೀರೋ ಆ ಯೋಜನೆಯ ಹೆಸರನ್ನು ಆಯ್ಕೆ ಮಾಡಿಕೊಳ್ಳಿ.
- ಆಯ್ಕೆ ಮಾಡಿಕೊಂಡ ನಂತರವೇ ಎಲ್ಲಾ ಕಂತಿನ ಹಣ ಕೂಡ ನಿಮ್ಮ ಮುಂದೆ ಕಾಣುತ್ತದೆ, ಎಷ್ಟು ಹಣ ಪ್ರತಿ ತಿಂಗಳು ಜಮಾ ಆಗಿದೆ ಯಾವ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆ ಎಂಬುದನ್ನು ಕೂಡ ಇಲ್ಲಿಯೇ ಇರುತ್ತದೆ.
- ಇದುವರೆಗೂ ಎಲ್ಲಾ ಕಂತಿನ ಹಣ ಬಂದಿದೆ ಆದರೆ ಇನ್ನೂ ಕೂಡ 9ನೇ ಕಂತಿನ ಹಣ ಬಂದಿಲ್ಲದವರು ಈ ತಿಂಗಳಿನಲ್ಲಿಯೇ ನಿಮ್ಮ ಖಾತೆಗೆ ಹಣ ಕೂಡ ಜಮಾ ಆಗುತ್ತದೆ ಯಾವುದೇ ರೀತಿ ಆತಂಕದ ಭಯ ಬೇಡ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…