Gruhalakshmi: ನಮಸ್ಕಾರ ಕರ್ನಾಟಕದ ಜನತೆ, ಗೃಹಲಕ್ಷ್ಮಿ ಯೋಜನೆ ಹಣ ಎರಡು ತಿಂಗಳಿಂದ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಈ ವಿಷಯದಿಂದಾಗಿ ಹಲವಾರು ಜನ ಮಹಿಳೆಯರು ಸರ್ಕಾರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾಗಿ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ವಿಚಾರವನ್ನು ಚರ್ಚಿಸಲಿದ್ದೇವೆ. ಲೇಖನವನ್ನು ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಗೃಹಲಕ್ಷ್ಮಿ ಯೋಜನೆ! (Gruhalakshmi)
ಸ್ನೇಹಿತರೆ, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾದ ಗೃಹಲಕ್ಷ್ಮಿ ಯೋಜನೆಯು ಕಾಂಗ್ರೆಸ್ ಸರ್ಕಾರವು ನೀಡಿರುವ 5 ಗ್ಯಾರಂಟಿಗಳಲ್ಲಿ ಒಂದಾಗಿರುತ್ತದೆ. ಈ ಯೋಜನೆಯ ಮೂಲಕ ಫಲಾನುಭವಿ ಮಹಿಳೆಯ ಖಾತೆಗೆ ರೂ.2000 ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿದೆ ಎಂದು ಕೇಳಬಹುದಾಗಿದೆ. ಆದರೆ ಲೋಕಸಭೆ ಚುನಾವಣೆಯ ಹಿನ್ನೆಲೆಯಿಂದ ಕಳೆದ 2 ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ.
ಕಳೆದ 10 ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರ ಖಾತೆಗೆ ಹಣವನ್ನು ಜಮಾ ಮಾಡಿದೆ. ಆದರೆ 2 ತಿಂಗಳಿನಿಂದ ಫಲಾನುಭವಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗಿಲ್ಲ. ಈ ವಿಷಯದ ಕುರಿತಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸ್ಪಷ್ಟನೆಯನ್ನು ನೀಡಿರುತ್ತಾರೆ. ಅದೇನೆಂಬುದನ್ನು ಈ ಕೆಳಗೆ ನೋಡಿರಿ.
ಸ್ನೇಹಿತರೆ ಕಳೆದ 2 ತಿಂಗಳಿನಿಂದ ಹಣ ಜಮಾ ಆಗಿಲ್ಲ ಅಂದಾಗ ಕೆಲವು ಊಹಾಪೋಹಗಳು ಶುರುವಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಗೃಹಲಕ್ಷ್ಮಿ ಅಥವಾ ಯಾವುದೇ ಗ್ಯಾರಂಟಿಗಳು ರದ್ದಾಗಲಿವೆ ಎಂಬ ಮಾಹಿತಿಗಳು ಹರಿದಾಡುತ್ತಿದ್ದವು. ಆದರೆ ಸ್ವತಹ ಲಕ್ಷ್ಮಿ ಹೆಬ್ಬಾಳಕರವರೆ ಸ್ಪಷ್ಟನೆಯನ್ನು ನೀಡಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಬರೋದು ನಿಲ್ಲುವುದಿಲ್ಲ. ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿದೆ ಹಾಗೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿರುವವರೆಗೂ ಚಾಲ್ತಿಯಲ್ಲಿ ಇರುತ್ತವೆ ಎಂದು ತಿಳಿಸಲಾಗಿದೆ.
ಗೃಹಲಕ್ಷ್ಮಿ (Gruhalakshmi) ಹಣ ಯಾಕೆ ಜಮಾ ಆಗಿಲ್ಲ?
ಹೌದು ಸ್ನೇಹಿತರೆ, ಚುನಾವಣೆಯ ಸಂದರ್ಭದಲ್ಲಿ ಹಣ ಜಮಾ ಆಗದೇ ಇರುವುದರಿಂದ ಗ್ಯಾರಂಟಿ ಯೋಜನೆಗಳು ಮುಗಿದವು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ ಫಲಾನುಭವಿಗಳಲ್ಲಿ ಹೆಚ್ಚಿನ ಆತಂಕ ಉಂಟಾಗಿತ್ತು. ಯಾಕೆಂದರೆ ಚುನಾವಣೆಗೂ ಮೊದಲು ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿಗಳಿಗೆ ಜನರು ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದರು. ಹಾಗಾಗಿ ಜನರು ಈ ವಿಚಾರವಾಗಿ ತಲೆಕೆಡಿಸಿಕೊಂಡಿದ್ದರು ಎಂದು ಹೇಳಿದರೆ ತಪ್ಪಾಗಲಾರದು.
ಗೃಹಲಕ್ಷ್ಮಿಯರಿಗೆ (Gruhalakshmi) ಸಿಹಿ ಸುದ್ದಿ!
ಆದರೆ ಎಲ್ಲ ಊಹಾಪೋಹಗಳನ್ನು ಗಮನಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆದಂತಹ ಲಕ್ಷ್ಮಿ ಹೆಬ್ಬಾಳಕರ್ ಅವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಲಾಗುವುದಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಇರುವವರೆಗೂ ಹಣ ಆದಷ್ಟು ಜಮಾ ಆಗುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯುವುದು ಹೇಗೆ?
ಹಾಗಾಗಿ, ಸದ್ಯಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣಕ್ಕೆ ಯಾವುದೇ ಅಡಚಣೆ ಇಲ್ಲ ಎಂಬುದು ಖುಷಿ ವಿಚಾರ ಎಂದು ಹೇಳಬಹುದಾಗಿದೆ. ಹಾಗಾಗಿ ಯಾವುದೇ ರೀತಿಯ ಅಡೆತಡೆ ಇಲ್ಲದೆ ಗೃಹಲಕ್ಷ್ಮಿ ಯೋಜನೆಯು ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಬಹುದು. ಇನ್ನು ಮುಂದೆ ಎಲ್ಲಾ ಜಿಲ್ಲೆಗಳಿಗೆ ಹಂತ ಹಂತವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ವಿತರಣೆ ಮಾಡಲಾಗುವುದು ಎಂಬ ವಿಚಾರಗಳು ಮುಂದುವರೆಯುತ್ತಿವೆ.
ಇದನ್ನೂ ಓದಿ: ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್!