Gruhalakshmi Yojana: ನಮಸ್ಕಾರ ಎಲ್ಲರಿಗೂ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ರಾಜ್ಯ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಇದರಲ್ಲಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದು ಆಗಿರುತ್ತದೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿ(Gruhalakshmi 11th Installment Money)ನ ಹಣವು ಈಗಾಗಲೇ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದ್ದು, ನಿಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಿ.
Table of Contents
ಇನ್ನು ಕೂಡ ಹಲವಾರು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕ್ರಾಂತಿನ ಹಣ ಜಮಾ ಆಗಿಲ್ಲ ಅಂತಹ ಮಹಿಳೆಯರು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇನೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆ ಗೃಹಲಕ್ಷ್ಮಿ ಯಾಗಿರುತ್ತದೆ. ಈ ಯೋಜನೆಯ ಮೂಲಕ ಫಲಾನುಭವಿಗಳು ಅಂದರೆ ಮನೆಯ ಯಜಮಾನಿಯು ಪ್ರತಿ ತಿಂಗಳು 2000 ಪಡೆದುಕೊಳ್ಳುತ್ತಾರೆ.
ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ! {Gruhalakshmi Yojana}
ಹೌದು ಸ್ನೇಹಿತರೆ ಈ ಯೋಜನೆಯು ಮಹಿಳೆಯರಿಗಾಗಿ ವಿಶೇಷವಾಗಿ ಆರ್ಥಿಕವಾಗಿ ನೆರವಾಗಲಿ ಎಂದು ಯೋಚನೇಯನ್ನು ಜಾರಿಗೆ ತರಲಾಗಿರುತ್ತದೆ. ಮನೆ ನಡೆಸಿಕೊಂಡು ಹೋಗುವ ಮನೆ ಯಜಮಾನ ಬ್ಯಾಂಕ್ ಖಾತೆಗೆ (Bank Account) ಪ್ರತಿ ತಿಂಗಳು ಕೂಡ ಸರ್ಕಾರದ ಕಡೆಯಿಂದ ಎರಡು ಸಾವಿರ ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯು ಕಳೆದ ವರ್ಷ ಜಾರಿಗೆ ಬಂದಿದ್ದು ಈಗಾಗಲೇ ಹತ್ತರಿಂದ ಹನ್ನೊಂದು ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡವಲ್ಲಿ ಯಶಸ್ವಿಯಾಗಿದೆ ಆದರೆ ಇನ್ನೇನು 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಬೇಕಿದೆ ರಾಜ್ಯದಲ್ಲಿ ಒಂದು ಕೋಟಿಗಿಂತ ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಎಲ್ಲರಿಗೂ ಕೂಡ ಈ ಸೌಲಭ್ಯವು ಸಿಗುತ್ತಿಲ್ಲ ಎಂದರೆ ತಪ್ಪಾಗಲಾರದು.
ಎರಡು ತಿಂಗಳ ಹಣ ಬಂದಿಲ್ಲದವರು ಏನು ಮಾಡಬೇಕು?
ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಒಂದು ಕಂತಿನ ಹಣವು ಕೂಡ ಬಂದಿಲ್ಲ. ಅಂತ ಮಹಿಳೆಯರು ಇನ್ನೊಂದು ಸಲ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ನಿರೀಕ್ಷೆ ಮಾಡಿದ ರೀತಿ ಫಲಿತಾಂಶ ಭಾರತ ಕಾರಣ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬಹುದು ಎಂಬ ಊಹಾಪೋದಲ್ಲಿದ್ದರೆ ಆದರೆ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತ ಮಾಹಿತಿಯನ್ನು ಕೂಡ ನೀಡಿರುತ್ತಾರೆ ಎಂದು ಹೇಳಬಹುದು.
ಜನರು ಯಾವುದೇ ರೀತಿಯ ಸಂದೇಶದಲ್ಲಿ ಇರಬಾರದು, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಇರುವಷ್ಟು ದಿನ ಗೃಹಲಕ್ಷ್ಮಿ ಯೋಜನೆ ಅಥವಾ ಎಲ್ಲಾ ಗ್ಯಾರೆಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಬಂದ್ ಆಗುವುದಿಲ್ಲ. ಎಂದು ಕೂಡ ತಿಳಿಸಿದ್ದಾರೆ ಹಾಗೂ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ನೀವು ಅದನ್ನು ಬಗೆಹರಿಸಿಕೊಂಡಾಗ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿದೆ ಮತ್ತು ಎಲ್ಲಾ ಗ್ಯಾರಂಟಿಗಳ ಯೋಜನೆ ಹಣಗಳು ಕೂಡ ನಿಮಗೆ ದೊರಕುತ್ತವೆ ಎಂದು ತಿಳಿಸಿದ್ದಾರೆ.
ನೀವು ಅಂದರೆ ಮಹಿಳೆಯರು ತಮ್ಮ ರೇಷನ್ ಕಾರ್ಡ್ ಈ-ಕೆವೈಸಿ ಕಡ್ಡಾಯವಾಗಿ ಮಾಡಿಸಿ ನೀವೇನಾದರೂ ಮೊದಲು ಮಾಡಿಸಿಲ್ಲ ಅಂದರೆ, ಆಧಾರ್ ಕಾರ್ಡ್ ಕೂಡ ಅಪ್ಡೇಟ್ ಮಾಡಿಸಿ. NPCI ಮ್ಯಾಪಿಂಗ್ ಕೂಡ ಆಗಿದೆಯಾ ಇಲ್ಲ ತಿಳಿದುಕೊಂಡು ಅದನ್ನು ಕೂಡ ಕಡ್ಡಾಯವಾಗಿ ಮಾಡಿಸಿ. ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ. ಮತ್ತು ಬ್ಯಾಂಕ್ ಅಕೌಂಟ್ ಆಗಿದೆ ಇಲ್ಲವಾ ಎಂದು ಒಂದು ಸಲ ಪರಿಶೀಲಿಸಿಕೊಳ್ಳಿ.
ಮೊದಲು ಈ ಕೆಳಗೆ ನೀಡಿರುವ ಜಿಲ್ಲೆಗಳಿಗೆ ಹಣ ಜಮಾ ಆಗುವುದು ಎಂಬ ಮಾಹಿತಿ ದೊರಕಿರುತ್ತದೆ. ಪೂರ್ತಿ ನಾಲ್ಕು ಸಾವಿರ ರೂಪಾಯಿ ಹಣವು ಒಂದೇ ಸಲ ಜಮಾ ಆಗಲಿದೆ ಎಂಬ ಮಾಹಿತಿಯು ಕೂಡ ಸಿಕ್ಕಿರುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹಣ ಮೊದಲು ಈ ಜಿಲ್ಲೆಗಳಿಗೆ ಜಮಾ ಆಗುತ್ತದೆ. ಮೈಸೂರು, ಮಂಡ್ಯ, ಧಾರವಾಡ, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ತುಮಕೂರು ಈ ಜಿಲ್ಲೆಯವರು ವೇಟಿಂಗ್ ಇರುವ ನಾಲ್ಕು ಸಾವಿರ ರೂಪಾಯಿ ಹಣ ಬಿಡುಗಡೆ ಆಗಲಿದ್ದು ಮಹಿಳೆಯರು ತಮ್ಮ ಹಣದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದು.