Gruhalakshmi Yojane: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಈ ಜಿಲ್ಲೆಗಳಿಗೆ ಮೊದಲು ಹಣ ಜಮಾ ಆಗುವುದು ಎಂಬ ಮಾಹಿತಿಯ ದೊರಕಿದ್ದು, ಆ ಜಿಲ್ಲೆಗಳು ಯಾವುವು ಎಂಬ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಅಚ್ಚುಕಟ್ಟಾಗಿ ಓದಿ.
Table of Contents
ಗೃಹಲಕ್ಷ್ಮಿ ಯೋಜನೆ! (Gruhalakshmi Yojane)
ವರಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ ಒಂದು ತಿಂಗಳಿಗೆ ರೂ.2000ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ಕೆಲಸವನ್ನು ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಇದು 10 ತಿಂಗಳು ಪೂರೈಸಿ, ಈಗ 11 ತಿಂಗಳ ಹಣವನ್ನು ಜಮಾ ಮಾಡಲು ಮುಂದಾಗಿದೆ.
11ನೇ ಕಂತಿನ ಹಣ ಯಾವಾಗ ಬಿಡುಗಡೆ?
ಲೋಕಸಭೆ ಚುನಾವಣೆ ಮುಗಿದ ಬಳಿಕ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡಲಾಗುವುದು ಎನ್ನುವ ಸೂಚನೆಯನ್ನು ಸರ್ಕಾರ ನೀಡಿತ್ತು. ಈಗಾಗಲೇ ಫಲಿತಾಂಶ ಹೊರ ಬಿದ್ದಿದ್ದು 11ನೇ ಕಂತಿನ ಹಣ ಬಿಡುಗಡೆ ಮಾಡುವ ಬಗ್ಗೆ ಸರ್ಕಾರವು ಇನ್ನೂ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಜೂನ್ 25ರ ಒಳಗಾಗಿ ಹಣವನ್ನು ಜಮಾ ಮಾಡುವ ಮಾಹಿತಿಗಳು ಖಾಸಗಿ ಮೂಲಗಳಿಂದ ತಿಳಿದು ಬಂದಿವೆ. ಆದರೆ ಈ ಕುರಿತು ಸರ್ಕಾರವು ಯಾವುದೇ ರೀತಿಯ ಆದೇಶ ಹೊರಡಿಸಿಲ್ಲ.
ಇದನ್ನೂ ಓದಿ: ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ ₹35 ಸಾವಿರದವರೆಗೆ ಉಚಿತ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.
ಮೊದಲು ಯಾವ ಜಿಲ್ಲೆಗಳಿಗೆ ಹಣ ಬಿಡುಗಡೆ?
ಖಾಸಗಿ ಮಾಧ್ಯಮಗಳಿಂದ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಈ ಕೆಳಗೆ ನೀಡಿರುವ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಮೊದಲ ಹಂತದಲ್ಲಿ ಅಲ್ಲಿರುವ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ. ಅವುಗಳೆಂದರೆ,
- ಹಾವೇರಿ
- ಗದಗ
- ಬಾಗಲಕೋಟೆ
- ಬಳ್ಳಾರಿ
- ಕಲಬುರ್ಗಿ
- ವಿಜಯಪುರ
- ಯಾದಗಿರಿ
- ಕೊಪ್ಪಳ
- ರಾಯಚೂರು
- ಬೀದರ್
ಈ ಮೇಲೆ ಕೊಟ್ಟಿರುವಂತಹ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಮೊದಲ ಹಂತದಲ್ಲಿ ಜಮಾ ಆಗುವುದು ಎಂಬ ಮಾಹಿತಿಯು ತಿಳಿದು ಬಂದಿರುತ್ತದೆ.
ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು?
ಹಣ ಬಂದಿಲ್ಲ ಅಂತ ಅಂದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನೀವು ಯಾವ ಕಾರಣಕ್ಕೆ ಹಣ ಬಂದಿಲ್ಲ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಕೊಳ್ಳಿರಿ. ಆಧಾರ್ ಕಾರ್ಡ್ ನಲ್ಲಿರುವ ವಿವರಗಳನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆಯಾ? ಇಲ್ಲವಾ? ಎಂದು ಸರಿಯಾಗಿ ಪರಿಶೀಲಿಸಿಕೊಳ್ಳಿ ನಂತರದಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗುವುದು.
ಇದನ್ನೂ ಓದಿ: Ganga Kalyana: ಉಚಿತ ಬೋರ್ವೆಲ್ ಕೊರೆಸಲು ಸರ್ಕಾರದಿಂದ ಸಹಾಯಧನ! ಗಂಗಾ ಕಲ್ಯಾಣ ಯೋಜನೆ!