Gruhalakshmi: ಗೃಹಲಕ್ಷ್ಮಿ ಹಣ ಬಂತಾ ನೋಡಿ! ₹4,000 ಹಣ ಈಗಲೇ ಚೆಕ್ ಮಾಡಿಕೊಳ್ಳಿ!

Gruhalakshmi: ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಕರ್ನಾಟಕ ಸರ್ಕಾರವು ನೀಡಿರುವ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾಗಿ ಜನಪ್ರಿಯವಾದದೆಂದರೆ ಗೃಹಲಕ್ಷ್ಮಿ ಯೋಜನೆ, ಗೃಹಲಕ್ಷ್ಮಿ ಯೋಜನೆಯ ಹಣ ಎರಡು ತಿಂಗಳಿನಿಂದ ಖಾತೆಗೆ ಜಮಾ ಆಗಿಲ್ಲ. ಆದ್ದರಿಂದ ಫಲಾನುಭವಿ ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ಎದುರು ನೋಡುತ್ತಿದ್ದಾರೆ. 

ಹೌದು ಸ್ನೇಹಿತರೆ, ಕಳೆದ ಎರಡು ತಿಂಗಳಿನಿಂದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಣ ಜಮಾ ಆಗಿಲ್ಲ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಬೇಸತ್ತು ಹೋಗಿದ್ದಾರೆ. ಹಾಗೂ ಸರ್ಕಾರ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಲಕ್ಷ್ಮಿ ಹೆಬ್ಬಾಳಕರವರು ಗೃಹಲಕ್ಷ್ಮಿ ಯೋಜನೆಯ ಹಣವು ಅಥವಾ ಕಾಂಗ್ರೆಸ್ ಸರ್ಕಾರವು ನೀಡಿರುವ ಐದು ಗ್ಯಾರಂಟಿಗಳು ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿರುವವರೆಗೂ ಚಾಲ್ತಿಯಲ್ಲಿರುತ್ತವೆ ಎಂದು ತಿಳಿಸಿದರು. 

ನಿಮ್ಮ ಖಾತೆಗೆ ಏನಾದರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ದರೆ ನೀವು ಯಾವ ರೀತಿ ಪರಿಶೀಲಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ನೀಡಿರುತ್ತೇನೆ ನೋಡಿ. ಕೆಳಗೆ ನೀಡಿರುವ ಮಾರ್ಗಗಳನ್ನು ಅನುಸರಿಸುವ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಿಮ್ಮ ಮೊಬೈಲ್ ನಲ್ಲಿಯೇ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. 

ಗೃಹಲಕ್ಷ್ಮಿ (Gruhalakshmi) ಡಿ.ಬಿ.ಟಿ ಚೆಕ್ ಮಾಡಿಕೊಳ್ಳಿ!

ಸ್ನೇಹಿತರೆ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡಿಕೊಳ್ಳಬೇಕು ಎಂದು ಬಯಸಿದರೆ, ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಿಂದ “ಡಿಬಿಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಅನ್ನು ಪಡೆದುಕೊಳ್ಳಿ. ನಂತರ ಅಪ್ಲಿಕೇಶನ್ ಅಲ್ಲಿ ನಿಮ್ಮ ಫಲಾನುಭವಿಯ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ ಓ ಟಿ ಪಿ ಯನ್ನು ನಮೂದಿಸಿ. ಅಲ್ಲಿ ನಿಮಗೆ ಫಲಾನುಭವಿಯ ಸಂಪೂರ್ಣ ವಿವರವನ್ನು ತೋರಿಸಲಾಗುತ್ತದೆ.

ನಂತರ ನೀವು ಮುಂದೆ ಸಾಗಿದಾಗ ಅಲ್ಲಿ ಪೇಮೆಂಟ್ ಟ್ರಾನ್ಸಾಕ್ಷನ್ ಎಂಬ ಆಪ್ಷನ್ ಕಾಣಿಸುತ್ತದೆ. ಅಲ್ಲಿ ನೀವು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣವು ಯಾವ ದಿನಾಂಕದಂದು ಖಾತೆಗೆ ಜಮಾ ಆಗಿದೆ ಮತ್ತು ಎಷ್ಟು ಹಣ ಜಮಾ ಆಗಿದೆ? ಎಂಬ ಸಂಪೂರ್ಣವಾದ ಮಾಹಿತಿ ನೀಡಲಾಗಿರುತ್ತದೆ. ಹಾಗೂ ಯಾವ ದಿನಾಂಕದಂದು ಹಣ ಜಮಾ ಆಗಿದೆ ಎಂಬ ಮಾಹಿತಿಯು ಕೂಡ ಅಲ್ಲೇ ದೊರಕುತ್ತದೆ.

ಹಾಗಾಗಿ, ನೀವು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ನಿಮ್ಮ ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ. ಬ್ಯಾಂಕಿಗಾಗಿ ಹಣವನ್ನು ಪರಿಶೀಲಿಸಿಕೊಳ್ಳಲು ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಮೇಲೆ ನೀಡಿರುವ ಹಂತಗಳನ್ನು ಪಾಲಿಸಿ ನೀವು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ನಿಮ್ಮ ಮೊಬೈಲ್ ನಲ್ಲಿಯೇ ಉಚಿತವಾಗಿ ಪರಿಶೀಲಿಸಿಕೊಳ್ಳಿ.

ಓದುಗರ ಗಮನಕ್ಕೆ: ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ ಹಣವು ಮಹಿಳೆಯರ ಖಾತೆಗೆ ಜಮಾ ಆಗುವುದು ಸ್ವಲ್ಪ ವಿಳಂಬವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಣ ಜಮಾ ಆಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹಾಗಾಗಿ ನಮ್ಮ ಜಾಲತಾಣದ ಚಂದದಾರರಾಗಿರಿ. ಹಣ ಜಮಾ ಆದ ತಕ್ಷಣ ನಿಮಗೆ ತಿಳಿಸಲಾಗುವುದು. ಇಲ್ಲಿಯವರೆಗೂ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *