Gruhalaxmi: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣವು ಮಹಿಳೆಯರ ಖಾತೆಗೆ ಬಾಕಿ ಇರುವ ಎಲ್ಲಾ ಕಂತಿನ ಹಣವು ಜಮ ಆಗಿಲ್ವ? ಅದನ್ನು ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ನೀಡಿರುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ.
ಗೃಹಲಕ್ಷ್ಮಿ ಯೋಜನೆ (Gruhalaxmi)
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಮುಖಾಂತರ ಕರ್ನಾಟಕ ರಾಜ್ಯದ ಮಹಿಳೆಯರು ಅಂದರೆ ಪ್ರತಿ ಮನೆಯ ಯಜಮಾನಿಯು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ 10 ಕಂತಿನ ಹಣವನ್ನು ಪಡೆದುಕೊಂಡಿರುತ್ತಾರೆ. ಇನ್ನು ಮುಂದಿನ ಕಂತಿನ ಹಣ ಯಾವಾಗ ಬರುತ್ತದೆ? ಮತ್ತು ಕೆಲವೊಂದಿಷ್ಟು ಜನರ ಪೆಂಡಿಂಗ್ ಹಣ ಯಾವಾಗ ಜಮಾ ಆಗುತ್ತದೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.
ಒಂದೇ ಸಲ ₹6,000 ಹಣ ಜಮಾ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಯಾಕೆಂದರೆ ಒಂದೇ ಸಲ ಇಂತಹ ಮಹಿಳೆಯರ ಖಾತೆಗೆ 6,000 ಜಮಾ ಆಗಲಿದೆ.
ಗೃಹಲಕ್ಷ್ಮಿ ಯೋಜನೆಯ 3 ಕಂತಿನ ಹಣವು ಪೆಂಡಿಂಗ್ ಇರುವುದು ಎಲ್ಲರಿಗೂ ಗೊತ್ತೇ ಇದೆ. ಕೆಲವೊಂದಿಷ್ಟು ಜನರಿಗೆ ಮಾತ್ರ ಪೆಂಡಿಂಗ್ ಇರುತ್ತದೆ. ಅಂತಹ ಜನರಿಗೆ ಮೇ 31ರ ಒಳಗೆ ಅಂತಹ ಮಹಿಳೆಯರ ಖಾತೆಗೆ 3 ಕಂತಿನ ಒಟ್ಟು ಹಣವಾದ ರೂ.6,000 ಯನ್ನು ಜಮಾ ಮಾಡಲಾಗುತ್ತದೆ.
ಹೌದು ಸ್ನೇಹಿತರೆ ಪೆಂಡಿಂಗ್ ಇರುವಂತಹ ಎಲ್ಲಾ ಹಣವನ್ನು ಮೇ 31ರ ಒಳಗೆ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗೂ ಒಂದು ಕಂತಿನ ಹಣ ಜಮಾ ಆಗದೇ ಇರುವ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಆಗಲಿದೆ ಎಂದು ಕೂಡ ತಿಳಿದು ಬಂದಿದೆ.
ಗೃಹಲಕ್ಷ್ಮಿ (Gruhalaxmi) ಹಣ ಯಾಕೆ ಬಂದಿರುವುದಿಲ್ಲ?
ಗೃಹಲಕ್ಷ್ಮಿ ಯೋಜನೆಯ ಹಣವು ಬರದಿರಲು ಹಲವಾರು ಕಾರಣಗಳಿವೆ. ಇಂತಹದ್ದೇ ನಿಖರವಾದ ಕಾರಣ ಎಂದು ಹೇಳಲು ಅಸಾಧ್ಯ. ಗೃಹಲಕ್ಷ್ಮಿ ಯೋಜನೆಯ ಹಣವು ಯಾಕೆ ಬಂದಿಲ್ಲ ಎಂದು ನಿಖರವಾದ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ. ಅಲ್ಲಿ ನಿಮಗೆ ಸೂಕ್ತವಾದ ಮಾಹಿತಿ ದೊರಕುತ್ತದೆ.
ಬಹುಶಃ ನಿಮ್ಮ ಬ್ಯಾಂಕ್ ಖಾತೆಯಲ್ಲಿ ದೋಷ ಇರಬಹುದು. ಆದ್ದರಿಂದ ನೀವು ನಿಮ್ಮ ಹತ್ತಿರದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ನಿಮ್ಮ ಖಾತೆಯನ್ನು ಸೃಜಿಸಿ, ನಿಮ್ಮ ಖಾತೆಗೆ ಹಣವು ಜಮಾ ಆಗುತ್ತದೆ.