Gruhalaxmi DBT Status Check: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದಲ್ಲಿ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ ಹೇಗೆ ಪರಿಶೀಲಿಸಿಕೊಳ್ಳುವುದು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ ನೋಡಿ.
ಇದೇ ರೀತಿ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಹಾಗೂ ಇದೇ ತರದ ಕರ್ನಾಟಕ ಸರ್ಕಾರದ ಯೋಜನೆಗಳು ಮತ್ತು ಉದ್ಯೋಗದ ಮಾಹಿತಿಗಳು ಅವುಗಳ ಬಗ್ಗೆ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಮಾಹಿತಿ ದಿನನಿತ್ಯ ದೊರಕುತ್ತದೆ.
ಗೃಹಲಕ್ಷ್ಮಿ ಯೋಜನೆಯ ₹2,000 ಹಣ ಪರಿಶೀಲಿಸಿಕೊಳ್ಳುವುದು ಹೇಗೆ?
ಹಂತ 01: ಮೊದಲಿಗೆ ನೀವು ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ(DBT Karnataka) ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
ಹಂತ 02: ನಂತರದಲ್ಲಿ ನಿಮಗೆ ಫಲಾನುಭವಿಯ ಹೆಸರನ್ನು ಆಯ್ಕೆ ಮಾಡಿಕೊಳ್ಳಲು ಆಪ್ಷನ್ ತೆರೆಯುತ್ತದೆ. ಇಲ್ಲವಾದಲ್ಲಿ ನೀವು ಆಧಾರ್ ಕಾರ್ಡ್ ನಂಬರ್ ಹಾಕಿ ಮೊದಲು ಒಟಿಪಿ ವೆರಿಫೈ ಮಾಡಿ ಲಾಗಿನ್ ಆಗಬೇಕು.
ಹಂತ 03: ನಂತರ ನೀವು ಫಲಾನುಭವಿಯನ್ನು ಆಯ್ಕೆ ಮಾಡಿಕೊಂಡು ಎಂ ಪಿನ್ ಅನ್ನು ಹಾಕಿ ಲಾಗಿನ್ ಆಗಬೇಕು.
ಹಂತ 04: ಲಾಗಿನ್ ಆದ ತಕ್ಷಣ ನಿಮಗೆ ಪೇಮೆಂಟ್ ಸ್ಟೇಟಸ್(Payment Status)ಆಪ್ಷನ್ ಕಾಣಿಸುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು.
ಹಂತ 05: ನಂತರದಲ್ಲಿ ನಿಮಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಎರಡು ಹೆಸರು ಕಾಣಿಸುತ್ತವೆ ಅದರಲ್ಲಿ ನೀವು ಗೃಹಲಕ್ಷ್ಮಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 06: ನೀವು ಗೃಹಲಕ್ಷ್ಮಿ ಯೋಜನೆಯ ಪಟ್ಟಿಯ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಯಾವ ತಿಂಗಳು ಹಣ ಜಮಾ ಆಗಿದೆ ಎಂಬ ಮಾಹಿತಿಯು ಹಂತ ಹಂತವಾಗಿ ನೀಡಿರುತ್ತಾರೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ನಲ್ಲಿ ಹಲವಾರು ಹುದ್ದೆಗಳ ನೇಮಕಾತಿಗೆ ಭರ್ಜರಿ ಆಹ್ವಾನ! ನೀವು ಬೇಗನೆ ಅರ್ಜಿ ಸಲ್ಲಿಸಿ!
ಮೇಲೆ ನೀಡಿರುವ ಹಂತಗಳನ್ನು ಅನುಸರಿಸಿ ನೀವು ಡಿ ಬಿ ಟಿ ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.