Gruhalaxmi DBT Status Check: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ರಾಜ್ಯ ಸರ್ಕಾರವು ಚುನಾವಣೆಯ ಪೂರ್ವದಲ್ಲಿ ನೀಡಿದ ಮಾತಿನಂತೆಯೇ ಚುನಾವಣೆಯ ನಂತರದಲ್ಲಿ 5ನೇ ಗ್ಯಾರಂಟಿಯ ಯೋಜನೆಗಳನ್ನು ಆಡಳಿತಕ್ಕೆ ಬಂದು ಒಂದು ವರ್ಷದ ಒಳಗೆಯೆ ಜಾರಿಗೆ ತಂದಿದೆ ಮಹಿಳೆಯರು ಸರ್ಕಾರಿ ಬಸ್ನಲ್ಲಿ ರಾಜ್ಯದೊಳಗೆ ಯಲ್ಲಾ ಕಡೆ ಉಚಿತವಾಗಿಯೇ ಓಡಾಡಲು ಶಕ್ತಿ ಯೋಜನೆ 200 ಯೂನಿಟ್ ವರೆಗೆ ಕರೆಂಟ್ ಉಚಿತವಾಗಿಯೇ ವಿದ್ಯುತ್ ಅನ್ನು ನೀಡುವ ಗೃಹ ಜ್ಯೋತಿ ಯೋಜನೆಯ ವಿದ್ಯಾಭ್ಯಾಸವನ್ನು ಪೂರೈಸಿ ನಿರುದ್ಯೋಗಿಗಳಾಗಿರುವಂತ ಯುವಕರಿಗೆ ಮಾಶಾಸನ ನೀಡುವಂತ ಯುವನಿಧಿ ಯೋಜನೆಯನ್ನು ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತರಲಾಯಿತು.
ಇದರಲ್ಲಿ ಮುಖ್ಯವಾಗಿರುವ ಹಂತ ಮನೆಯ ಯಜಮಾನಿ ಖಾತೆಗೆ ಪ್ರತಿ ತಿಂಗಳಿಗೆ 2000/- ರೂ. ನೀಡುವ ಸರ್ಕಾರದ ಮಹತ್ವದ ಯೋಜನೆಯಾಗಿದೆ.
ಗೃಹ ಲಕ್ಷ್ಮಿ ಯೋಜನೆಯ ಆರಂಭವಾದಾಗಿನಿಂದಲೂ ಕೂಡ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ ಇದುವರೆಗೂ ಸರ್ಕಾರದ ಬಳಿ ಅರ್ಜಿಯನ್ನು ಸಲ್ಲಿಸಿದ ಎಲ್ಲ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಮಾಡಲು ಸಾಧ್ಯವಾಗಿಲ್ಲ ಈಗಾಗಲೇ 6 ಕಂತುಗಳ ಹಣವನ್ನು ಬಿಡುಗಡೆ ಮಾಡಲಾಗಿದೆ.
ಇದೀಗ ಮಾರ್ಚ್ ತಿಂಗಳಲ್ಲಿ ಹಣ ಮಾರ್ಚ್ 4ರಂದು ಸೋಮವಾರದಂದು ಬೆಳಿಗ್ಗೆ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲಿದೆ ಎನ್ನುವ ಮಾಹಿತಿ ಬಂದಿದೆ ಹಾಗಾದರೆ ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳವದು ಹೇಗೆ ಎಂಬುದನ್ನು ಈಗ ತಿಳಿಯೋಣ.
ಫೆಬ್ರವರಿ ತಿಂಗಳಲ್ಲಿ ಮೊದಲ ವಾರದಲ್ಲಿಯೇ 6ನೇ ಕಂತಿನ ಹಣ ಜಮಾ ಮಾಡಲಾಗಿತ್ತು ಆದರೂ ಎಲ್ಲ ಫಲಾನುಭವಿಗಳಿಗೆ ತಲುಪಿಸಲು ಸಾಧ್ಯವಾಗಿಲ್ಲ ಹೀಗಾಗಿಯೇ ಫೆಬ್ರವರಿ ತಿಂಗಳಲ್ಲಿ ಹಣ ಬರದೆ ಇದ್ದವರಿಗೆ ಈ ತಿಂಗಳು ಎರಡೂ ತಿಂಗಳಲ್ಲಿನ ಹಣ ಅಂದರೆ 4,000/- ರೂ. ಜಮಾ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಹೀಗಾಗಿಯೇ ಫೆಬ್ರವರಿಯಲ್ಲಿ ಹಣ ಬಂದಿಲ್ಲ ಎಂದು ಚಿಂತಿಸುವ ಅವಶ್ಯಕತೆ ಇಲ್ಲ ಅಕಸ್ಮಾತ್ ಆಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಗಳು ಇದ್ದರೆ ಕೂಡಲೇ ಹೂಗಿ ಅದನ್ನು ಸರಿಪಡಿಸಿಕೊಳ್ಳಿ.
ಒಂದು ವೇಳೆಗೆ ನೀವು ಗೃಹ ಲಕ್ಷ್ಮಿ ಯೋಜನೆಗೆ ನೀಡಿರುವ ಬ್ಯಾಂಕ್ ಖಾತೆ ಬಂದ್ ಆಗಿದ್ದರೂ ಅದರ ಬದಲಾಗಿಯೆ ಅಂಚೆ ಕಚೇರಿ ಯಲ್ಲಿ ಖಾತೆಯನ್ನು ತೆರೆದು ಅದನ್ನು ಗೃಹ ಲಕ್ಷ್ಮಿ ಯೋಜನೆಯೊಂದಿಗೆ ಜೋಡನೆ ಮಾಡಿ.
ಒಂದು ವೇಳೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೆದ್ದರೂ ಗೃಹ ಲಕ್ಷ್ಮಿ ಯೋಜನೆ ಹಣ ಜಮಾ ಆಗುವುದು ಕಂಡಿತ ಕಷ್ಟ ಆದ್ದರಿಂದಲೇ ಯಾರು ಇದುವರೆಗೂ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಮಾಡಿಲ್ಲವೋ ಅವರು ಕೂಡಲೇ ಹೂಗಿ ಮಾಡಿಕೊಳ್ಳಿರಿ ಇದುವರೆಗೂ ಯಾರು ಅರ್ಜಿಯನ್ನು ಸಲ್ಲಿಸಿಲ್ಲ ಅವರು ಸಹ ಅರ್ಜಿಯನ್ನು ಸಲ್ಲಿಸಿ ಗೃಹ ಲಕ್ಷ್ಮಿ ಹಣ ಜಮಾ ಆಗುವಂತೆ ಮಾಡಿಕೊಳ್ಳಬಹುದು.
ಹಣ ಜಮಾ ಆಗಿದೆ ಎಂದು ಹೇಗೆ ತಿಳಿದುಕೊಳ್ಳುವದು?.
ನಿಮ್ಮ ಹಣ ಜಮಾ ಆಗಿದೆ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ ಅಲ್ಲಿಂದ ಗೃಹ ಲಕ್ಷ್ಮಿ ಯೋಜನೆಯನ್ನು ಆಯ್ಕೆ ಮಾಡಬೇಕು ಅಲ್ಲಿ ನೀವು ಗೃಹ ಲಕ್ಷ್ಮಿ ಯೋಜನೆಯ ಖಾತೆಯ ಸಂಖ್ಯೆಯನ್ನು ನಮೂದಿಸಿನಮೂದಿಸಿದರೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿಯುತ್ತದೆ ಇಲ್ಲವೆ ನೀವು ನಿಮ್ಮ ಬ್ಯಾಂಕ್ ಗೆ ಸಹ ಹೋಗಿ ಪರಿಶೀಲನೆಯನ್ನು ಮಾಡಿಸಿಕೊಳ್ಳಬಹುದು.
ಓದುಗರ ವಿಶೇಷ ಗಮನಕ್ಕೆ: ನಮ್ಮ ಕರ್ನಾಟಕ ಶಿಕ್ಷಣ ತನ್ನ ಓದುಗರು ಯಾವುದೇ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಆದ್ದರಿಂದ ಇನ್ನು ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಅನುಸರಿಸಿ.
ಇಲ್ಲಿವರೆಗೆ ಓದಿದ್ದಕ್ಕೆ ಧನ್ಯವಾದಗಳು: