Gruhalaxmi Scheme good news: ನಮಸ್ಕಾರ ಸ್ನೇಹಿತರೇ,ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆ ಗೃಹಲಕ್ಷ್ಮಿ ಯೋಜನೆ ಈಗಾಗಲೇ 6ನೇ ಕಂತಿನ ಹಣವೂ ಕೂಡ ಬಿಡುಗಡೆ ಆಗಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವೂ ಬಿಡುಗಡೆ ಆಗುತ್ತದೆ ಎಂದು ತಿಳಿಸಲಾಗಿದೆ. ಆದರೆ ಈಗ ಕೆಲವು ಜನರಿಗೆ ಇನ್ನೂ 6ನೇ ಕಂತಿನ ಹಣವೂ ಬಂದಿಲ್ಲ ಎಂದು ಕೂಡ ಹೇಳುತ್ತಿದ್ದಾರೆ.
ಸ್ನೇಹಿತರೆ,ಇದೀಗ ಅದಕ್ಕೂ ಸರ್ಕಾರ ಸ್ಪಷ್ಟನೆಯನ್ನ ನೀಡಿದೆ. ಹಾಗಾದರೆ 6ನೇ ಕಂತಿನ ಹಣ ಬಾರದೆ ಏನು ಮಾಡಬೇಕು ಹಾಗೂ 7ನೇ ಕಂತಿನ ಹಣದ ಜೊತೆ 3 ಗುಡ್ ನ್ಯೂಸ್ ಗಳು ಏನೇನು ಎಂದು ನೋಡೋಣ ಬನ್ನಿ.
ಹೌದು ಸ್ನೇಹಿತರೆ,ಈಗಾಗಲೇ ಫೆಬ್ರುವರಿ ಮೊದಲನೇ ವಾರದಲ್ಲಿಯೇ ಗೃಹಲಕ್ಷ್ಮಿ 6ನೇ ಕಂತಿನ ಹಣವೂ ಬಿಡುಗಡೆ ಆದರೂ ಸಹ ಇನ್ನೂ ಕೆಲವರ ಖಾತೆಗಳಿಗೆ ಹಣವೂ ಇನ್ನೂ ಬಂದಿಲ್ಲ. ಇದಕ್ಕೆ ಕಾರಣ ಏನೆಂದರೆ ಆರನೇ ಕಂತಿನ ಹಣವೂ ಈಗಾಗಲೇ ಬಿಡುಗಡೆ ಆಗಿದೆ ಆದರೆ ಒಮ್ಮೆಲೆ ಎಲ್ಲರ ಖಾತೆಗೆ ಹಣವನ್ನು ಹಾಕಲು ಆಗುತ್ತಿಲ್ಲ ಎಂದು ತಿಳಿಸಲಾಗಿದೆ.
ಒಂದು ದಿನಕ್ಕೆ ಕೇವಲ 20,000 ಫಲಾನುಭವಿಗಳಿಗೆ ಮಾತ್ರ ಹಣ ಹಣ ಹಾಕಲು ಆಗುತ್ತಿದೆ. ಆದರಿಂದ ಕೆಲವರಿಗೆ ಇನ್ನೂ ಹಣ ಬಂದಿಲ್ಲ ಅಂತನೇ ಹೇಳಬಹುದು. ನಿಮ್ಮ ಗೃಹಲಕ್ಷ್ಮಿ ಹಣ ಫೆಬ್ರುವರಿ 29 ರ ತನಕವೂ ಬರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
5 ಕಂತಿನ ವರೆಗೆ ಹಣ ಬಂದಿದ್ದು 6ನೇ ಕಂತಿನ ಹಣ ಬರಲಿಲ್ಲ ಏನಾದರೂ ಟೆಕ್ನಿಕಲ್ ಸಮಸ್ಯೆ ಇಂದ ಹಣ ಬಾರದೆ ಇರಬಹುದೇ ಮತ್ತೆ E-kyc ಮಾಡಿಸಬೇಕಾ ಎಂಬಲ್ಲ ಗೊಂದಲ ಇದ್ದರೆ ದಯವಿಟ್ಟು ಈ ತಿಂಗಳ ಕೊನೆಯ ವರೆಗೂ ನೀವು ಕಾಯಿರಿ. ಇವತ್ತೇ ನಿಮ್ಮ ಖಾತೆಗೆ ಹಣ ಜಮಾ ಆಗಬಹುದು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ತಿಳಿಸಿದ ಮೂರು ಗುಡ್ ನ್ಯೂಸ್ ಏನು?
ಈ ಹಿಂದೆ ರಾಜ್ಯ ಸರ್ಕಾರವು ಫೆಬ್ರುವರಿ 8ನೇ ತಾರಿಖಿನಂದು ಜನಸ್ಪಂದನ ಕಾರ್ಯಕ್ರಮವನ್ನ ವಿಧಾನ ಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ನೇಹಿತರೆ,ಗೃಹ ಲಕ್ಷ್ಮಿ ಯೋಜನೆಯ ಹಣ ಬಾರದೆ ಇರುವುದು ಮತ್ತು ಅರ್ಜಿ ತಿರಸ್ಕಾರ ಗೊಂಡ ಬಗ್ಗೆ ಮತ್ತು ಒಂದು ಕಂತಿನ ಹಣ ಬಂದು ಎಲ್ಲಾ ಕಂತಿನ ಹಣ ಬರದೆ ಇರುವ ಬಗ್ಗೆ ಅನ್ನಭಾಗ್ಯ ಹಣ ಬಾರದೆ ಇರುವ ಬಗ್ಗೆ ಸರ್ಕಾರಕ್ಕೆ ನೇರವಾಗಿ ಮನವಿ ಸಲ್ಲಿಸಲೂ ಏರ್ಪಡಿಸಿದ ಕಾರ್ಯಕ್ರಮ ಇದಾಗಿತ್ತು ಎಂದು ಹೇಳಬಹುದು.
ಹೌದು ಸ್ನೇಹಿತರೆ,ಅಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಹಲವಾರು ಜನರ ಮನವಿಯನ್ನು ಕೇಳಿ ಅಲ್ಲಿಯೇ ಕೆಲವು ಜನರ ಸಮಸ್ಯೆಗೆ ಪರಿಹಾರವನ್ನ ಕೊಡಿಸಿದರು ಅಂತನೇ ಹೇಳಬಹುದು. ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇರುವವರ ಬಳಿ ಅಲ್ಲಿಯೇ ಹೊಸದಾಗಿ ಅರ್ಜಿಯನ್ನು ಪಡೆದುಕೊಳ್ಳಲಾಗಿದೆ ಅಂತನೇ ಹೇಳಬಹುದು. ಅಂತವರಿಗೆ ಮೊದಲನೇ ಕಂತಿನಿಂದ ಹಿಡಿದು 7ನೇ ಕಂತಿನ ವರೆಗೆ ಒಟ್ಟಿಗೆ ಹಣ ಬಿಡುಗಡೆ ಆಗುತ್ತದೆ ಎಂದು ಕೂಡ ಸಿಎಂ ತಿಳಿಸಿದರು.
2ನೇ ಗುಡ್ ನ್ಯೂಸ್!
ಸ್ನೇಹಿತರೆ, 2ನೇ ಗುಡ್ ನ್ಯೂಸ್ ಏನೆಂದರೆ ಕೆಲವು ಜನರಿಗೆ ತೆರಿಗೆ ಪಾವತಿ ಮಾಡದೆ ಇದ್ದರೂ ಇನ್ನೂ ಕೂಡ ಹಣ ಬಂದಿಲ್ಲ. ಒಂದು ಕಂತಿನ ಹಣ ಬಂದು ನಂತರ ಉಳಿದ ಕಂತಿನ ಹಣವೂ ಬರಲಿಲ್ಲ ಎನ್ನುವವರು. ಅಂತವರು ಜಾಲತಾಣಕ್ಕೆ ಹೋಗಿ ಸ್ಟೇಟಸ್ ಚೆಕ್ ಮಾಡಬೇಕು. ಅದರಲ್ಲಿ ಹಣ ಬಾರದಿರುವ ಬಗ್ಗೆ ಮಾಹಿತಿ ಇರುತ್ತದೆ ಎಂದು ತಿಳಿಸಲಾಗಿದೆ.
ಸ್ನೇಹಿತರೆ,ಕೆಲವು ತಾಂತ್ರಿಕ ದೋಷ(Technical issues)ಗಳಿಂದ ಹಣ ಬಾರದೆ ಇದ್ದಾರೆ ಮುಂದಿನ ಕಂತಿನಲ್ಲಿ ಹಣ ಬರುತ್ತದೆ. ತೆರಿಗೆ ಪಾವತಿ ಮಾಡದವರಿಗೆ ಮಾತ್ರ ಮುಂದಿನ ತಿಂಗಳಿನಿಂದ ಒಟ್ಟಿಗೆ ಹಣ ಬರುತ್ತದೆ. ತೆರಿಗೆ ಪಾವತಿ ಮಾಡುತ್ತಾ ಇದ್ದಾರೆ ಹಣವೂ ಬರುವುದಿಲ್ಲ ಎಂದು ತಿಳಿದು ಬಂದಿದೆ.
3ನೇ ಗುಡ್ ನ್ಯೂಸ್!
3ನೇ ಗುಡ್ ನ್ಯೂಸ್ ಎಂದರೆ ಈಗ ಹೊಸದಾಗಿ ರೇಷನ್ ಕಾರ್ಡ್(Ration Card)ಗೆ ಅರ್ಜಿ ಸಲ್ಲಿಸಿದವರು ಹೊಸ ರೇಷನ್ ಕಾರ್ಡ್(Ration Card)ಪಡೆದ ಬಳಿಕ ಅರ್ಜಿ ಸಲ್ಲಿಸಿದ್ದರೆ ಅಂತವರಿಗೆ ಏಳನೇ ಕಂತಿನಿಂದ ನಿರಂತರವಾಗಿ ಪ್ರತಿ ತಿಂಗಳು ಹಣ ಬರುತ್ತದೆ ಎಂದು ಕೂಡ ತಿಳಿಸಲಾಗಿದೆ.