Home loan Schemes From These Banks: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ಮನುಷ್ಯ ಜೀವನದಲ್ಲಿ ಒಂದು ಮುಖ್ಯವಾದ ಗುರಿ ಎಂದರೆ ಸ್ವಂತ ಮನೆಯನ್ನು ಚಿಕ್ಕದಾಗಿನಿಂದಲೂ ಕಾಣುವಂತ ಕನಸು ದುಡಿತದ ಫಲವಾಗಿ ಸ್ವಂತ ಜಾಗದಲ್ಲಿಯೇ ಒಂದು ಮನೆಯನ್ನು ಕಟ್ಟಿಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ ಆದರೆ ಈ ಕನಸನ್ನು ನನಸು ಮಾಡಲು ಬೇಕಾದಷ್ಟು ಹಣದ ಭಾರ ಒಂದು ದೊಡ್ಡ ಸವಾಲಾಗಿಯೇ ಪರಿಣಮಿಸುತ್ತದೆ.
ಇತ್ತೀಚಿನ ದಿನಗಳಲ್ಲಿಯೂ ಸ್ವಂತ ಜಾಗದಲ್ಲಿ ಮನೆಯನ್ನು ಕಟ್ಟುವುದು ತುಂಬಾ ದುಬಾರಿಯಾಗಿದೆ ಆದರೆ ಗೃಹ ಸಾಲದ ಗಳ ಬೇಡಿಕೆ ಯಾವಾಗಲೂ ಇರುತ್ತದೆ ಸಾಲ ಇದ್ದರೆ ಅದಕ್ಕೆ ಬಡ್ಡಿ ಕಟ್ಟುವುದು ಅನಿವಾರ್ಯ ಆದರೆ ಯಾವ ಬ್ಯಾಂಕ್‌ನಿಂದ ಸಾಲವನ್ನು ಪಡೆಯಬೇಕು ಎಷ್ಟು ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಎಂಬುದರ ಗೊಂದಲವಾಗಿದೆ.
ಗೃಹ ಸಾಲ ಪಡೆಯಲು ಯಾವ ಬ್ಯಾಂಕ್ ಸೂಕ್ತ :
ಹೆಚ್ಚಿನ ಬಡ್ಡಿದರ ಸಾಲವನ್ನು ಪಡೆದರೆ ಸಾಲದ ಹೊರೆಯನ್ನು ತುಂಬಾ ಜಾಸ್ತಿಯಾಗುತ್ತದೆ ಆದ್ದರಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುವುದು ತುಂಬಾ ಸೂಕ್ತವಾದ ಗೃಹ ಖರೀದಿಸಲು ಒಂದು ದೊಡ್ಡ ನಿರ್ಧಾರ ಮತ್ತು ಗೃಹ ಸಾಲದ ಆಯ್ಕೆ ಒಂದು ಪ್ರಮುಖ ಭಾಗವಾಗಿದೆ ಯಾವ ಬ್ಯಾಂಕ್ ನಿಮಗೆ ಉತ್ತಮವಾದ ಎಂದು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.
ಈ ವರದಿಯಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ವಿವಿಧ ರೀತಿಯಲ್ಲಿ ಸಾಲಗಳ ಬಗ್ಗೆ ಸರಳವಾದ ಮಾಹಿತಿಯನ್ನು ಒದಗಿಸಲಾಗಿದೆ ಇದು ನಿಮ್ಮ ಸಾಲದ ಅಗತ್ಯಗಳಿಗೆ ಸೂಕ್ತವಾಗಿ ಬ್ಯಾಂಕ್ ಮತ್ತು ಸಾಲದ ಯೋಜನೆಯನ್ನು ಆಯ್ಕೆ ಮಾಡಲು ಸಹಾಯಕ ಮಾಡುತ್ತದೆ. ಮಾಹಿತಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ.
ಬ್ಯಾಂಕ್ ಆಫ್ ಬರೋಡಾ :
ಬ್ಯಾಂಕ್ ಆಫ್ ಬರೋಡಾ ಭಾರತದ ಪ್ರಮುಖ ಮತ್ತು ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ನೆಲೆಸಿದೆ ಖಾತೆದಾರರಿಗೆ ಅನೇಕ ಉತ್ತಮವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವುದುರ ಮೂಲಕ ಈ ಬ್ಯಾಂಕ್ ದೇಶಾದ್ಯಂತ ಬಳಕೆದಾರರನ್ನು ಹೊಂದಿದೆ ಗೃಹ ಸಾಲಕ್ಕಾಗಿ ಹುಡುಕುತ್ತಿರುವವರಿಗೆ ಬ್ಯಾಂಕ್ ಆಫ್ ಬರೋಡಾ ಒಂದು ಉತ್ತಮವಾದ ಆಯ್ಕೆಯಾಗಿದೆ.
ಗೃಹ ಖರೀದಿ ನಿಮ್ಮ ಜೀವನದಲ್ಲಿ ಪ್ರಮುಖ ಹಂತಗಳಲ್ಲಿ ಒಂದಾಗಿದೆ ಬ್ಯಾಂಕ್ ಆಫ್ ಬರೋಡಾ ಈ ನಿಮ್ಮ ಕನಸಿನ ಪ್ರಯಾಣದಲ್ಲಿ ನಿಮ್ಮ ಜೊತೆ ನಿಲ್ಲಲು 8.4% ರಿಂದ 10.6% ವಾರ್ಷಿಕವಾಗಿ ಬಡ್ಡಿಯ ದರದಲ್ಲಿ ಸ್ಪರ್ಧಾತ್ಮಕ ಗೃಹ ಸಾಲವನ್ನು ಯೋಜನೆಗಳನ್ನು ಒದಗಿಸಿಕೊಡುತ್ತದೆ.
ಬ್ಯಾಂಕ್ ಆಫ್ ಇಂಡಿಯಾ :
ಬ್ಯಾಂಕ್ ಆಫ್ ಇಂಡಿಯಾ ನಿಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡಲು 8.30% ವಾರ್ಷಿಕದಿಂದ ಪ್ರಾರಂಭವಾಗುವುದು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲಗಳನ್ನು ನೀಡುತ್ತದೆ 30 ವರ್ಷಗಳವರೆಗೆ ಮರುಪಾವತಿ ಮಾಡಲು ಅವಕಾಶವಿದ್ದು ತಿಂಗಳಿಗೆ ನಿಮ್ಮ ಕಂತುಗಳು ಕಡಿಮೆಯಾಗುತ್ತವೆ.
ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಗೃಹ ಸಾಲವನ್ನು ಯೋಜನೆಗಳನ್ನು ಇಲ್ಲಿ ನೀವು ಹೊಂದುವಿರಿ ನೀವು ಆನ್‌ಲೈನ್ ಅಥವಾ ಬ್ಯಾಂಕಿನಲ್ಲಿ ಶಾಖೆಯಲ್ಲಿ ಸುಲಭವಾಗಿಯೇ ಅರ್ಜಿಯನ್ನು ಸಲ್ಲಿಸಬಹುದು ಮತ್ತು ತ್ವರಿತ ಅನುಮೋದನೆಯನ್ನು ಪಡೆಯಬಹುದು.
ಎಚ್ ಡಿ ಎಫ್‌ಸಿ ಬ್ಯಾಂಕ್ :
ದೇಶದಲ್ಲಿ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ HDFC ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಉತ್ತಮವಾದ ಅವಕಾಶಗಳನ್ನು ನೀಡುತ್ತದೆ HDFC ಬ್ಯಾಂಕ್ನಲ್ಲಿ ಶೇಕಡಾ 8.9 ರಿಂದ ಶೇಕಡಾ 9.6% ರ ನಡುವೆ ಬಡ್ಡಿ ದರವು ಬದಲಾಗುತ್ತದೆ ಇದು ಪ್ರಮಾಣಿತ ಗೃಹ ಸಾಲದ ಬಡ್ಡಿ ದರವಾಗಿದೆ ಆದರೆ ವಿಶೇಷವಾಗಿ ದರವು 8.55 ಪ್ರತಿಶತದಿಂದ 9.10 ಪ್ರತಿಶತದವರೆಗೆ ಬದಲಾಗುತ್ತದೆ ಗೃಹ ಸಾಲವನ್ನು ಸಾಲದಾತ ಅಥವಾ ಬ್ಯಾಂಕ್ ಗೆ ಹಿಂತಿರುಗಿಸಬೇಕಾದ ಅವಧಿಯನ್ನು ಅಧಿಕಾರಾವಧಿ ಎಂದು ಕರೆಯಲಾಗುತ್ತದೆ ಗರಿಷ್ಠ ಸಾಲದ ಅವಧಿಯು 30 ವರ್ಷಗಳು.
ಗೃಹ ಸಾಲದ ವಿಶೇಷತೆಗಳು:
ಶೇ. 8.50 ರಿಂದ ಪ್ರಾರಂಭ ಸಿಬಿಲ್ ಸ್ಕೋರ್ಮ ತ್ತು ಸಾಲದ ಅವಧಿಯ ಆಧಾರದ ಮೇಲೆಯೇ ಸಾಲದ ಮಂಜೂರಿ ನಿಮ್ಮ ಅಗತ್ಯಗಳಿಗೆ ಸೂಕ್ತವಾಗಿ ಯೋಜನೆಗಳ ಆಯ್ಕೆಯನ್ನು ಮಾಡಬಹುದು ಆನ್‌ಲೈನ್ಅ ಥವಾ ಯಾವುದಾದರೂ ಎಚ್‌ಡಿಎಫ್‌ಸಿ ಶಾಖೆಯಲ್ಲಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು ಅರ್ಹತೆಯನ್ನು ಪಡೆದರೆ ಕೆಲವೇ ದಿನಗಳಲ್ಲಿ ಲೋನ್ ಮಂಜೂರಿ ಮಾಡಲಾಗುವುದು ವಿವಿಧ ಮರುಪಾವತಿಯ ಆಯ್ಕೆಗಳು ಲಭ್ಯವಿದೆ.
ಗೃಹ ಸಾಲದ ಒಂದು ದೊಡ್ಡ ಜವಾಬ್ದಾರಿ ಆದ್ದರಿಂದ ಯಾವುದೇ ತರಹದ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ಕ್ರಮಗಳನ್ನು ಪಡೆಯಿರಿ.
ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು :