Hostel: ನಮಸ್ಕಾರ ಎಲ್ಲರಿಗೂ, ಕರ್ನಾಟಕದ ಸಮಸ್ತ ವಿದ್ಯಾರ್ಥಿಗಳಿಗೆ ತಿಳಿಸುವ ವಿಷಯವೇನೆಂದರೆ, ವಿದ್ಯಾರ್ಥಿಗಳು ಹಳ್ಳಿಯಿಂದ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹತ್ತಿರದ ಪಟ್ಟಣಕ್ಕೆ ಹೋಗುತ್ತಾರೆ. ಹಾಗಾಗಿ ಪಟ್ಟಣದಲ್ಲಿ ವಿದ್ಯಾಭ್ಯಾಸಕ್ಕಾಗಿ ಅಡ್ಮಿಶನ್ ಕೂಡ ಮಾಡುತ್ತಾರೆ. ಅಂಥವರು ಹಾಸ್ಟೆಲಿಗೆ ಯಾವ ರೀತಿ ಅರ್ಜಿ ಸಲ್ಲಿಸಿ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸ್ನೇಹಿತರೆ, ಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಕಾಲೇಜು ಅಥವಾ ಉನ್ನತ ಶಿಕ್ಷಣಕ್ಕಾಗಿ ನೀವು ಬೇರೆ ಊರಿಗೆ ಅಡ್ಮಿಶನ್ ಮಾಡಿದರೆ ನೀವು ಹಾಸ್ಟೆಲ್ ನಲ್ಲಿ ಇರಬಹುದಾಗಿರುತ್ತದೆ. ಯಾಕೆಂದರೆ ದಿನನಿತ್ಯ ಕೂಡ ಓಡಾಡುವುದು ಅಂತಹ ಸಮಯದಲ್ಲಿ ಸೂಕ್ತವೆನಿಸುವುದಿಲ್ಲ. ಆದ್ದರಿಂದ ಹಾಸ್ಟೆಲನ್ನು ಮಾಡಿಕೊಂಡು ಅಲ್ಲೇ ಉಳಿದುಕೊಳ್ಳುವುದು ಉತ್ತಮವಾದ ಉಪಾಯ ಎನಿಸುತ್ತದೆ.
ಉಚಿತ ಹಾಸ್ಟೆಲ್ {Hostel} ಪ್ರವೇಶಕ್ಕೆ ಅರ್ಜಿ ಆಹ್ವಾನ!
ಹಾಗಾಗಿ ನೀವು ಉಚಿತ ಹಾಸ್ಟೆಲ್ ಪ್ರವೇಶ ಪಡೆದುಕೊಳ್ಳಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಿ ಕೊಟ್ಟಿರುತ್ತೇನೆ. ನೀವು ವಿದ್ಯಾರ್ಥಿ ನಿಲಯಕ್ಕೆ ಉಚಿತವಾಗಿ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿರುತ್ತದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಪಾರ್ಸಿ ಹಾಗೂ ಇನ್ನಿತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಎಸ್ ಟಿ ಮತ್ತು ಎಸ್ ಸಿ ವರ್ಗದ ವಿದ್ಯಾರ್ಥಿಗಳು ಇಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ಹಿಂದಿನ ವರ್ಷದ ಅಂಕಪಟ್ಟಿ
- ಆಧಾರ್ ಕಾರ್ಡ್
- ವಿದ್ಯಾರ್ಥಿಯ ಎಸ್‌ಎಸ್‌ಪಿ ಐಡಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮನೆಯ ವಿಳಾಸದ ಪುರಾವೆ
- ಮೊಬೈಲ್ ನಂಬರ್
- ಕಾಲೇಜು ನೋಂದಣಿ ಅಥವಾ ರಿಜಿಸ್ಟರ್ ನಂಬರ್
ಮೇಲಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ಉಚಿತ ಹಾಸ್ಟೆಲ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ವಿವರವನ್ನು ಈ ಕೆಳಗೆ ನೀಡಿರುತ್ತೇನೆ ನೋಡಿ. ಕೆಳಗೆ ನೀಡಿರುವ ಹಂತಗಳನ್ನು ಪಾಲಿಸುವ ಮೂಲಕ ನೀವು ಉಚಿತ ಹಾಸ್ಟೆಲ್ ಪ್ರವೇಶ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
{Hostel} ಅರ್ಜಿ ಸಲ್ಲಿಸುವುದು ಹೇಗೆ?
- ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
- ನಂತರ ನೀವು ಬಿಸಿಎಂ ಹಾಸ್ಟೆಲ್ ಅಪ್ಲಿಕೇಶನ್ ಆಪ್ಶನ್ ಮೇಲೆ ಒತ್ತಬೇಕು.
- ನಂತರ ನೀವು ಅಲ್ಲಿ ಸೈನ್ ಇನ್ ಆಗುವ ಮೂಲಕ ಮಾಹಿತಿಗಳನ್ನು ಎಂಟರ್ ಮಾಡಿ.
- ಅಗತ್ಯವಾದ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಎಲ್ಲಾ ನಿಮ್ಮ ವಿವರಗಳನ್ನು ಸರಿಯಾಗಿ ತುಂಬಿ.
- ಭರ್ತಿ ಮಾಡಿದ ವಿವರಗಳನ್ನು ಒಂದು ಸಲ ಚೆಕ್ ಮಾಡಿಕೊಳ್ಳಿ ಮತ್ತು ಅರ್ಜಿಯನ್ನು ಸಲ್ಲಿಸಿ.
ಸ್ನೇಹಿತರೆ, ಅರ್ಜಿ ಸಲ್ಲಿಸಲು ನಿಮಗೆ ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಬೇಕಾದ ದಾಖಲೆಗಳನ್ನು ಒದಗಿಸಿದರೆ ನಿಮಗೆ ಅರ್ಜಿಯನ್ನು ಸಲ್ಲಿಸಲಾಗುವುದು.
{Hostel} ಅರ್ಜಿ ಸಲ್ಲಿಸಲು ಕೊನೆ ದಿನಾಂಕಗಳು:
- ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ – 31/07/2024
- ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ – 05/08/2024
ಮೇಲೆ ನೀಡಿರುವ ಕೊನೆಯ ದಿನಾಂಕದೊಳಗೆ ಮಾತ್ರ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಬೇಗನೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.
ಇದನ್ನೂ ಓದಿ: Google Pay Loan: ಗೂಗಲ್ ಪೇ ಬಳಕೆದಾರರಿಗೆ 5 ನಿಮಿಷದಲ್ಲಿ ಸಿಗಲಿದೆ ₹15,000 ವರೆಗೆ ಸಾಲ ಸೌಲಭ್ಯ!