How to apply for voter ID via mobile: ನಮಸ್ಕಾರ ಸ್ನೇಹಿತರೇ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಮೊಬೈಲ್ ನಲ್ಲಿಯೇ ವೋಟರ್ ಐಡಿಯನ್ನು ಯಾವ ರೀತಿ ಪಡೆದುಕೊಳ್ಳಬೇಕು ಮತ್ತು ಹೀಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ.
ನಿಮ್ಮ ಮೊಬೈಲ್ನಲ್ಲೇ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಿ!
ವೋಟಿಂಗ್(Voting)ಮಾಡುವುದು ಪ್ರತಿ ಭಾರತೀಯನ ಹಕ್ಕು ಆಗಿದೆ .18 ವರ್ಷ ಮೇಲ್ಪಟ್ಟ ಎಲ್ಲಾ ಯುವಕ ಮತ್ತು ಯುವತಿಯರು ವೋಟರ್ ಐಡಿ(Voter ID)ಯನ್ನು ಹೊಂದಿರಬೇಕು. ನಿಮಗೆ ಬೇಕಾದ ದೇಶದ ಭವಿಷ್ಯವನ್ನು ರೂಪಿಸುವ ಅಭ್ಯರ್ಥಿಯನ್ನು ಆರಿಸಿ ತರಬೇಕು.ಅದು ಎಲ್ಲರ ಹಕ್ಕು ಎಂದೇ ಹೇಳಬಹುದು.
Voter ID ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಮೊಬೈಲ್ ನಂಬರ್
- ಇಮೇಲ್ ಐಡಿ
- ಆಧಾರ್ ಕಾರ್ಡ್
- ಜನ್ಮ ದಿನಾಂಕ
- ಮನೆಯಲ್ಲಿಯವರ ಯಾರದಾದರೂ ವೋಟರ್ ಐಡಿ ಬೇಕು (for reference)
ಮೊದಲು ಈ ರೀತಿ ರಿಜಿಸ್ಟರ್ ಆಗಿ!
ಮೊದಲನೆಯದಾಗಿ ಕೆಳಗೆ ನೀಡಿರುವ ವೋಟರ್ಸ್ ನ ಅಧಿಕೃತ ಜಾಲತಾಣದ ಮೇಲೆ ಕ್ಲಿಕ್ ಮಾಡಬೇಕು.
ಅದಾದ ಮೇಲೆ ಅಲ್ಲಿ ಫಿಲ್ ಫಾರಂ 6 ಅಂತ ಇರುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು.
ತದನಂತರ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ಎಂಟರ ಮಾಡಬೇಕು.
ನಂತರದಲ್ಲಿ ಅಲ್ಲಿ ಒಂದು ಹೊಸ ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಹೆಸರು ಮತ್ತು ಪಾಸ್ವರ್ಡ್ ಹಾಕಬೇಕು. ಮತ್ತು ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. OTP ಹಾಕಿ ಲಾಗಿನ್ ಆಗಿ.
ಅರ್ಜಿ ಸಲ್ಲಿಸಲು ಈ ಮಾರ್ಗಗಳನ್ನು ಅನುಸರಿಸಿ!
ರೆಜಿಸ್ಟರ್(Register)ಆದ ನಂತರ ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ಬಳಸಿಕೊಂಡು ನೀವು ಲಾಗಿನ್ ಆಗಬೇಕು.
ಇದರ ನಂತರ ಅಲ್ಲಿ ಫಾರ್ಮ್ 6 ಮೇಲೆ ಕ್ಲಿಕ್ ಮಾಡಬೇಕು. ಈಗ ಫಾರ್ಮ್ ಓಪನ್ ಆಗುತ್ತದೆ ನೋಡಿ.
ಅಲ್ಲಿ ಮೊದಲು ರಾಜ್ಯ ಮತ್ತು ಚುನಾವಣೆ ಕ್ಷೇತ್ರಗಳನ್ನು ಸೆಲೆಕ್ಟ್ ಮಾಡಿಕೊಂಡು. ನೆಕ್ಸ್ಟ್ ಅಂತ ಕೊಡಬೇಕು.
ಅದಾದ ನಂತರ ನಿಮ್ಮ ಪರ್ಸನಲ್ ಡೀಟೇಲ್ಸ್ ಅನ್ನು ಭರ್ತಿ ಮಾಡಬೇಕು ಎಂದು ಕೂಡ ತಿಳಿಸಲಾಗಿದೆ.
Choose file ಮೇಲೆ ಕ್ಲಿಕ್ ಮಾಡಬೇಕು ನಿಮ್ಮ ಪಾಸ್ಪೋರ್ಟ್ ಅಳತೆ ಭಾವ ಚಿತ್ರ ಅಪ್ಲೋಡ್ ಮಾಡಬೇಕು. ಅದಾದ ನಂತರ ನೆಕ್ಸ್ಟ್ ಅನ್ನು ಅಂತ ಒತ್ತಿ.
ಅದಾದ ನಂತರ ನಿಮ್ಮ ಮನೆಯವರ ಯಾರದಾದರೂ ಒಬ್ಬರ ವೋಟರ್ ಡೀಟೇಲ್ಸ್ ಅನ್ನ ರೆಫರೆನ್ಸ್ ಸಲುವಾಗಿ ಅಪ್ಲೋಡ್ ಮಾಡಬೇಕು. ನಂತರ ನೀವು ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಬೇಕು.
ಸ್ನೇಹಿತರೆ,ಇದಾದ ನಂತರ ಕಾಂಟಾಕ್ಟ್ ಡೀಟೇಲ್ಸ್ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ಅನಂತರ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.
ಬಂದ ಓಟಿಪಿಯನ್ನು ಹಾಕಿ ವೇರಿಫೈ ಮಾಡಬೇಕು.
ಇದೆಲ್ಲ ಆದ ನಂತರ ನಿಮ್ಮ ಇಮೇಲ್ ಐಡಿಯನ್ನು ಹಾಕಿ ನೆಕ್ಸ್ಟ್ ಅಂತ ಕೊಡಬೇಕು.
ಈ ಮೇಲೆ ನೀಡಿರುವ ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಮತ್ತು ಈ ಕೆಳಗೆ ಇರುವ ಹಂತಗಳನ್ನು ನೀವು ಅನುಸರಿಸಬೇಕು.
ಅದಾದ ಮೇಲೆ ಜನ್ಮ ದಿನಾಂಕದ ಪ್ರಮಾಣಕ್ಕಾಗಿ ನಿಮ್ಮ ಯಾವುದಾದರೂ ಒಂದು ದಾಖಲೆಯನ್ನು ಕೊಡಬೇಕು ಮಾಡಬೇಕು ಅದಾದ ನಂತರ ನೆಕ್ಸ್ಟ್ ಅಂತ ಕೊಡಿ.
ಅದಾದ ನಂತರ ನಿಮ್ಮ ಆಧಾರ್ ನಲ್ಲಿರುವ ವಿಳಾಸವನ್ನು ಭರ್ತಿ ಮಾಡಬೇಕು. ಅದರ ಫೋಟೋವನ್ನು ಕೂಡ upload ಮಾಡಬೇಕು.
ಅದಾದ ನಂತರ Preview ಮೇಲೆ ಕ್ಲಿಕ್ ಮಾಡಬೇಕು ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದೆ ಎಂದು ನೀವು ಖಚಿತಪಡಿಸಿಕೊಳ್ಳಿ.
ಎಲ್ಲ ಮಾಹಿತಿಗಳು ಸರಿಯಾಗಿದ್ದರೆ ಕೊನೆಯದಾಗಿ ನೀಡಿರುವ ಕ್ಯಾಪ್ಚ(Captcha)ವನ್ನು ಭರ್ತಿ ಮಾಡಬೇಕು ಸಬ್ಮಿಟ್(Submit)ಅಂತ ಕೊಡಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
ಇದೆಲ್ಲ ಆದ ನಂತರ ನಿಮ್ಮ ಈ ಅರ್ಜಿ ಚುನಾವಣಾ ಆಯೋಗಕ್ಕೆ ತಲುಪುತ್ತದೆ, 15 ದಿನಗಳು ಅಲ್ಲಿ ತಿಂಗಳಿನಲ್ಲಿ ನಿಮ್ಮ ವೋಟರ್ ಐಡಿ ಮನೆಗೆ ಪೋಸ್ಟ್ ಮುಖಾಂತರ ಬಂದು ತಲುಪುತ್ತದೆ ಎಂದು ತಿಳಿಸಲಾಗಿದೆ.