Insurance: ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಅವಕಾಶ! Crop Insurance Application
ನಮಸ್ಕಾರ ಎಲ್ಲರಿಗೂ ನಿಮಗೆಲ್ಲ ತಿಳಿದಿರುವ ಹಾಗೆ ಮುಂಗಾರು ಬೆಳೆ ವಿಮೆ(Crop Insurance)ಯ ಅರ್ಜಿ ಸಲ್ಲಿಕೆಯು ಈಗಾಗಲೇ ಆರಂಭವಾಗಿದ್ದು, ಮೊದಲ ಹಂತದಲ್ಲಿ ಈ ಜಿಲ್ಲೆಯವರು ಬೆಳೆ ವಿಮೆ(Insurance) ಯನ್ನು ತುಂಬಬಹುದಾಗಿದೆ ಎಂದು ತಿಳಿಸಲಾಗಿದೆ. ಇದರಲ್ಲಿ ನಿಮಗೆ ಅವಕಾಶವಿದೆಯಾ ಎಂಬುದು ತಿಳಿದುಕೊಳ್ಳಿ.
ಹೌದು ಸ್ನೇಹಿತರೆ, 2024 ಹಾಗೂ 25 ನೇ ಸಾಲಿನ ಮುಂಗಾರು ಬೆಳೆ ವಿಮೆಯು ಆರಂಭವಾಗಿದ್ದು ಕೆಲವು ಜಿಲ್ಲೆಗಳಲ್ಲಿ ಕೊನೆಯ ದಿನಾಂಕವನ್ನು ಕೂಡ ಬಿಡುಗಡೆ ಮಾಡಲಾಗಿದೆ. ನೀವು ಕೂಡ ಬೆಳೆ ವಿಮೆಯನ್ನು ಮಾಡಿಸುವುದು ಎಷ್ಟು ಸೂಕ್ತ ಎಂಬುದನ್ನು ತಿಳಿದುಕೊಳ್ಳಿ.
Crop Insurance Online Application
ಸ್ನೇಹಿತರೆ, ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಎಲ್ಲಾ ರೈತರಿಗೆ ಬೆಳೆ ವಿಮೆಯನ್ನು ಮಾಡಿಸಲು ಕೊನೆಯ ದಿನಾಂಕವನ್ನು ಬಿಡುಗಡೆ ಮಾಡಲಾಗಿರುತ್ತದೆ. ಫಸಲ್ ಬಿಮಾ ಯೋಜನೆ ಅಡಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿ ಅಥವಾ ಬೆಳೆ ನಷ್ಟ ಉಂಟಾದಲ್ಲಿ ರೈತರಿಗೆ ಆರ್ಥಿಕವಾಗಿ ಭದ್ರತೆಯನ್ನು ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ಪ್ರಕೃತಿ ವಿಕೋಪಗಳಿಂದ ಅಂದರೆ ಅತಿಯಾದ ಮಳೆ ಹಾಗೂ ಬರಗಾಲದಿಂದ ಉಂಟಾಗುವ ಬೆಳೆ ಹಾನಿಗೆ ಪ್ರತಿ ಹೆಕ್ಟರ್ ಭೂಮಿಗೆ ₹29,000 ದಿಂದ ಹಿಡಿದು ₹86,000ದವರೆಗಿನ ಆರ್ಥಿಕವಾದ ನೆರವನ್ನು ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ ಪ್ರತಿ ವರ್ಷವೂ ಕೂಡ ರೈತರು ಬೆಳೆ ವಿಮೆಯನ್ನು ಮಾಡಿಸಿಕೊಳ್ಳುವುದು ಅಗತ್ಯವಾದ ಮತ್ತು ಅಮೂಲ್ಯವಾದ ವಿಷಯವಾಗಿರುತ್ತದೆ.
ಬೆಳೆ ವಿಮೆಯ ಹಣ ಯಾವ ರೀತಿ ಪಡೆದುಕೊಳ್ಳಬೇಕು?
ಪ್ರಕೃತಿ ವಿಕೋಪಗಳಿಂದ ಅತಿಯಾದ ಮಳೆ ಅಥವಾ ಬರಗಾಲ ಸೇರಿದಂತೆ ಇನ್ನೂ ಹಲವಾರು ಪ್ರಕೃತಿ ವಿಕೋಪಗಳಿಂದ ರೈತರಿಗೆ ನಾವು ಬೆಳೆದಂಥ ಬೆಳೆಯಲ್ಲಿ ನಷ್ಟಗಳು ಉಂಟಾದರೆ ಅದನ್ನು ನೀವು ಫಸಲು ಭೀಮಾ ಯೋಜನೆಯಡಿಯಲ್ಲಿ ನೇರವಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.
ಸ್ನೇಹಿತರೆ ಇನ್ನೇನು ಕೆಲವೇ ಜಿಲ್ಲೆಗಳಲ್ಲಿ ಬೆಳಗಿನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ. ಅಂತವರು ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣ ಸಂರಕ್ಷಣೆ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಕೂಡ ಒಂದು ಸಲ ಭೇಟಿ ನೀಡಿ.