Kalika bhagya Scholarship: ನಮಸ್ಕಾರ ಸ್ನೇಹಿತರೆ,ಕರ್ನಾಟಕ ಕಟ್ಟಡ & ಇತರ ಕಾರ್ಮಿಕರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಮಿಕ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಲು ಕಲಿಕಾ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸ್ನೇಹಿತರೆ,ಅತಿ ಸಣ್ಣ ವಯಸ್ಸಿನಿಂದ ಹಾಗೆ ಅಂದ್ರೆ ಆರಂಭಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ಪಡೆದುಕೊಳ್ಳುವರೆಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುಕೊಳ್ಳುವವರ ಕಾರ್ಮಿಕರ ಕುಟುಂಬದ ಮಕ್ಕಳಿಗೆ, ಅಗತ್ಯ ಇರುವ ಆರ್ಥಿಕ ನೆರವನ್ನು ಒದಗಿಸುವ ಸಲುವಾಗಿ ಈ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.
ಕಲಿಕಾ ಸ್ಕಾಲರ್ಶಿಪ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ಸಂಬಂಧಪಟ್ಟ ಕಚೇರಿಗಳಿಗೆ ಹೋಗಿ ನೇರವಾಗಿ ಅಗತ್ಯ ಇರುವ ದಾಖಲೆಗಳನ್ನು(Documents)ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಕಟ್ಟಡ ಕೆಲಸದಲ್ಲಿ ತೊಡಗಿಕೊಂಡ ಕುಟುಂಬದ ದೃಢಿಕರಣ ಪ್ರಮಾಣ ಪತ್ರ ನೀಡಿ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್(Scholarship)ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.
ಯಾವ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ?
- 3-5 ವರ್ಷದ ನರ್ಸರಿ ಮಕ್ಕಳಿಗೆ ವಾರ್ಷಿಕ ರೂ. 5,000 ರೂಪಾಯಿ
- 1-4 ತರಗತಿ ವಿದ್ಯಾರ್ಥಿಗಳಿಗೆ ರೂ 5,000 ರೂಪಾಯಿ
- 5- 8 ನೇ ತರಗತಿಯ ವಿದ್ಯಾರ್ಥಿಗಳಿಗೆ ರೂ 8,000 ರೂಪಾಯಿ
- 9 -10 ನೇ ತರಗತಿ ವಿದ್ಯಾರ್ಥಿಗಳಿಗೆ ರೂ 12,000 ರೂಪಾಯಿ
- PUC ವಿದ್ಯಾರ್ಥಿಗಳಿಗೆ ರೂ 15,000ರೂಪಾಯಿ
- ಡಿಪ್ಲೋಮೋ ವಿದ್ಯಾರ್ಥಿಗಳಿಗೆ ರೂ 20,000ರೂಪಾಯಿ
- ಡಿ ಎಡ್ ವಿದ್ಯಾರ್ಥಿಗಳಿಗೆ 25,000 ರೂಪಾಯಿ
- ಬಿ ಎಡ್ ವಿದ್ಯಾರ್ಥಿಗಳಿಗೆ ರೂ 35000ರೂಪಾಯಿ
- ಪದವಿ ವಿದ್ಯಾರ್ಥಿಗಳಿಗೆ ರೂ. 25000.ರೂಪಾಯಿ
- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೂ 60,000. ರೂಪಾಯಿ
IIT, IIM ಮೊದಲಾದ ಕೋರ್ಸ್ಗಳಿಗೆ ಪಾವತಿಸಲಾಗಿರುವ ಬೋಧನಾ ಶುಲ್ಕವನ್ನು ಸ್ಕಾಲರ್ಶಿಪ್ ನೀಡಲಾಗುವುದು ಎಂದು ತಿಳಿಸಲಾಗಿದೆ.