ನಮಸ್ಕಾರ ಸ್ನೇಹಿತರೆ… ಈಗಾಗಲೇ ಈ ವರ್ಷದ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವೂ ಕೂಡ ಪ್ರಕಟಣೆ ಆಗಿದೆ. ಯಾವ ವಿದ್ಯಾರ್ಥಿಗಳು ಎಷ್ಟು ಅಂಕಗಳನ್ನು ಗಳಿಸಿದ್ದಾರೆ ಎಂಬುದು ಕೂಡ ಖಚಿತವಾಗಿದೆ. ಕೆಲ ವಿದ್ಯಾರ್ಥಿಗಳು ಅತ್ಯುತ್ತಮವಾದ ಅಂಕಗಳನ್ನು ಕೂಡ ಗಳಿಸಿ ಡಿಸ್ಟಿಂಕ್ಷನ್ ಕೂಡ ಬಂದಿದ್ದಾರೆ. ಅಂತವರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. ನೀವು ಈ ಮಾಹಿತಿಯಂತೆ ಅರ್ಜಿ ಸಲ್ಲಿಸಿದರೆ ನಿಮಗೂ ಕೂಡ ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನಿಸಲಾಗುತ್ತದೆ.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ !
ಈ ಒಂದು ಮಾಹಿತಿಯನ್ನು ಪಿಯುಸಿ ವಿದ್ಯಾರ್ಥಿಗಳ ಪೋಷಕರು ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೋಷಕರು ಓದುತ್ತಿದ್ದರೆ, ನಿಮ್ಮ ಮಕ್ಕಳಿಗೂ ಕೂಡ ಈ ಒಂದು ಪುರಸ್ಕಾರಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿ ಎಂದು ತಿಳಿಸಿ. ಅವರು ಕಡ್ಡಾಯವಾಗಿ 90 ಪರ್ಸೆಂಟ್ ಅಂಕವನ್ನು ಗಳಿಸಿರಬೇಕು. 90% ಅಧಿಕವಾದ ಹೆಚ್ಚಿನ ಅಂಕವನ್ನು ಗಳಿಸಿದಂತಹ ವಿದ್ಯಾರ್ಥಿಗಳಿಗೆ ಹೊಸದುರ್ಗ ಶಾಖ ಮಠವು ಅರ್ಜಿಯನ್ನು ಕೂಡ ಆಹ್ವಾನ ಮಾಡಿದೆ. ಪ್ರತಿಭಾವಂತರು ಈ ಪುರಸ್ಕಾರವನ್ನು ಸ್ವೀಕರಿಸುತ್ತಾರೆ.
ಪ್ರಸ್ತುತವಾಗಿ ಪರೀಕ್ಷೆ ನಡೆದಿರುವುದು 2023-24ನೇ ಸಾಲಿನ ಪರೀಕ್ಷೆ ಒಂದು, ಈ ಮೊದಲನೇ ಬಾರಿಗೆ ಪರೀಕ್ಷೆಯನ್ನು ಬರೆದು ಪರೀಕ್ಷೆಯಲ್ಲಿ 90 ಕ್ಕಿಂತ ಹೆಚ್ಚಿನ ಪ್ರತಿಶತ ಅಂಕವನ್ನು ಗಳಿಸಿದಂತಹ ವಿದ್ಯಾರ್ಥಿಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳು ಎಂದು ಕರೆಯಲಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಹೊಸದುರ್ಗ ಶಾಖ ಮಟವು ಪ್ರತಿಭಾ ಪುರಸ್ಕಾರವನ್ನು ನೀಡಬೇಕು ಎಂದು ಅರ್ಜಿಯನ್ನು ಕೂಡ ಆಹ್ವಾನ ಮಾಡಿದ್ದಾರೆ.
ಯಾರು ಈ ವರ್ಷದಂದು ಮೊದಲನೇ ಬಾರಿಗೆ ಪಿಯುಸಿ ಪರೀಕ್ಷೆಯಲ್ಲಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದು 90 ಕ್ಕಿಂತ ಹೆಚ್ಚಿನ ಪರ್ಸೆಂಟೇಜ್ ಅಂಕಗಳನ್ನು ಗಳಿಸಿದ್ದಾರೋ ಅಂತವರಿಗೆ ಈ ರೀತಿಯ ಒಂದು ಪ್ರತಿಭಾ ಪುರಸ್ಕಾರ ಕೂಡ ದೊರೆಯುತ್ತದೆ. ಈ ಪ್ರತಿಭಾ ಪುರಸ್ಕಾರದಲ್ಲಿ ಯಾವ ದಿನಾಂಕವನ್ನು ನಿಗದಿ ಮಾಡುತ್ತದೆಯೋ ಮಟವು ಆ ದಿನಾಂಕದಲ್ಲಿ ನೀವು ಆ ಒಂದು ಸ್ಥಳಕ್ಕೆ ತೆರಳಿ ಪ್ರತಿಭಾ ಪುರಸ್ಕಾರವನ್ನು ಕೂಡ ಸ್ವೀಕರಿಸಬಹುದು. ನೀವು ಕೂಡ ಅಷ್ಟು ಅಂಕವನ್ನು ಗಳಿಸಿದ್ದೀರಿ ಎಂದರೆ, ಕೂಡಲೇ ಈ ಮಾಹಿತಿಯಂತೆ ಅರ್ಜಿ ಸಲ್ಲಿಕೆ ಮಾಡಿರಿ.
ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಕಡ್ಡಾಯ.
- ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಜೆರಾಕ್ಸ್
- ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪಾಸಾದ ಇರುವಂತಹ ಅಂಕಪಟ್ಟಿ ಜೆರಾಕ್ಸ್
- ಹಾಗೂ ಪ್ರಸ್ತುತ ಬೇರೆ ಕಾಲೇಜುಗಳಿಗೆ ಹೋಗುವ ಸಂದರ್ಭದಲ್ಲಿ ವರ್ಗಾವಣೆ ನಕಲಿ ಪತ್ರವನ್ನು ಕೂಡ ಸಲ್ಲಿಕೆ ಮಾಡಬೇಕು. ಆ ವರ್ಗಾವಣೆ ಪತ್ರದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೂಡ ಬರೆದು, ಹಾಗೂ ನಿಮ್ಮ ಖಾಯಂ ವಿಳಾಸದ ಮಾಹಿತಿಯನ್ನು ಕೂಡ ಬರೆದು ಸಲಿಕೆ ಮಾಡಿರಬೇಕಾಗುತ್ತದೆ.
ಜುಲೈ 12 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಎಲ್ಲಾ 10ನೇ ತರಗತಿ & ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡಬೇಕಾಗಿರುವಂತಹ ವಿಳಾಸ :- ಶ್ರೀಮದ್ ಜಗದ್ಗುರು ರೇವಣಸಿದ್ಧೇಶ್ವರ ಸಿಂಹಾಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠ, ಕನಕ ಭವನ, 10ನೇ ಅಡ್ಡ ರಸ್ತೆ ಚಂದ್ರಾ ಲೇಔಟ್, 1ನೇ ಹಂತ, ಬೆಂಗಳೂರು – 560072.
ಪ್ರತಿಭಾ ಪುರಸ್ಕಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕು ಎಂದರೆ :- 9036597972, 9916974936 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…