Krishibhagya yojane: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ಕೃಷಿ ಭಾಗ್ಯದ ಯೋಜನೆಯಡಿ ಕರ್ನಾಟಕ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದ್ದು ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯಧನವನ್ನು ನೀಡುವಂತ ಉದ್ದೇಶವನ್ನು ಹೊಂದಿದೆ ಈ ಯೋಜನೆಯಡಿ ರೈತರಿಗೆ ಕೃಷಿ ಉಪಕರಣಗಳು ಮತ್ತು ಬೀಜಗಳು ಗೊಬ್ಬರ ಮತ್ತು ಇತರ ಅಗತ್ಯವಿರುವಂತಹ ವಸ್ತುಗಳಿಗೆ ಸಹಾಯಧನವನ್ನು ಲಭ್ಯವಾಗುತ್ತದೆ ಕೃಷಿ ಭಾಗ್ಯದ ಯೋಜನೆಯು ನಿರ್ದಿಷ್ಟವಾಗಿ ಕರ್ನಾಟಕದಲ್ಲಿ ಮಳೆಯಾಧಾರಿತ ಕೃಷಿಯನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿದೆ 2024 ರ ಪ್ರಮುಖವಾಗದ ವಿವರಗಳನ್ನು ಕೆಳಗಡೆವಿವರಿಸಲಾಗಿದೆ.
[Krishibhagya yojane]ಕೃಷಿ ಭಾಗ್ಯ ಯೋಜನೆಯಡಿ :
ಕೃಷಿ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಮಳೆನೀರಿನ ಸಂರಕ್ಷಣೆಯ ಮೂಲಕ ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ 2023-24ರ ಸಾಲಿನಲ್ಲಿ ಕರ್ನಾಟಕದ 24 ಜಿಲ್ಲೆಗಳಲ್ಲಿ ವ್ಯಾಪಿಸಿರುವಂತ 106 ತಾಲೂಕುಗಳ ರೈತರನ್ನು ಗುರಿಯಾಗಿಸಿಕೊಂಡಿದೆ.
Gruhalakshmi money news: ಕೆಲವು ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮಾ ಆಗದೆ ಇರಲು ಇಲ್ಲಿದೆ ಕಾರಣ!
ಈ ಕೃಷಿ ಭಾಗ್ಯಯೋಜನೆಯ ಪ್ರಮುಖ ಪ್ರಯೋಜನಗಳು:
ಶುಷ್ಕ ಕಾಲದ ಸಮಯದಲ್ಲಿ ನೀರಾವರಿಗಾಗಿ ಮಳೆನೀರನ್ನು ಸಂಗ್ರಹಿಸಲು ಕೃಷಿ ಹೊಂಡಗಳನ್ನು (ಕೃಷಿ ಹೊಂಡಾ) ನಿರ್ಮಿಸಲು ಸಹಾಯಧನವನ ಲಿಫ್ಟ್ ಪಂಪ್‌ಗಳು ಮೋಟಾರ್‌ಗಳು ಮತ್ತು ಕೃಷಿಯಲ್ಲಿ ಹೊಂಡಗಳಿಗೆ ನೆರಳು ಪರದೆಯಂತಹ ಉಪಕರಣಗಳನ್ನು ಖರೀದಿಸಲು ಅನುದಾನದ ಸಮರ್ಥವಾಗಿ ನೀರಿನ ಬಳಕೆಗಾಗಿ ಆಧುನಿಕ ನೀರಾವರಿಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ ಹೌದು ಈ ಕೃಷಿಭಾಗ್ಯ ಯೋಜನೆಯಡಿ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ಕ್ಷೇತ್ರ ಬದು ನಿರ್ಮಾಣ ಕೃಷಿ ಹೊಂಡದಲ್ಲಿ ಸುತ್ತಲೂ ತಂತಿ ಬೇಲಿಯ ನಿರ್ಮಾಣ ಕೃಷಿ ಹೊಂಡದಿಂದ ನೀರನ್ನು ಎತ್ತಲು ಪಂಪ್ ಸೆಟ್ ಖರೀದಿಸಲು ಅವಕಾಶ ಬೆಳೆಗೆ ನೀರು ಹಾಯಿಸಲು ತುಂತುರು ಹನಿಯ ನೀರಾವರಿಯ ಘಟಕದ ಅನುಷ್ಠಾನಕ್ಕೆ ಸಬ್ಸಿಡಿಯನ್ನು ನೀಡಲಾಗುತ್ತದೆ.
[Krishibhagya yojane]ಈ ಯೋಜನೆಯ ಪ್ರಮುಖ ಉದ್ದೇಶಗಳು :
ರೈತರಿಗೆ ಕೃಷಿಯ ಚಟುವಟಿಕೆಗಳಿಗೆ ಆರ್ಥಿಕವಾಗಿ ನೆರವನ್ನು ನೀಡುವುದುಕೃಷಿ ಉತ್ಪಾದನೆಯ ಹೆಚ್ಚಿಸುವುದು ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದು ಮತ್ತು ಈ ಯೋಜನೆಯಡಿ ಮುಖ್ಯವಾದ ಗುರಿಯಾಗಿದೆ.
ಯೋಜನೆಯ ಲಾಭ ಪಡೆಯಲು ಅರ್ಹತೆ:
ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು1 ಎಕರೆಗಿಂತ ಕಡಿಮೆ ಭೂಮಿ ಹೊಂದಿರಬೇಕುಯಾವುದೇ ಸರ್ಕಾರಿ ಉದ್ಯೋಗದಲ್ಲಿರಬಾರದುBPL ಕಾರ್ಡ್ ಹೊಂದಿರಬೇಕು.
ಅಗತ್ಯವಿರುವಂತಹ ದಾಖಲೆಗಳು :
ರೈತರು ಅರ್ಜಿಯನ್ನು ಸಲ್ಲಿಸಲು
* ರೈತರ ಫೋಟೋ
*FIDಆಧಾರ್ ಕಾರ್ಡ್
*ಭೂಮಿ ದಾಖಲೆಗಳು
* BPL ಕಾರ್ಡ್ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಬುಕ್
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ
ಪ್ರತಿ ವರ್ಷದ ಜೂನ್ ತಿಂಗಳ 30ನೇ ತಾರಿಕ ಆಗಿರುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ :
ಅರ್ಹತೆ ರೈತರು ತಮ್ಮ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯಾಗಿ ಅರ್ಜಿಯನ್ನು ಸಲ್ಲಿಸಬಹುದು ಸ್ವೀಕೃತವಾದ ಅರ್ಜಿಗಳ ಜೇಷ್ಠತೆಯ ಹಾಗೂ ಹೋಬಳಿಯ ನಿಗದಿಪಡಿಸಿದ ಗುರಿಗಳನ್ವಯಗಳ ಕಾರ್ಯಕ್ರಮದಲ್ಲಿ ಅನುಷ್ಠಾನ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆಯು ತಿಳಿಸಿದೆ.
ಕೃಷಿ ಭಾಗ್ಯ ಯೋಜನೆಯಡಿ ಲಭ್ಯವಿರುವಂತಹ ಸಹಾಯಧನಗಳು :
ಕೃಷಿ ಉಪಕರಣಗಳಿಗೆ 50% ನಷ್ಟು ಸಹಾಯಧನವನ್ಬೀನು ಜಗಳಿಗೆ 25% ಸಹಾಯಧನಗೊಬ್ಬರಕ್ಕೆ 50% ಸಹಾಯಧನ ಕೃಷಿ ಭಾಗ್ಯ ಯೋಜನೆಯಡಿ ಲಾಭವನ್ನು ಪಡೆಯುವುದರಿಂದ ರೈತರಿಗೆ ಹಲವಾರು ಪ್ರಯೋಜನಗಳಿವೆ ಕೃಷಿ ಚಟುವಟಿಕೆಗಳಿಗೆ ಆರ್ಥಿಕವಾಗಿ ಹೊರೆಯನ್ನು ಕಡಿಮೆಯಾಗುತ್ತದೆ ಕೃಷಿಯಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ ರೈತರ ಆದಾಯವು ದುಪ್ಪಟ್ಟುಗೊಳ್ಳುತ್ತದೆ ಕೃಷಿ ಭಾಗ್ಯಯೋಜನೆ ರಾಜ್ಯದ ರೈತರಿಗೆ ಒಂದು ಉತ್ತಮವಾದ ಯೋಜನೆಯಾಗಿದ್ದು ಈ ಯೋಜನೆಯಡಿ ಲಾಭವನ್ನು ಪಡೆದು ರೈತರು ತಮ್ಮ ಕೃಷಿಯಲ್ಲಿ ವೃತ್ತಿಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ದಿ ಪಡಿಸಿಕೊಳ್ಳಬಹುದು
ಹೆಚ್ಚಿನ ಮಾಹಿತಿಗಾಗಿ ರೈತರು ಕೃಷಿ ಇಲಾಖೆಯಿಂದ ವೆಬ್‌ಸೈಟ್ ಗೆ ಭೇಟಿಯನ್ನು ನೀಡಬಹುದು ಅಥವಾ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು :