ksfes recruitment 2024: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಅಗ್ನಿಶಾಮಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಇಲಾಖೆಯು ತಯಾರಾಗಿದೆ. ಆ ಹುದ್ದೆಗಳ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತಿದ್ದೇವೆ. ನೀವು ಕೂಡ ಅಗ್ನಿಶಾಮಕ ಹುದ್ದೆಗಳಿಗೆ ನೇಮಕಾತಿಯಾಗಬೇಕು ಎಂದರೆ, ಒಂದೊಮ್ಮೆ ಅಧಿ ಸೂಚನೆಯನ್ನು ಕೂಡ ಓದಿರಿ. ಆನಂತರ ಎಲ್ಲಾ ಮಾಹಿತಿಯನ್ನು ಕೂಡ ತಿಳಿದುಕೊಂಡು ಬಳಿಕ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಲು ಮುಂದಾಗಿರಿ. ಈ ಹುದ್ದೆಗಳ ಹೆಚ್ಚಿನ ಮಾಹಿತಿಯನ್ನು ಈ ಕೆಳಕಂಡ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿರಿ.
975 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಣೆಯಾಗಿದೆ.
ಹೌದು ಸ್ನೇಹಿತರೆ ಬರೋಬ್ಬರಿ 975 ಹುದ್ದೆಗಳಿಗೆ ಅಗ್ನಿಶಾಮಕ ಇಲಾಖೆಯು ನೇಮಕಾತಿ ಮಾಡಿಕೊಳ್ಳಲು ಕೂಡ ಮುಂದಾಗಿದೆ. ಈ ಇಲಾಖೆ ಹುದ್ದೆಗಳಲ್ಲಿ ನಾಲ್ಕು ರೀತಿಯ ವಿವಿಧ ಹುದ್ದೆಗಳು ಭರ್ತಿಯಾಗಲಿದ್ದು, ಆ ಹುದ್ದೆಗಳಿಗೆ ಅಧಿಸೂಚನೆಯನ್ನು ಕೂಡ ಪ್ರಕಟಣೆ ಮಾಡಲು ಮುಂದಾಗಿದೆ. ಯಾರೆಲ್ಲಾ ಅಗ್ನಿಶಾಮಕ ಹುದ್ದೆಗಳನ್ನು ಬಯಸುತ್ತೀರಾ ಅಂತವರು ಒಂದೊಮ್ಮೆ ಅಧಿಸೂಚನೆಯನ್ನು ಓದಿ ಅನಂತರ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಈ ವರ್ಷದ ಮೊದಲನೇ ಬಾರಿಗೆ ಅಗ್ನಿಶಾಮಕ ಇಲಾಖೆಯು ನೇಮಕಾತಿ ಮಾಡಿಕೊಳ್ಳುವಂತಹ ಮಾಹಿತಿಯನ್ನು ಕೂಡ ಪ್ರಕಟಣೆ ಮಾಡಿದೆ.
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ !
ಎಲ್ಲಾ ಅಭ್ಯರ್ಥಿಗಳು ಕೂಡ ಕಡ್ಡಾಯವಾಗಿ 10ನೇ ತರಗತಿಯನ್ನು ಮುಗಿಸಿರಬೇಕು. ಹಾಗೂ ಹತ್ತನೇ ತರಗತಿಯಲ್ಲಿ ಪಾಸ್ ಆಗಿರಬೇಕಾಗುತ್ತದೆ. ಮತ್ತು ದ್ವಿತೀಯ ಪಿಯುಸಿ ಯನ್ನು ಕೂಡ ಓದಿರಬೇಕು. ಹಾಗೂ ಗ್ರಾಜುಯೇಷನ್ ಇನ್ ಸೈನ್ಸ್ ಕೆಮಿಸ್ಟ್ರಿಯನ್ನು ಮುಗಿಸಿರಬೇಕಾಗುತ್ತದೆ. ನೀವು ಈ ಮೂರು ವಿದ್ಯಾರ್ಹತೆಗಳಲ್ಲಿ ಯಾವುದಾದರೂ ಒಂದನ್ನು ಓದುವ ಮೂಲಕ ನಾನಾ ರೀತಿಯ ಹುದ್ದೆಗಳಿಗೆ ನೇಮಕಾತಿ ಕೂಡ ಆಗಬಹುದು. ಒಂದೊಂದು ವಿಧ್ಯಾರ್ಥಿಗೂ ಕೂಡ ಬೇರೆ ರೀತಿಯ ಹುದ್ದೆಗಳು ಈ ಇಲಾಖೆಯಲ್ಲಿಯೇ ಖಾಲಿ ಇವೆ.
ಪ್ರತಿ ತಿಂಗಳ ವೇತನದ ಮಾಹಿತಿ !
33,450 ರಿಂದ 62,600 ಹಣನ ಪ್ರತಿ ತಿಂಗಳು ವೇತನವಾಗಿ ನೀಡುತ್ತದೆ ಇಲಾಖೆ. ಈ ವೇತನ ಶ್ರೇಣಿಯಲ್ಲಿ ನಿಮಗೆ ಯಾವುದು ಸೂಕ್ತಕರವಾಗಿ ಹುದ್ದೆಗಳು ಭರ್ತಿಯಾಗುತ್ತದೆಯೋ ಆ ಹುದ್ದೆಗಳ ಮೇಲೆ ಈ ಒಂದು ವೇತನದ ಶ್ರೇಣಿಯು ಕೂಡ ನಿರ್ಧಾರವಾಗುತ್ತದೆ.
ಪೋಸ್ಟಿಂಗ್ ಆಗುವಂತಹ ಸ್ಥಳ !
ಕರ್ನಾಟಕದಲ್ಲಿಯೇ ಪೋಸ್ಟಿಂಗ್ ಆಗುತ್ತದೆ. ನೀವು ಕೂಡ ಕರ್ನಾಟಕದಲ್ಲಿಯೇ ಕೆಲಸವನ್ನು ನಿರ್ವಹಿಸಬಹುದು.
ಒಟ್ಟು ಎಷ್ಟು ಹುದ್ದೆಗಳು ಬರ್ತೀಯಾಗಲಿವೆ !
- ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆ – 64
- ಚಾಲಕ ತಂತ್ರಜ್ಞಾನ ಹುದ್ದೆ – 27
- ಅಗ್ನಿಶಾಮಕ ಚಾಲಕ ಹುದ್ದೆ – 153
- ಅಗ್ನಿಶಾಮಕ ಹುದ್ದೆ – 731
ಹುದ್ದೆಯ ವಯೋಮಿತಿ ಸಡಿಲಿಕೆಯ ಮಾಹಿತಿ !
18 ರಿಂದ 28 ವರ್ಷದೊಳಗಿನ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ವಯೋಮಿತಿ ಸಡಿಲಿಕೆಯನ್ನು ಕೂಡ ಇಲಾಖೆ ನೀಡುತ್ತಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷದ ವಯೋಮಿತಿ ಸಡಿಲಿಕೆ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷದ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ. ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ. ಈ ಸಡಿಲಿಕೆಯನ್ನು ಕೂಡ ನೀವು ಬಳಸಿಕೊಂಡು ನಿಮ್ಮ ವಯೋಮಿತಿಯ ಆಧಾರದ ಮೇಲೆ ಈ ಹುದ್ದೆಗಳಿಗೂ ಕೂಡ ಭರ್ತಿಯಾಗಬಹುದಾಗಿದೆ.
ಅರ್ಜಿ ಶುಲ್ಕದ ಮಾಹಿತಿ !
ಸ್ನೇಹಿತರೆ ಅರ್ಜಿ ಶುಲ್ಕ ಎಲ್ಲರಿಗೂ ಕೂಡ ಅನ್ವಯವಾಗುತ್ತದೆ. ಸಾಮಾನ್ಯ ವರ್ಗಕ್ಕೆ 250 ರೂ ಹಣ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 100 ರೂ ಹಣವನ್ನು ಅರ್ಜಿ ಶುಲ್ಕವಾಗಿ ವಿಧಿಸಲಾಗುತ್ತಿದೆ. ಅರ್ಜಿ ಶುಲ್ಕವನ್ನು ಆನ್ಲೈನ್ ಪೇಮೆಂಟ್ ಗಳ ಮುಖಾಂತರ ಪಾವತಿಸತಕ್ಕದ್ದು.
ಇಲಾಖೆಯೂ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಪ್ರಕಟಣೆ ಮಾಡಿಲ್ಲ. ಆದಕಾರಣ ನೀವು ಮುಂದಿನ ದಿನಗಳಲ್ಲಿ ಈ ದಿನಾಂಕಗಳ ಬಗ್ಗೆಯೂ ಕೂಡ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…