ವಿದ್ಯಾರ್ಥಿಗಳಿಗೆ ₹20000/- ವರೆಗೂ ಪ್ರೋತ್ಸಾಹಧನ ಸಿಗಲಿದೆ! Labour Card Scholarship Application 2023

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ತಮಗೆ ತಿಳಿಸುವುದೇನೆಂದರೆ ವಿದ್ಯಾರ್ಥಿಗಳಿಗೆ 20000 ವರೆಗೆ ಸ್ಕಾಲರ್ಶಿಪ್ ಸಿಗಲಿದೆ ಹೇಗೆ ಅನ್ನೋದನ್ನ ಈ ಒಂದು ಲೇಖನದ ಮೂಲಕ ತಮಗೆ ತಿಳಿಸಿ ಕೊಟ್ಟಿರುತ್ತೇನೆ. ಆದ್ದರಿಂದ ಲೇಖನ ಕೊನೆತನಕ ಓದಿರಿ ಹಾಗೂ ಇದರಲ್ಲಿ ಕೊಟ್ಟಿರುವಂತಹ ಮಾಹಿತಿಗಳನ್ನು ಉಪಯೋಗಿಸಿಕೊಂಡು ಯಾವ ರೀತಿಯಾಗಿ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕೆಂದು ತಿಳಿದುಕೊಳ್ಳಿ.Labour Card Scholarship Application 2023

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಲು ಕರ್ನಾಟಕ ಸರ್ಕಾರವು ಶೈಕ್ಷಣಿಕ ಚಟುವಟಿಕೆಗಳಿಗೆ ವಿದ್ಯಾರ್ಥಿಗೆ 20 ಸಾವಿರ ವರೆಗೆ ಪ್ರೋತ್ಸಾಹಧನವನ್ನು ನೀಡುತ್ತಿದೆ.(labour card scholarship 2023)

ಶೈಕ್ಷಣಿಕ ಪ್ರೋತ್ಸಾಹ ಧನಕ್ಕಾಗಿ ಆನ್ಲೈನ್ ಮೂಲಕ ವಿದ್ಯಾರ್ಥಿಗಳ ಜನ ಸಲ್ಲಿಸಬಹುದು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಇದರ ಅರ್ಹತೆಗಳೇನು ಹಾಗೂ ಯಾವ ದಾಖಲೆಗಳು ಬೇಕಾಗುತ್ತವೆ ಯಾವ ದಿನಾಂಕದಂದು ಅರ್ಜಿ ಸಲ್ಲಿಸಬೇಕು ಎಂಬುದನ್ನು ಈ ಒಂದು ಲೇಖನದ ಮೂಲಕ ತಿಳಿಸಿಕೊಟ್ಟಿರುತ್ತೇವೆ.

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಮಾಹಿತಿ

ಈ ಯೋಜನೆಯ ಹೆಸರು ಶೈಕ್ಷಣಿಕ ಪ್ರೋತ್ಸಾಹ ಧನ ಹಾಗೂ ಇದರಲ್ಲಿ 6000 ದಿಂದ ಹಿಡಿದು 18 ಸಾವಿರದವರೆಗೆ ಸ್ಕಾಲರ್ಶಿಪ್ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತದೆ. ಇದಕ್ಕಾಗಿ ಪ್ರೌಢಶಾಲೆ ಪಿಯುಸಿ ಮತ್ತು ಪದವೀಧರರು ಹಾಗೂ ಯಾವುದೇ ರೀತಿಯ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುತ್ತದೆ.

ಈ ಪ್ರೋತ್ಸಾಹ ಧನವು ಕಾರ್ಮಿಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ಸಿಗಬೇಕೆಂದು ಭಾವಿಸಿ ಕರ್ನಾಟಕ ಸರ್ಕಾರವು ಕಾರ್ಮಿಕರ ಮಕ್ಕಳಿಗೆ ಹಾಗೂ ಸಂಘಟಿತ ಕಾರ್ಮಿಕ ಮಕ್ಕಳಿಗೆ ಈ ಒಂದು ಸ್ಕಾಲರ್ಶಿಪ್ ನ ಒದಗಿಸಲು ಮುಂದಾಗಿದೆ.

ಈ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ಸಂಘಟಿತ ಕಾರ್ಮಿಕರ ಮಕ್ಕಳಾಗಿರಬೇಕು ಮತ್ತು ಕಾರ್ಮಿಕರಿಗೆ 35,000 ಕ್ಕಿಂತ ಕೆಳಗೆ ಆದಾಯ ಇರಬೇಕು. ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಸ್ಕಾಲರ್ಶಿಪ್ ಸಿಗಲು ಸಾಧ್ಯವಾಗಿದೆ.

ಈ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಂಡಳಿಗೆ ಅರ್ಜಿಯನ್ನು ಪಾವತಿಸುವ ಕಾರ್ಮಿಕ ಮಕ್ಕಳು ಸಂಘಟಿತ ಕಾರ್ಮಿಕ ಮಕ್ಕಳಾಗಿರಬೇಕು ಅಂದಾಗ ಮಾತ್ರ ಸ್ಕಾಲರ್ಶಿಪ್ ಅವರ ಖಾತೆಗೆ ಜಮಾ ಆಗುತ್ತದೆ ಹಾಗೂ ವಿದ್ಯಾರ್ಥಿಯ ಸಾಮಾನ್ಯ ವರ್ಗದವರಾಗಿದ್ದರೆ ಹಿಂದಿನ ತರಗತಿಯಲ್ಲಿ ಶೇಕಡ 50 ಪರ್ಸೆಂಟ್ ಅಷ್ಟು ಅಂಕಗಳನ್ನು ಪಡೆದಿರಬೇಕು ಮತ್ತು ಎಸ್ಸಿ ಎಸ್ಟಿ ವಿದ್ಯಾರ್ಥಿಯಾಗಿದ್ದಲ್ಲಿ 45ರಷ್ಟು ಪರ್ಸೆಂಟೇಜ್ ಮಾರ್ಕ್ಸ್ ಅನ್ನು ಹೊಂದಿರಬೇಕು.

ಯಾವ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಎಷ್ಟು ಪ್ರೋತ್ಸಾಹ ಧನ ಸಿಗುತ್ತದೆ?

  • ಪ್ರೌಢ ಶಾಲೆ 8 ರಿಂದ 10ನೇ ತರಗತಿ ವಿದ್ಯಾರ್ಥಿಗೆ 6000 ಪ್ರೋತ್ಸಾಹ ಧನ
  • ಪಿಯುಸಿ ಮತ್ತು ಡಿಪ್ಲೋಮೋ ಐಟಿಐ ವಿದ್ಯಾರ್ಥಿಗಳಿಗೆ ರೂಪಾಯಿ 8,000 ವಿದ್ಯಾರ್ಥಿ ವೇತನ
  • ಪದವಿ ವಿದ್ಯಾರ್ಥಿಗಳಿಗೆ 10,000 ಪ್ರೋತ್ಸಾಹಧನ
  • ನಾತಕೋತ್ತರ ಪದವಿ ತರಗತಿಗಳಿಗೆ 15000 ರೂಪಾಯಿ ಪ್ರೋತ್ಸಾಹ ಧನ
  • ಇಂಜಿನಿಯರಿಂಗ್ ವೈದ್ಯಕೀಯ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ

ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮುಂದಿನ ವರ್ಷ ಅಂದರೆ 31ನೇ ತಾರೀಕು ಜನವರಿ 2024ರಲ್ಲಿ ಅರ್ಜುನ ಸಲ್ಲಿಸಲು ಕೊನೆಯ ದಿನಾಂಕ ವಾಗಿರುತ್ತದೆ ಆದಷ್ಟು ಬೇಗ ವಿದ್ಯಾರ್ಥಿಗಳು ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಸರ್ಕಾರದಿಂದ ಬರುವ ಕಾರ್ಮಿಕ ಮಕ್ಕಳ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಬೇಕಾಗಿ ಈ ಒಂದು ಲೇಖನ ಮೂಲಕ ತಿಳಿಸಿಕೊಡಲಾಗಿದೆ.

ಸ್ನೇಹಿತರೆ ಈ ಲೇಖನದ ಮೂಲಕ ಕಾರ್ಮಿಕ ಮಕ್ಕಳ ಓದು ಮತ್ತು ಅವರ ಓದು ಸಾಮಗ್ರಿಕೊಳ್ಳುವ ಸಲುವಾಗಿ ಕಾರ್ಮಿಕ ಮಕ್ಕಳಿಗಾಗಿ ಸಂಘಟಿತ ಕಾರ್ಮಿಕ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಕರ್ನಾಟಕ ಸರ್ಕಾರವು ಅವರಿಗೆ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ ಎಂದು ಈ ಲೇಖನದ ಮೂಲಕ ತಮಗೆ ಮಾಹಿತಿ ತಿಳಿಸುವಲ್ಲಿ ಈ ಲೇಖನವನ್ನು ಹಾಕಲಾಗಿದೆ.Labour Card Scholarship Application 2023

WhatsApp Group Join Now
Telegram Group Join Now
error: Content is protected !!