Labour Card Scholarship Application Status: ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ,ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸ್ಕಾಲರ್ಶಿಪ್ ನೀಡುತ್ತಿದೆ. ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ.ಎಲ್ಲಾ ವಿಷಯವನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗು ಓದಿ.
ಲೇಬರ್ ಕಾರ್ಡ್ ಸ್ಕಾಲರ್‌ಶಿಪ್(Labour Card Scholarship)ಶೈಕ್ಷಣಿಕ ಸಹಾಯದಡಿಯಲ್ಲಿ, ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳು ತರಗತಿ ಅಥವಾ ಪದವಿಯನ್ನು ಅವಲಂಬಿಸಿ ವಾರ್ಷಿಕವಾಗಿ ರೂ ₹1,100 ರಿಂದ ರೂ ₹11,000 ವರೆಗಿನ ಮೊತ್ತವನ್ನು ಪಡೆಯುತ್ತಾರೆ ಎಂದು ತಿಳಿಸಲಾಗಿದೆ.
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ(Labour Card Scholarship)ಮೊತ್ತ 2024
ವಿವಿಧ ತರಗತಿಗಳು ಅಥವಾ ಪದವಿಗಳ ಆಧಾರದ ಮೇಲೆ 2023-24 ಶೈಕ್ಷಣಿಕ ವರ್ಷಕ್ಕೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನದ ಮೊತ್ತವನ್ನು ನಿಮಗೆ ಕೆಳಗೆ ನೀಡಲಾಗಿದೆ ನೋಡಿ.
ಪದವಿ ಅನುಸಾರವಾಗಿ ವಿದ್ಯಾರ್ಥಿವೇತನ ಮೊತ್ತ 2024
- 1 ರಿಂದ 4 ನೇ ತರಗತಿ ವಿದ್ಯಾರ್ಥಿಗಳಿಗೆ 1,100 ರೂ
- 5 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ 1,250 ರೂ
- 9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 3,000 ರೂ
- 1ನೇ ಮತ್ತು 2ನೇ ಪಿಯುಸಿ ವಿದ್ಯಾರ್ಥಿಗಳಿಗೆ 4,600 ರೂ
- ಪದವಿ ವಿದ್ಯಾರ್ಥಿಗಳಿಗೆ 6,000 ರೂ
- ಬಿಇ & ಬಿ.ಟೆಕ್ ವಿದ್ಯಾರ್ಥಿಗಳಿಗೆ 10,000 ರೂ
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 10,000 ರೂ
- ಪಾಲಿಟೆಕ್ನಿಕ್, ಡಿಪ್ಲೋಮಾ, ಐಟಿಐ ವಿದ್ಯಾರ್ಥಿಗಳಿಗೆ 4,600 ರೂ
- BSC ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ 10,000 ರೂ
- ಲೇಬರ್ ಕಾರ್ಡ್ ಸ್ಕಾಲರ್‌ಶಿಪ್ ಹಣ ಪರಿಶೀಲಿಸಿಕೊಳ್ಳಿ !
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧಿಕೃತ ಜಾಲತಾಣದ ಮೂಲಕ 2024 ಗಾಗಿ ಲೇಬರ್ ಕಾರ್ಡ್ ವಿದ್ಯಾರ್ಥಿವೇತನ(Labour Card Scholarship) ನಿಮ್ಮ ಸ್ಥಿತಿಯನ್ನು ಪರಿಶೀಲಿಸುವ ಮೊದಲ ವಿಧಾನವಾಗಿದೆ,ಎಂದು ತಿಳಿಸಲಾಗಿದೆ.
ನಂತರ ನೀವು, 2024 ರ ಕರ್ನಾಟಕ ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿಯನ್ನು ನೀವು ಕೂಡ ನಿಮ್ಮ ಅರ್ಜಿಯನ್ನು ಪರಿಶೀಲಿಸಲು, ಮೊದಲು ನೀವು kbocwwb.karnataka.gov.in ಇಲ್ಲಿ ಭೇಟಿ ನೀಡಬೇಕು . ಅದಾದ ಮೇಲೆ ಮುಂದೆ, KBOCWWB ಆಯ್ಕೆಯನ್ನು ಆರಿಸಿ ಮತ್ತು ನಂತರ ‘ ಶಿಕ್ಷಣ ಸಹಾಯ ಸ್ಥಿತಿ ‘ ಮೇಲೆ ಕ್ಲಿಕ್ ಮಾಡಬೇಕು ಎಂದು ತಿಳಿಸುತ್ತೇನೆ.
ಸ್ನೇಹಿತರೆ,ಈಗ, ಲೇಬರ್ ಕಾರ್ಡ್ ಸ್ಕಾಲರ್‌ಶಿಪ್(Labour Card Scholarship)ಗೆ ಅರ್ಜಿ ಸಲ್ಲಿಸಿದ ನಂತರ ಸ್ವೀಕರಿಸಿದ ತಮ್ಮ ಸ್ವೀಕೃತಿಯ ಸ್ಲಿಪ್‌ನಲ್ಲಿ ಕಂಡುಬರುವ ಸ್ಕಾಲರ್‌ಶಿಪ್ ಅರ್ಜಿ ಉಲ್ಲೇಖ ಸಂಖ್ಯೆಯನ್ನು ನೀವು ನಮೂದಿಸಬೇಕು ಎಂದು ಹೇಳುತ್ತೇನೆ.ನಂತರ ಅರ್ಜಿ ಸಲ್ಲಿಕೆ ಪರಿಶೀಲಿಸಿಕೊಳ್ಳಿ!