Labour Card Scholarships: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಲೇಬರ್ ಕಾರ್ಡ್ ಇರುವ ಅಭ್ಯರ್ಥಿಗಳು ತಮ್ಮ ಮನೆಯಲ್ಲಿ ಯಾರಾದರೂ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅಂತವರು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಅದು ಯಾವ ರೀತಿ ಸಲ್ಲಿಸಬೇಕು ಮತ್ತು ಅದರಿಂದ ಏನೆಲ್ಲ ಉಪಯೋಗವಿದೆ ಎಂಬುದರ ಮಾಹಿತಿ ಲೇಖನದಲ್ಲಿ ಕೊಟ್ಟಿರುತ್ತೇನೆ ಕೊನೆಯವರೆಗೂ ಓದಿ.
ಕರ್ನಾಟಕ ರಾಜ್ಯದಲ್ಲಿರುವ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸುವ ಸಲುವಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸರ್ಕಾರವು ನೀಡುತ್ತಿದ್ದು. ಇದೇ ರೀತಿ ಲೇಬರ್ ಕಾರ್ಡ್ ಮೂಲಕ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು ತಿಳಿಸಲಾಗಿದೆ.
ಲೇಬರ್ ಕಾರ್ಡ್ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಹತೆಗಳೇನು?
ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಕಟ್ಟಡ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ನಿರ್ಮಾಣ ಕೆಲಸಗಾರರಿಂದ ಅರ್ಜಿ ಅಂದರೆ ಲೇಬರ್ ಕಾರ್ಡ್ ಇರುವವರು ಮಾತ್ರ ಅರ್ಜಿಯನ್ನು ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ.
ವಿದ್ಯಾರ್ಥಿ ವೇತನದ ಹಣ ಎಷ್ಟು ಸಿಗುತ್ತದೆ?
- 1 ರಿಂದ 4 ನೇ ತರಗತಿ ಮಕ್ಕಳಿಗೆ – ₹8,000
- 5 ರಿಂದ 8 ನೇ ತರಗತಿ ಮಕ್ಕಳು – ₹12,000
- 9 ರಿಂದ 10ನೇ ತರಗತಿ ಮಕ್ಕಳು – ₹15,000
- ಪ್ರಥಮ ಪಿಯುಸಿ ಆಗ ದ್ವಿತೀಯ ಪಿಯುಸಿ ಮಕ್ಕಳು – ₹20,000
- ಪಾಲಿಟೆಕ್ನಿಕ್ ಅಥವಾ ಡಿಪ್ಲೋಮಾ ಅಥವಾ ಐಟಿಐ ವಿದ್ಯಾರ್ಥಿಗಳು – ₹40,000
- ಬಿ ಎಸ್ ಸಿ ನರ್ಸಿಂಗ್ ಜಿ ಏನ್ ಎಂ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳು – ₹25,000
- D.Ed ವಿದ್ಯಾರ್ಥಿಗಳು – ₹35,000
- B.Ed ವಿದ್ಯಾರ್ಥಿಗಳು – ₹25,000
- ಪದವಿ ಶಿಕ್ಷಣ – ₹30,000
ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
- ಮೊಬೈಲ್ ನಂಬರ್
- ಲೇಬರ್ ಕಾರ್ಡ್ ನೋಂದಣಿ ಸಂಖ್ಯೆ
- ವಿದ್ಯಾರ್ಥಿಗಳ ಮತ್ತು ಪೋಷಕರ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ
- ಬ್ಯಾಂಕ್ ಪಾಸ್ ಬುಕ್ ವಿವರಗಳು
ಲೇಬರ್ ಕಾರ್ಡ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31 ನೇ ತಾರೀಕು 2024 ಆಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:
https://klwbapps.karnataka.gov.in/
ಸ್ನೇಹಿತರೆ ಮೇಲೆ ಕೊಟ್ಟಿರುವ ಮಾಹಿತಿಯನ್ನು ಪಡೆದುಕೊಂಡು ಹಾಗೂ ಮೇಲೆ ಕೊಟ್ಟಿರುವ ಲಿಂಕ್ ಅನ್ನು ಬಳಸಿಕೊಂಡು ನೀವು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ನೀವು ಮನೆಯಲ್ಲಿ ಯಾರಾದರೂ ವಿದ್ಯಾರ್ಥಿಗಳು ಓದುತ್ತಿದ್ದರೆ ನಿಮ್ಮ ಮನೆಯಲ್ಲಿ ಲೇಬರ್ ಕಾರ್ಡ್ ಇದ್ದರೆ, ಈ ಒಂದು ಸ್ಕಾಲರ್ಶಿಪ್ನ ಮೊತ್ತವನ್ನು ಪಡೆದುಕೊಳ್ಳಿ.