Land Surveyor Jobs Recruitment: ನಮಸ್ಕಾರ ಸ್ನೇಹಿತರೇ,ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಕರ್ನಾಟಕದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಭೂ ಸರ್ವೇ ಹುದ್ದೆಗಳಿಗೆ ಅರ್ಜಿಯ ಬಗ್ಗೆ ತಿಳಿಯೋಣ.
ಪ್ರಸ್ತುತ ಈ ಲೇಖನದಲ್ಲಿ ಭೂ ಸರ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆವಾನಿಸಿದ್ದು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಅರ್ಹತೆಗಳೇನು ಇರಬೇಕು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನು?
ಅರ್ಜಿ ಸಲ್ಲಿಸಬೇಕೆಂದರೆ ಭಾರತ ಸರ್ಕಾರದಿಂದ ಮಾನ್ಯತೆ ಗೊಂಡಿರುವಂತಹ ಕಾಲೇಜುಗಳ ಮುಖಾಂತರ ITI ಡಿಪ್ಲೋಮಾ (Diploma) ಎಂಜಿನಿಯರಿಂಗ್ (Engineering) ಮುಗಿಸಿರುವಂತಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿ ಕೊಟ್ಟಿರಲಾಗಿರುತ್ತದೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ, ಸರ್ವೇಯರ್ ಹಾಗೂ ಎಡಿಎಲ್‌ಆರ್ ಹುದ್ದೆಗಳ ಭರ್ತಿಗೆ ಸಂಬಂಧ ಬಜೆಟ್‌ನಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಮೂಲಕ ತಿಳಿಸಿದ್ದಾರೆ.
ರಾಜ್ಯದಲ್ಲಿ 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು, 500 ಸರ್ವೇಯರ್ ಹುದ್ದೆಗಳ, 60 ಎಡಿಎಲ್‌ಆರ್ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಇದೀಗ ಸಲ್ಲಿಸಲಾಗಿದೆ. ಈ ಸಂಬಂಧ ಇತ್ತೀಚೆಗೆ ಅಧಿಕಾರಗಳ ಸಭೆ ನಡೆಸಿದ ಸಚಿವರು ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಅವರೂ ಆಸಕ್ತರಾಗಿದ್ದಾರೆ ಅಂತ ಇದೀಗ ತಿಳಿಸಿದ್ದಾರೆ.
ಬಜೆಟ್‌ನಲ್ಲಿ ಎಷ್ಟು ಹುದ್ದೆಗಳ ಭರ್ತಿಗೆ ಅನುಮತಿ ಸಿಗುತ್ತದೆಯೋ ಅಷ್ಟೂ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತೇವೆ ಎಂದು ಕಂದಾಯ ಸಚಿವ ಈ ಮೂಲಕ ತಿಳಿಸಿದ್ದಾರೆ.
ಸರ್ವೇಯರ್ ಹುದ್ದೆ ಬಗ್ಗೆ ಮಾಹಿತಿ :
ಎಲ್ಲಾ ಸೇರಿ ಒಟ್ಟು 300ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಕೆಗೆ ಅಧಿಸೂಚನೆಯನ್ನು ಕೂಡ ನೀಡಲಾಗಿದೆ.
ಸರ್ವೇಯರ್‌ಗಳು ಭೂಮಿಯ ಚಿತ್ರವನ್ನು ಬರೆಯುವ ಕಾರ್ಯವನ್ನು ಕೂಡ ನಿರ್ವಹಿಸುತ್ತಾರೆ. ಅವರು ಭೂಮಿಯ ಗಡಿಗಳನ್ನು ನಿರ್ಧರಿಸುವುದು, ಭೂಮಿಯ ಮೇಲಿನ ಕಟ್ಟಡಗಳು ಮತ್ತು ಇತರ ರಚನೆಗಳನ್ನು ನಕ್ಷೆ ಮಾಡುವುದು, ಭೂಮಿಯ ಮೇಲಿನ ಯೋಜನೆಗಳನ್ನು ರೂಪಿಸುವುದು ಮುಂತಾದ ಕೆಲಸಗಳನ್ನು ಕೂಡ ಇವರು ಮಾಡುತ್ತಾರೆ ಎಂದು ತಿಳಿಸಲಾಗಿದೆ.
ಬೇಕಾಗುವ ದಾಖಲೆಗಳು:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತೀಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆಯಿಂದ ಭೂಮಿ ಸರ್ವೆಕ್ಷಣೆ ಮತ್ತು ನಕ್ಷೆ ತಯಾರಿಕೆ ಡಿಪ್ಲೋಮಾ (Diploma in Land Surveying and Map Making), BE /B- tech ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ITI ಪ್ರಮಾಣಪತ್ರವನ್ನ ಪಡೆದಿರಬೇಕು ಎಂದು ತಿಳಿಸಲಾಗಿದೆ.