Land surveyors Recruitment 2024: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ, ಕನಾ೯ಟಕ ಲೋಕಸೇವಾ ಆಯೋಗದಿಂದ ಭೂಮಾಪನ ಕಂದಾಯ ವ್ಯವಸ್ಥೆಯಲ್ಲಿ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವಂತಹ ಭೂಮಾಪಕರು (ಗ್ರೂಪ್ ಸಿ) ಹುದ್ದೆಗಳಿಗೆ ಭರ್ತಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಇಲಾಖೆಯಲ್ಲಿ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವಂತಹ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಯನ್ನು ಸಲ್ಲಿಸಿಬೇಕು ಈ ಲೇಖನದ ಕೆಳಗಡೆ ಸೂಚಿಸಿರುವಂತ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆಯನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿಕೊಂಡು ಅಥವಾ ಕೆಳಗಡೆ ಕೊಟ್ಟಿರುವುದು ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ನಿಮ್ಮ ಅರ್ಜಿಯನ್ನು ಸಲ್ಲಿಸಿ.
ಓದುಗರ ವಿಶೇಷ ಗಮನಕ್ಕೆ: ನಿಮ್ಮ ಕರ್ನಾಟಕ ಶಿಕ್ಷಣ ಜಾಲತಾಣ ತನ್ನ ಓದುಗರಿಗೆ ಯಾವುದೇ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಹಾಗೂ ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಅನುಸರಿಸಿ.
ಕನಾ೯ಟಕ ಲೋಕಸೇವಾ ಆಯೋಗದಿಂದ ಭೂಮಾಪನ ಹಾಗೂ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಇರುವಂತಹ ಭೂಮಾಪಕರು (ಗ್ರೂಪ್ ಸಿ) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿರುವಂತಹ ದಿನಾಂಕದೊಳಗೆ ಹೂಗಿ ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಗಳಿಗೆ ಅಗತ್ಯವಿರುವಂತಹ ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ ಹಾಗೂ ವಯೋಮಿತಿ ಅರ್ಜಿ ಶುಲ್ಕ ಮತ್ತು ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಓದಿ ನಂತರ ಹೂಗಿ ಅರ್ಜಿಯನ್ನು ಸಲ್ಲಿಸಿ.
ಇಲಾಖೆಯ ಹೆಸರು: ಭೂಮಾಪನ ಕಂದಾಯ ಇಲಾಖೆ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ಹುದ್ದೆಗಳ ಹೆಸರು: ಭೂಮಾಪಕರು (ಗ್ರೂಪ್ ‘2’)
ಒಟ್ಟು ಹುದ್ದೆಗಳು: 364
ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್
ವಿದ್ಯಾರ್ಹತೆ:
*ಬಿಇ (ಸಿವಿಲ್) / ಬಿ ಟೆಕ್ ( ಸಿವಿಲ್) / ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾದಲ್ಲಿ ಕೂಡ ಉತ್ತೀರ್ಣರಾಗಿರಬೇಕು ಅಥವಾ ಪಿಯುಸಿಯಲ್ಲಿ ವಿಜ್ಞಾನದ ವಿಷಯವನ್ನು ಪಡೆದು ಗಣಿತದ ವಿಷಯದಲ್ಲಿ ಶೇಕಡಾ 60% ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕದ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೆ’ಯ ಪದವಿ ಪೂರ್ವ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವಂತ ಐಟಿಐ ಇನ್ ಸರ್ವೇ ಯ ಟ್ರೇಡ್ ನಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷಗಳು
* ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷಗಳು
* ಪ ಜಾತಿ ಪ.ಪಂ ಪ್ರವರ್ಗ 1 ಅಭ್ಯರ್ಥಿಗಳು – ಗರಿಷ್ಠ 4 ವರ್ಷಗಳು ಮೀರಿರಬಾರದು.
ವೇತನಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.23,500 ರಿಂದ ರೂ. 47,650 ಶ್ರೇಣಿಯಲ್ಲಿ ವೇತನವನ್ನು ನೀಡಲಾಗುವುದು .
ಅರ್ಜಿ ಶುಲ್ಕ:
* ಸಾಮಾನ್ಯ ಅಭ್ಯರ್ಥಿಗಳು – ರೂ.600/- ರೂ
* ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು – ರೂ. 300/-
* ಮಾಜಿ ಸೈನಿಕರಿಗೆ ಅಭ್ಯರ್ಥಿಗಳು – ರೂ 50/-
* ಪ ಜಾತಿ ಪ.ಪಂ ಪ್ರವರ್ಗ 1 ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಹಾಗೂ ನೆಟ್ ಬ್ಯಾಂಕಿಂಗ್ ಗಳ ಮೂಲಕ ಯುಪಿಐ ಮೂಲಕ ಶುಲ್ಕವನ್ನು ಪಾವತಿಸಬಹುದು.
ಆಯ್ಕೆ ವಿಧಾನ:
ಸ್ಪರ್ಧಾತ್ಮಕ ಪರೀಕ್ಷೆ ಯನ್ನು ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆಯನ್ನು ಮಾಡಲಾಗುವುದು.
ಪ್ರಮುಖ ದಿನಾಂಕಗಳು :
* ಅರ್ಜಿ ಸಲಿಸಲು ಪ್ರಾರಂಭವ ದಿನಾಂಕ :
11 ಮಾರ್ಚ್ 2024
ಅರ್ಜಿಯನ್ನು ಸಲ್ಲಿಸುವ ಕೂನೆಯ ದಿನಾಂಕ :
10 ಏಪ್ರಿಲ್ 2024
ಪ್ರಮುಖ ಲಿಂಕ್ ಗಳು :
* ಅರ್ಜಿ ಸಲ್ಲಿಸುವ ಲಿಂಕ್: https://kpsc.kar.nic.in/
* ನೋಟಿಫಿಕೇಶನ್ ಲಿಂಕ್:
https://drive.google.com/file/d/1a3MMaC6fupYHduwoyY28qhBBVf28DWz2/view?usp=drivesdk
ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು :