LPG Cylinder e-KYC last date extended: ನಮಸ್ಕಾರ ಸ್ನೇಹಿತರೇ, ದೇಶಾದ್ಯಂತ ಗ್ಯಾಸ್ ಸಂಪರ್ಕ ಪಡೆಯುತ್ತಿರುವ ಎಲ್ಲಾ ಬಳಕೆದಾರರಿಗೂ ಸರ್ಕಾರದಿಂದ ಒಂದು ಆದೇಶ ಬಂದಿತ್ತು. ಅದೇನೆಂದರೆ ಎಲ್ ಪಿಜಿ ಗ್ಯಾಸ್ ಸಂಪರ್ಕ ಪಡೆಯಲು E ಕೆವೈಸಿ ಕಡ್ಡಾಯ. ಇದೀಗ ಈ ಪ್ರಕ್ರಿಯೆ ಮಾಡಿಸಲು ಇದೇ ತಿಂಗಳು ಕೊನೆಯ ದಿನಂಕವಾಗಿದ್ದು. ಆದರೆ ಈ ದಿನಾಂಕವನ್ನು ಮುಂದೆ ಹಾಕಲಾಗಿದೆ. ಈ ಕುರಿತು ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ. ಕೊನೆಯವರೆಗೂ ಓದಿ.
ಎಲ್ಲರೂ ಭಯಭೀತಿಯಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಜಾಸ್ತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಹಾಗೂ ಸಿಲಿಂಡರ್ ಮನೆಗೆ ಪಡೆಯುವ ವೇಳೆಯಲ್ಲಿ ಕೂಡ E-ಕೆವೈಸಿ ಮಾಡಿಸಲು ಅವಕಾಶವಿರುತ್ತದೆ
ಅದು ಅಲ್ಲದೇ ಹೆಲೋ ಬಿಪಿಸಿಎಲ್, ಇಂಡಿಯನ್ ಆಯ್ಲ್ ಒನ್ ಹಾಗೂ ವಿಟ್ರನ್ ಹೆಚ್‍ಪಿ ಗ್ಯಾಸ್ ಮೊಬೈಲ್ ಆಪ್‍ಗಳ ಮೂಲಕ E-ಕೆವೈಸಿ ಮಾಡಬಹುದು. ಅಂತ ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ “ಅವಿನ್ ಆರ್” ಈ ಮೂಲಕ ತಿಳಿಸಿದ್ದಾರೆ.