LPG Gas Cylinder : ಕೇಂದ್ರ ಸರ್ಕಾರ ಜನರ ಹಿತ ದೃಷ್ಟಿಯಿಂದ ಒಂದಲ್ಲ ಒಂದು ರೀತಿಯ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತ ಇದೆ. ನಾಗರಿಕರ ಆರ್ಥಿಕ ಕಲ್ಯಾಣಕ್ಕಾಗಿ ಈ ಯೋಜನೆಗಳ ಮೂಲಕ ಹೆಚ್ಚಿನ ಪ್ರಯೋಜನವನ್ನು ಇದೀಗ ಪಡೆದುಕೊಳ್ಳಬಹುದಾಗಿದೆ. LPG ಸಿಲಿಂಡರ್ (LPG cylinder) ಬಳಕೆ ಮಾಡುವ ಗ್ರಾಹಕರಿಗೆ, ಮತ್ತೊಂದು ಸೌಲಭ್ಯವನ್ನು ಕೇಂದ್ರ ಸರ್ಕಾರ ಘೋಷಿಸಿದೆ ಅಂತಾನೆ ಹೇಳಬಹುದು.
LPG ಸಿಲೆಂಡರ್ ಬಳಕೆದಾರರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
ಹಣದುಬ್ಬರದ ಸಮಯದಲ್ಲಿ LPG ಗೃಹ ಬಳಕೆಯ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೋ ಅಂತವರಿಗೆ 200 ರೂಪಾಯಿಗಳ ಸಬ್ಸಿಡಿ (subsidy) ಯನ್ನೂ ನೀಡುವುದರ ಮೂಲಕ ಸರ್ಕಾರ ದೊಡ್ಡ ಹೊರೆಯನ್ನು ಗ್ರಾಹಕರ ತಲೆಯಿಂದ ಇಳಿಸಿದೆ ಅಂತ ಹೇಳಬಹುದು ಆಗಿದೆ. ಇದರ ಜೊತೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬಡವರು ಕೇವಲ 605 ರೂ. ಗಳಿಗೆ ಸಿಲಿಂಡರ್ ಪಡೆದುಕೊಳ್ಳುವಂತೆ ಆಗಿದೆ ಎಂದು ತಿಳಿಸಲಾಗಿದೆ.
ಇದೀಗ ಗ್ರಾಹಕರಿಗೆ ಅನುಕೂಲವಾಗಲು ಮತ್ತೊಂದು ಸೌಲಭ್ಯವನ್ನು(Facility)ಸರ್ಕಾರ ಕಲ್ಪಿಸಿ ಕೊಟ್ಟಿದೆ ಇದಕ್ಕೆ ಭಾರತ್ ಗ್ಯಾಸ್ ಸಿಲಿಂಡರ್(ಗ್ಯಾಸ್ Cylinder)ಹೊಸ ಉಪಕ್ರಮವನ್ನು ಆರಂಭಿಸಿದೆ. ಎಲ್ ಪಿ ಜಿ ಸಿಲಿಂಡರ್ ಬಳಸುತ್ತಿರುವ ಪ್ರತಿಯೊಬ್ಬ ಗೃಹಿಣಿಯರಿಗೂ ಕೂಡ ಇದರಿಂದ ಸುರಕ್ಷತೆ ಸಿಗಲಿದೆ ಅಂತಾನೆ ಹೇಳಬಹುದು ಆಗಿದೆ.
ಭಾರತ್ ಗ್ಯಾಸ್ ಸಿಲಿಂಡರ್(Bharat Gas Cylinder)ಕಂಪನಿಯ ನ ಹೊಸ ಉಪಕ್ರಮ
ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಭಾರತ್ ಸಿಲೆಂಡರ್ ಇದೀಗ LPG ಸಿಲಿಂಡರ್ ಪಡೆಸುತ್ತಿರುವ ಗ್ರಾಹಕರಿಗೆ ಮತ್ತೊಂದು ಸೌಲಭ್ಯವನ್ನು ಕಲ್ಪಿಸಿಕೊಡಲಿದೆ ಎಂದು ತಿಳಿಸಲಾಗಿದೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್(Bharat Petroleum Corporation)ಪ್ಯೂರ್ ಫಾರ್ ಶ್ಯೂರ್ (pure for sure) ಫೆಸಿಲಿಟಿಯನ್ನು ಒದಗಿಸಿಕೊಡಲಿದೆ ಎಂದು ತಿಳಿದು ಬಂದಿದೆ. LPG ಸಿಲಿಂಡರ್ ನ ಗುಣಮಟ್ಟ ಮತ್ತು ಸಿಲಿಂಡರ್ ಗೆ ಸಂಬಂಧಪಟ್ಟ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸುವ ಸಲುವಾಗಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ತಿಳಿಸಲಾಗಿದೆ. ಇದರಿಂದ ಗ್ರಾಹಕರು ತಾವು ಬಳಕೆ ಮಾಡುತ್ತಿರುವ ಸಿಲಿಂಡರ್ ಬಗ್ಗೆ ಪಾರದರ್ಶಕ ಮಾಹಿತಿಯನ್ನು ಇದೀಗ ನೀವು ಕೂಡ ಪಡೆದುಕೊಳ್ಳಬಹುದು. ಹಾಗೂ ಹೆಚ್ಚಿನ ಸುರಕ್ಷತೆಯು ಕೂಡ ಸಿಗುತ್ತದೆ ಅಂತಾನೆ ಹೇಳಬಹುದು.
ಪ್ಯೂರ್ ಫಾರ್ ಶ್ಯೂರ್(pure for sure)ಕಾರ್ಯಕ್ರಮಕ್ಕೆ ಜನರ ಆದ್ಯತೆ!
ಇನ್ನು ಮುಂದೆ ಭಾರತ ಗ್ಯಾಸ್(Bharat Gas)ಪಡೆದುಕೊಳ್ಳುವ ಗ್ರಾಹಕರಿಗೆ ಸಿಲಿಂಡರ್(Cylinder)ಮೇಲೆ ಟಾಂಪಾರ್ ಫ್ರೂಫ್ ಸೀಲ್ ಹಾಕಲಾಗುತ್ತದೆ ಎಂದು ತಿಳಿಸಲಾಗಿದೆ. ಇಲ್ಲಿ ಒಂದು ಕ್ಯೂಆರ್ ಕೋಡ್ (QR code) ನ ಸ್ಕ್ಯಾನ್ ಅನ್ನು ನೀಡಲಾಗುತ್ತದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ಸಿಗ್ನೇಚರ್ ಟ್ಯೂನ್ ನೊಂದಿಗೆ pure for sure pop up ಆಗುತ್ತದೆ ಎಂದು ಕೂಡ ತಿಳಿಸಲಾಗಿದೆ. ಇದರಿಂದ ಸಿಲಿಂಡರ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ನಿಂದ ಇಲ್ಲಿಯವರೆಗಿನ ಸಿಲಿಂಡರ್ ಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂದು ತಿಳಿಸಲಾಗಿದೆ.