mandya court recruitment: 10ನೇ ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ! ಕೂಡಲೇ ಅರ್ಜಿ ಸಲ್ಲಿಸಿ.

mandya court recruitment: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಹತ್ತನೇ ತರಗತಿ ಪಾಸಾದವರಿಗೆ ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ದೊರೆಯುತ್ತದೆ. ಆ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಲಾಗಿದೆ. ಎಷ್ಟು ವಯೋಮಿತಿ ಹೊಂದಿದಂತಹ ಅಭ್ಯರ್ಥಿಗಳು ಈ ಒಂದು ಉದ್ಯೋಗಕ್ಕೆ ನೇಮಕಾತಿ ಆಗುತ್ತಾರೆ ಎಂಬುದರ ಎಲ್ಲಾ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ತಿಳಿಸಲಾಗಿದೆ. ನೀವು ಕೂಡ ಈ ಒಂದು ಉದ್ಯೋಗವನ್ನು ಪಡೆಯಬೇಕೆಂದರೆ ಈ ಒಂದು ಮಾಹಿತಿಯನ್ನು ತಿಳಿದುಕೊಂಡಿರಬೇಕು ಆದ ಕಾರಣ ಲೇಖನವನ್ನು ಕೊನೆವರೆಗೂ ಓದಿರಿ.

ಜವಾನ ಹುದ್ದೆಗಳ ನೇಮಕಾತಿಗೆ ಜಿಲ್ಲ ನ್ಯಾಯಾಲಯವು ಅಧಿಸೂಚನೆಯನ್ನು ಕೂಡ ಪ್ರಕಟಣೆ ಮಾಡಿದೆ. ಈ ಒಂದು ಅಧಿಸೂಚನೆಯಲ್ಲಿ ಶೈಕ್ಷಣಿಕ ಮಾಹಿತಿ ವಯೋಮಿತಿಯ ಮಾಹಿತಿ ವೇತನದ ಮಾಹಿತಿ ಎಲ್ಲಾ ಮಾಹಿತಿಯನ್ನು ಕೂಡ ತಿಳಿಸಿದೆ. ಆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡಂತಹ ಅಭ್ಯರ್ಥಿಗಳು ಆನ್ಲೈನ್ ಪ್ರಕ್ರಿಯೆಯಲ್ಲಿಯೇ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದಾಗಿದೆ. ಯಾರೆಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದೀರಾ ಅಂತವರಿಗೆ ಇದು ಉದ್ಯೋಗವಕಾಶವೆಂದೆ ಹೇಳಬಹುದು.

ಒಟ್ಟು 41 ಹುದ್ದೆಗಳು ಭರ್ತಿಯಾಗಲಿದೆ. ಹುದ್ದೆಯ ಹೆಸರು ಜವಾನ ಹುದ್ದೆ, ( peon ) ಹುದ್ದೆಗಳು ನೇಮಕಾತಿಯಾಗುತ್ತದೆ. ಈ ಒಂದು ಹುದ್ದೆಯು ಕರ್ನಾಟಕದಲ್ಲಿಯೇ ನೇಮಕಾತಿ ಆಗುತ್ತದೆ. ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ 41 ಹುದ್ದೆಗಳು ಬರ್ತೀಯಾಗಲಿದ್ದು, ಆ ಮಂಡ್ಯ ಜಿಲ್ಲೆ ನ್ಯಾಯಾಲಯವು ಅಧಿಸೂಚನೆಯನ್ನು ಕೂಡ ಪ್ರಕಟಿಯಣೆ ಮಾಡಿದೆ. ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿ ನೇಮಕಾತಿ ಆಗುತ್ತೀರಿ ಎಂದರೆ ನೀವು ಮಂಡ್ಯ ಜಿಲ್ಲೆಯಲ್ಲಿಯೇ ಕೆಲಸವನ್ನು ಕೂಡ ಪಡೆದುಕೊಳ್ಳುತ್ತೀರಿ.

ಭರ್ತಿಯಾಗುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ !

ಕಡ್ಡಾಯವಾಗಿ ಎಲ್ಲಾ ಅಭ್ಯರ್ಥಿಗಳು ಕೂಡ 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು. ಅಂದರೆ ಪಾಸ್ ಆಗಿರತಕ್ಕದ್ದು. ಯಾರೆಲ್ಲ 10ನೇ ತರಗತಿಯನ್ನು ಪಾಸಾಗಿದ್ದರೋ ಅಂತವರಿಗೆ ಈ ಕೋರ್ಟ್ ಉದ್ಯೋಗವು ಕೂಡ ದೊರೆಯುತ್ತದೆ. ನೀವು ಹೆಚ್ಚಿನ ವಿದ್ಯಾರ್ಹತೆಯನ್ನು ಕೂಡ ಓದಿದ್ದೀರಿ ಎಂದರೆ, ನೀವು ಹತ್ತನೇ ತರಗತಿಯ ಅಂಕಪಟ್ಟಿಯನ್ನು ನೀಡುವ ಮುಖಾಂತರವೇ ಉದ್ಯೋಗವನ್ನು ಪಡೆಯತಕ್ಕದ್ದು.

ಕೋರ್ಟ್ ಹುದ್ದೆಯ ಪ್ರತಿ ತಿಂಗಳ ವೇತನ !

ಬರೋಬ್ಬರಿ 17,000 ದಿಂದ 28,950 ಹಣವನ್ನು ನೇಮಕಾತಿಯಾಗುವಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಕೂಡ ನೀಡಲಾಗುತ್ತದೆ. ನೀವು ಕೂಡ ನೇಮಕಾತಿ ಆಗುವಿರಿ ಎಂದರೆ ನಿಮಗೂ ಕೂಡ ಈ ರೀತಿಯ ವೇತನವೇ ದೊರೆಯುತ್ತದೆ.

ಅಭ್ಯರ್ಥಿಗಳ ವಯೋಮಿತಿಯ ಮಾಹಿತಿ !

ಕನಿಷ್ಠ ವಾರು 18 ವರ್ಷ ಮೇಲ್ಪಟ್ಟ ವಯೋಮಿತಿಯನ್ನು ಅಭ್ಯರ್ಥಿಗಳು ಹೊಂದಿರತಕ್ಕದ್ದು. 35 ವರ್ಷದೊಳಗಿನ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 5 ವರ್ಷದ ವಯೋಮಿತಿ ಸಡಿಲಿಕೆ ಇದೆ. ಸಾಮಾನ್ಯ ವರ್ಗದವರಿಗೂ ಕೂಡ ಮೂರು ವರ್ಷದ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆಯ ಶುಲ್ಕ !

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.300 ಹಣ ಅರ್ಜಿ ಶುಲ್ಕವಾಗಿ ಅನ್ವಯವಾಗುತ್ತದೆ. ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲತೆ ಹೊಂದಿದಂತಹ ಅಭ್ಯರ್ಥಿಗಳಿಗೆ ಯಾವುದೇ ಹಣ ಅರ್ಜಿ ಶುಲ್ಕವಾಗಿ ಅನ್ವಯವಾಗುವುದಿಲ್ಲ. ಆನ್ಲೈನ್ ಪ್ರಕ್ರಿಯೆಯಲ್ಲಿಯೇ ಈ ಹಣವನ್ನು ಅರ್ಜಿ ಶುಲ್ಕವಾಗಿ ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ !

ಮೇ ಮೂರರಂದು ಅರ್ಜಿ ಸಲ್ಲಿಕೆಯ ಆರಂಭ ದಿನಾಂಕವಾಗಿದೆ. ಇನ್ನು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದೊಳಗೆ ನೀವು ಎಲ್ಲರೂ ಕೂಡ https://recruitmenthck.kar.nic.in/district/mdy/gdp/home.php ಆನ್ಲೈನ್ ಪ್ರಕ್ರಿಯೆಯಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

ನೇಮಕಾತಿಯಾಗುವಂತಹ ಸ್ಥಳ ಮಂಡ್ಯ. ಮಂಡ್ಯ ಜಿಲ್ಲೆಯಲ್ಲಿಯೇ ನೀವು ಜವಾನರಾಗಿ ಕೆಲಸವನ್ನು ನಿರ್ವಹಿಸಬೇಕು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *