ಪಶು ಶೆಡ್ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!

mgnrega pashu shed scheme apply online: ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ಎಲ್ಲರಿಗೂ ತಿಳಿಸುವ ವಿಷಯವೇನೆಂದರೆ ನರೇಗಾ ಯೋಜನೆಯ ಅಡಿಯಲ್ಲಿ ಪಶು ಶೆಡ್ ಯಾವ ರೀತಿ ನಿರ್ಮಿಸಿಕೊಳ್ಳಬೇಕು? ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನೀಡುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.

ಪಶು ಶೆಡ್ ಯೋಜನೆ!

ಭಾರತ ದೇಶದ ಒಟ್ಟು ಕೃಷಿ ಉತ್ಪಾದನೆಗೆ ಪಶುಸಂಗೋಪನೆಯ ಕೊಡುಗೆಯು ಸುಮಾರು 29.7% ಆಗಿರುತ್ತದೆ. ಹಾಲು ಕೊಡುವ ಪ್ರಾಣಿಗಳಲ್ಲಿ ಎಮ್ಮೆ ಮತ್ತು ದನಗಳಂತಹ ಜನಸಂಖ್ಯೆಯು ಭಾರತ ದೇಶದಲ್ಲಿ ಮೊದಲನೇ ಸ್ಥಾನದಲ್ಲಿ ಇದೆ ಎಂದು ತಿಳಿದುಬಂದಿದೆ.

ದೇಶದ ರೈತರ ಮುಖ್ಯ ಆದಾಯದ ಮೂಲವೆಂದರೆ ಕೃಷಿ ಮತ್ತು ಪಶುಸಂಗೋಪನೆ ಎಂದು ಕೂಡ ತಿಳಿದು ಬಂದಿದೆ. ಆದರೆ ಅನೇಕ ರೈತರು ಆರ್ಥಿಕವಾಗಿ ಕೆಲವೆಡೆ ದುರ್ಬಲರಾಗಿದ್ದು, ತಮ್ಮ ಪ್ರಾಣಿಗಳನ್ನು ಸರಿಯಾಗಿ ರಕ್ಷಿಸಲು ಸಾಧ್ಯವಾಗುತ್ತಿಲ್ಲ ಅಂತ ಕೂಡ ತಿಳಿದು ಬಂದಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಲಕಾಲಕ್ಕೆ ರೈತರಿಗಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿವೆ ಎಂದು ಹೇಳಬಹುದು.

ಸರ್ಕಾರವು ದೇಶದಲ್ಲಿರುವಂತಹ ಪಶು ಪಾಲನೆ ಮಾಡುವವರಿಗೆ ಸಹಕಾರಿಯಾಗುವಂತೆ ಪಸು ಶೆಡ್ ಯೋಜನೆಯನ್ನು ಆರಂಭಿಸಲಾಗಿದೆ. ದೇಶ ಎಲ್ಲ ರೀತಿಯ ಪ್ರಾಣಿ ಸಾಕು ಅವರಿಗೆ ಸಹಾಯಕವಾಗುವಂತೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಯೋಜನೆ ಅಡಿ ರೈತರು ತಮ್ಮ ಪ್ರಾಣಿ ಸಾಕಾಣಿಕೆಯನ್ನು ಮತ್ತು ಅದನ್ನು ಇನ್ನಷ್ಟು ಉತ್ತೇಜನಗೊಳಿಸಲು ಸಹಕಾರಿಯಾಗುತ್ತದೆ.

MGNREGA ಪಶು ಶೆಡ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನಮ್ಮ ದೇಶದ ರೈತರು ಪಶುಪಾಲನೆಯಿಂದ ಆರ್ಥಿಕ ಲಾಭ ಪಡೆಯುತ್ತಾರೆ ಎಂದು ಹೇಳಬಹುದು. ಕೃಷಿಯ ಜೊತೆಗೆ ಪಶುಪಾಲನೆಯಿಂದಲೂ ರೈತರು ಇನ್ನಷ್ಟು ಆದಾಯ ಗಳಿಸುತ್ತಾರೆ. ಕೇಂದ್ರ ಸರ್ಕಾರ ರೈತರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕೂಡ ಇದೀಗ ಎಲ್ಲರಿಗೂ ಉಪಯೋಗ ಆಗುವಂತೆ ಜಾರಿಗೊಳಿಸುತ್ತಿದೆ.

ರೈತರು ಪ್ರಾಣಿಗಳ ಪಶು ಶೆಡ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ರೈತರು ಬಯಸಿದರೆ ಅರ್ಜಿ ನಮೂನೆಯನ್ನು ಇದೀಗ ರೈತರು ಭರ್ತಿ ಮಾಡಬೇಕು ಎಂದು ತಿಳಿಸಲಾಗಿದೆ.ಅರ್ಜಿ ಸಲ್ಲಿಸಲು ಬಯಸುವ ರೈತರು ಪಂಚಾಯತ್‌ಗೆ ಭೇಟಿ ನೀಡುವ ಮೂಲಕ MNREGA ಅನಿಮಲ್ ಶೆಡ್ ಯೋಜನೆಯ ಆನ್‌ಲೈನ್ ಫಾರ್ಮ್ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಲು ಬಯಸುತ್ತೇನೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!

  • ಅರ್ಜಿದಾರನ ಆಧಾರ್ ಕಾರ್ಡ್.
  • mgnrega ಜಾಬ್ ಕಾರ್ಡ್.
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
  • ಬ್ಯಾಂಕ್ ಖಾತೆ ವಿವರಗಳು.
  • ಮೊಬೈಲ್ ನಂಬರ್.
  • ಅಡ್ರೆಸ್ ಪ್ರೂಫ್.

ಈ ಎಲ್ಲ ಮೇಲಿನ ದಾಖಲೆಗಳನ್ನು ಸರಿಪಡಿಸಿಕೊಂಡು ನೀವು ನಿಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ. ನಂತರ ನೀವು ನರೇಗಾ ಯೋಜನೆ ಅಡಿ ಬರುವಂತಹ ಪಶು ಶಡ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *