New BPL/APL Card: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಹೊಸದಾಗಿ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಯಾವ ದಿನಾಂಕದಂದು ಅವಕಾಶ ಕಲ್ಪಿಸಿಕೊಡಲಾಗುವುದು? ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಹಾಗೂ ಬೇಕಾಗುವ ದಾಖಲೆಗಳೇನು? ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.
ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನವೂ ಕೂಡ ನೀವು ಓದಲು ಇಷ್ಟಪಡುತ್ತಿದ್ದರೆ ನಮ್ಮ ಜಾಲತಾಣದ ಚಂದದಾರರಾಗಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಮತ್ತು ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಹೊಸ ಪಡಿತರ ಚೀಟಿಗೆ ಆನ್ಲೈನ್ ಅಲ್ಲಿ ಯಾವ ರೀತಿ ಅರ್ಜಿ ಸಲ್ಲಿಸಬೇಕು?
ಹಂತ-01: ನೀವು ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಮೊದಲು ಭೇಟಿ ನೀಡಬೇಕು ನಂತರ ಈ ಸೇವೆಗಳು ಎಂಬ ಆಪ್ಷನ್ ಮೇಲೆ ಒತ್ತಬೇಕು ಅದರ ಪರದೆ ತೆಗೆಯುತ್ತದೆ.
ಹಂತ-02: ಅಲ್ಲಿ ನಿಮಗೆ ಈ ರೇಷನ್ ಕಾರ್ಡ್ ಕೆಳಗಡೆ ಹೊಸ ರೇಷನ್ ಕಾರ್ಡ್ ಅಂತ ಕಾಣಿಸುತ್ತದೆ ಅದನ್ನು ಆಯ್ಕೆ ಮಾಡಿ ನಂತರ ಕನ್ನಡ ಭಾಷೆಯಲ್ಲಿ ಮುಂದುವರೆಯಲು ನಿಮ್ಮ ಭಾಷೆಯನ್ನು ಕನ್ನಡಕ್ಕೆ ಆಯ್ಕೆ ಮಾಡಿಕೊಳ್ಳಿ.
ಹಂತ-03: ಹೊಸ ರೇಷನ್ ಕಾರ್ಡ್ ವಿನಂತಿ ಆಯ್ಕೆ ಮೇಲೆ ನೀವು ಒತ್ತಬೇಕಾಗುತ್ತದೆ ನಂತರ ನೀವು ಯಾವ ವಿಧದ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸುತ್ತೀರಾ ಅದನ್ನು ನೀವು ಆಯ್ಕೆ ಮಾಡಿಕೊಳ್ಳಿ.
ಹಂತ-04: ನಂತರ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಗೋವಾ ಎಂದು ಕೊಡಿ ನಂತರ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ಪರಿಶೀಲನ ಪ್ರಕ್ರಿಯೆಗೆ ಹಾಕಿ.
ಹಂತ-05: ನಂತರ ಅಪ್ಲಿಕೇಶನ್ ಸ್ಪೀಕರಿಸಲು ಸೇರಿಸಿ ಬಟನ್ ಮೇಲೆ ನೀವು ಹತ್ತಬೇಕಾಗುತ್ತದೆ ನಂತರ ಅದರ ಮುಂದೆ ಕೇಳಿದೆ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ನಮೂದಿಸಿ ಹೀಗೆ ಮಾಡುವುದರಿಂದ ಹೊಸ ಪಡಿತರ ಚೀಟಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಪೂರ್ಣಗೊಳ್ಳುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು?
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
- ವಿಳಾಸ ಪುರಾವೆ
- ಗುರುತಿನ ಪುರಾವೆ
- ವಯಸ್ಸನ್ನು ಪ್ರಮಾಣಿಕರಿಸುವ ದಾಖಲೆ
- ಬ್ಯಾಂಕ್ ಖಾತೆ ವಿವರಗಳು
- ಕುಟುಂಬದ ಸದಸ್ಯರ ಎಲ್ಲರ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
ಈ ಮೇಲೆ ಕಾಣುತ್ತಿರುವ ಎಲ್ಲಾ ದಾಖಲೆಗಳನ್ನು ನೀವು ಮೊದಲು ತಯಾರು ಮಾಡಿ ಇಟ್ಟುಕೊಂಡು ನಂತರ ಅರ್ಜಿ ಸಲ್ಲಿಸಬಹುದು. ಈ ರೀತಿಯಾಗಿ ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿರುತ್ತದೆ ಅದನ್ನು ಬಳಸಿಕೊಂಡು ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.