ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ಪ್ರಕಟಣೆ! ತಿದ್ದುಪಡಿ ಕೂಡ ಮಾಡಿಸಬಹುದು!

New Ration Card and Update: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವೇನಾದರೂ ಹೊಸ ರೇಷನ್ ಕಾರ್ಡ್(New Ration Card)ಗಳಿಗೆ ಅರ್ಜಿ ಸಲ್ಲಿಸಲು ಕಾದುಕೊಳ್ಳುತ್ತಿದ್ದೀರಾ? ಅಥವಾ ರೇಷನ್ ಕಾರ್ಡ್ ತಿದ್ದುಪಡಿ(Ration Card Correction)ಮಾಡಿಸಲು ಕಾದು ಕುಳಿತಿದ್ದೀರಾ? ನಿಮಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು ಲೇಖನವನ್ನು ಕೊನೆಯವರೆಗೂ ಓದಿ.

New Ration Card and Update

ನಿಮಗೆಲ್ಲ ತಿಳಿದಿರುವ ಹಾಗೆ ಕೆಲವು ದಿನಗಳ ಹಿಂದೆ ಲೋಕಸಭಾ ಚುನಾವಣೆ(Loksabha Election)ಯ ನಡೆದಿದ್ದು ಅದರ ಫಲಿತಾಂಶಕ್ಕಾಗಿ ಇಲ್ಲಿಯವರೆಗೆ ಕಾದು ಕುಳಿತಿದ್ದೆವು. ಮಧ್ಯದಲ್ಲಿ ಕೆಲವೊಂದಿಷ್ಟು ಸಲ ರೇಷನ್ ಕಾರ್ಡ್(Ration Card)ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಅದರ ಕೆಲವು ಜನ ಸರ್ವರ್ ದೋಷಗಳಿಂದ ಅಪ್ಡೇಟ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂಥವರಿಗೆ ಯಾವ ದಿನದಂದು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಸಿಗುವುದು ಎಂದು ತಿಳಿದುಕೊಳ್ಳಿ.

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಯಾವಾಗ ಅವಕಾಶ?

ಸ್ನೇಹಿತರೆ ಜೂನ್ 4ನೇ ತಾರೀಕಿನಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆ ಯಾಗಲಿದೆ. ಅದರ ನಂತರ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂಬ ಮಾಹಿತಿಯು ಖಾಸಗಿ ಮಾಧ್ಯಮಗಳಿಂದ ತಿಳಿದುಬಂದಿದೆ.

ಇನ್ನೂ ಹೇಳುವುದಾದರೆ ಜೂನ್ 6ನೇ ತಾರೀಕಿನಂದು ಹೊಸ ರೇಷನ್ ಕಾರ್ಡ್(New BPL Card)ಗಳಿಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗುವ ಮಾಹಿತಿಯು ತಿಳಿದು ಬಂದಿದೆ.

ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

  • ಕುಟುಂಬದ ಮುಖ್ಯಸ್ಥರ ಮತ್ತು ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಇತ್ತೀಚಿನ ಭಾವಚಿತ್ರಗಳು.
  • ಮೊಬೈಲ್ ನಂಬರ್ ಆಧಾರ್ ಕಾರ್ಡ್ ನೊಂದಿಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು.
  • ಜನನ ಪ್ರಮಾಣ ಪತ್ರ (6 ವರ್ಷದ ಕೆಳಗಿರುವ ಮಕ್ಕಳಿಗೆ ಕಡ್ಡಾಯ).

ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವ ಮೊದಲು ನೀವು ಈ ಮೇಲೆ ಕೊಟ್ಟಿರುವ ದಾಖಲೆಗಳನ್ನು ಸರಿಪಡಿಸಿ ಇಟ್ಟುಕೊಂಡಿರಿ. ಅರ್ಜಿ ಸಲ್ಲಿಸಲು ಅವಕಾಶವನ್ನು ಕೊಟ್ಟ ತಕ್ಷಣ ನೀವು ಕ್ಷಣಮಾತ್ರದಲ್ಲಿ ಅರ್ಜಿ ಸಲ್ಲಿಸಬಹುದು.

ಹೊಸ ರೇಷನ್ ಕಾರ್ಡ್ ಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ನೀವೇನಾದರೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕಾ? ಅಥವಾ ತಿದ್ದುಪಡಿ ಮಾಡಿಸಬೇಕಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಅಥವಾ ಗ್ರಾಮ ಒನ್ ಕೇಂದ್ರ ಕರ್ನಾಟಕ ಒನ್ ಕೇಂದ್ರ ಹೀಗೆ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now