ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ಹೊಸ ರೇಷನ್ ಕಾರ್ಡ್ಗಳಿಗೆ ಯಾವ ನಿಗದಿ ತಿಂಗಳಿನಲ್ಲಿ ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ನೀವು ಕೂಡ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಈ ಒಂದು ಮಾಹಿತಿಯನ್ನು ತಿಳಿದು, ಆ ಒಂದು ತಿಂಗಳಿನಲ್ಲಿಯೇ ನೀವು ಕೂಡ ಆನ್ಲೈನ್ ಮುಖಾಂತರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿರಿ. ಆ ರೇಷನ್ ಕಾರ್ಡ್ ನಿಮಗೆ ದೊರೆತರೆ, ಎಲ್ಲಾ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಕೂಡ ನೀವು ಪಡೆದುಕೊಳ್ಳಬಹುದು.
ಒಂದುವರೆ ವರ್ಷದಿಂದಲೂ ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿರಲಿಲ್ಲ.
ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಲಕ್ಷಾಂತರ ಜನರು ಕಾಯುತ್ತಿದ್ದಾರೆ. ಏಕೆಂದರೆ ಆ ಒಂದು ರೇಷನ್ ಕಾರ್ಡ್ಗಳ ಮುಖಾಂತರ ಉಚಿತವಾದ ಧಾನ್ಯಗಳನ್ನು ಕೂಡ ಪಡೆಯಬಹುದು. ಹಾಗೂ ಇನ್ನಿತರ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ. ಗೃಹಲಕ್ಷ್ಮಿ ಯೋಜನೆ ಮುಖಾಂತರ ರೇಷನ್ ಕಾರ್ಡ್ ಗಳನ್ನು ಯಾರೆಲ್ಲಾ ಪಡೆದುಕೊಂಡಿರುತ್ತಾರೋ ಅಂತವರು ಹಣವನ್ನು ಪ್ರತಿ ತಿಂಗಳು ಪಡೆಯಲು ಅರ್ಹರಾಗಿರುತ್ತಾರೆ.
ಆದ್ದರಿಂದ ಎಲ್ಲಾ ಸಾಮಾನ್ಯ ಜನರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಹೊಸ ಅರ್ಜಿಯನ್ನು ಸಲ್ಲಿಸಲು ಮುಂದಾಗಿದ್ದಾರೆ. ಲಕ್ಷಾಂತರ ಜನರು ಈ ರೇಷನ್ ಕಾರ್ಡ್ ಗಳಿಗೆ ಕಾಯುತ್ತಿದ್ದಾರೆ. ಯಾವ ನಿಗದಿ ತಿಂಗಳಿನಲ್ಲಿ ಅವರು ಅರ್ಜಿಯನ್ನು ಈ ಹೊಸ ರೇಷನ್ ಕಾರ್ಡ್ ಗಳಿಗೆ ಸಲ್ಲಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ.
ತಿದ್ದುಪಡಿಗೂ ಕೂಡ ಅವಕಾಶ ಮಾಡಿ ಕೊಟ್ಟಿತ್ತು ಆಹಾರ ಇಲಾಖೆ.
ಹೌದು ಸ್ನೇಹಿತರೆ ಹಲವಾರು ತಿಂಗಳಿನಿಂದಲೂ ಕೂಡ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಟ್ಟಿದ್ದು, ಎಲ್ಲಾ ಸಾಮಾನ್ಯ ಜನರು ಕೂಡ ತಿದ್ದುಪಡಿಯನ್ನು ಮಾಡಿಸಲು ಮುಂದಾದರು. ಆದರೆ ಕೆಲವೊಂದು ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಿಂದ ಕೂಡ ತಿದ್ದುಪಡಿ ಮಾಡಲು ಸಾಧ್ಯವಾಗದ ಕಾರಣದಿಂದ ಅಭ್ಯರ್ಥಿಗಳು ಇದುವರೆಗೂ ಕೂಡ ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ. ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಂಡು ಮತ್ತೆ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ ಎಂಬ ಬೇಸರದ ಸಂಗತಿಯಲ್ಲಿಯೇ ಕಾಯುತ್ತಿದ್ದಾರೆ.
ಸರ್ಕಾರ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶವನ್ನು ಇನ್ಮುಂದೆ ಕೂಡ ನೀಡುತ್ತದೆ. ಒಟ್ಟಾರೆ ತಾಳ್ಮೆಯಿಂದ ಕಾದು ಯಾವಾಗ ಆಹಾರ ಇಲಾಖೆ ಈ ಒಂದು ಮಾಹಿತಿಯ ಬಗ್ಗೆ ಹೆಚ್ಚಿನ ಒಳ್ಳೆಯ ಸುದ್ದಿಯನ್ನು ಬಿಡುಗಡೆ ಮಾಡುತ್ತಯೋ, ಆ ಸಂದರ್ಭದಲ್ಲಿ ನೀವು ತಿದ್ದುಪಡಿಯನ್ನು ಕೂಡ ಮಾಡಬಹುದಾಗಿದೆ.
ಈ ನಿಗದಿ ತಿಂಗಳಿನಲ್ಲಿಯೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಲೋಕಸಭಾ ಚುನಾವಣೆ ಇದೇ ತಿಂಗಳಿನಲ್ಲಿಯೇ ನಡೆಯುತ್ತದೆ. ಆ ಚುನಾವಣೆ ನಡೆದ ಬಳಿಕ ಫಲಿತಾಂಶವೂ ಕೂಡ ಬಿಡುಗಡೆಯಾಗುತ್ತದೆ. ಆದ ಬಳಿಕವೇ ಹೊಸ ರೇಷನ್ ಕಾರ್ಡ್ಗಳ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕಲ್ಪಿಸಿ ಕೊಡುವುದು, ಆದ್ದರಿಂದ ಆ ಒಂದು ಚುನಾವಣೆಯ ಫಲಿತಾಂಶವೂ ಕೂಡ ಜೂನ್ ನಾಲ್ಕರಂದು ಬಿಡುಗಡೆಯಾಗುತ್ತದೆ.
ಬಳಿಕ ನೀವು ಜೂನ್ 5 ರಲ್ಲಿ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ನಿಮ್ಮ ಹತ್ತಿರ ಒಂದು ಫೋನ್ ಇದ್ರೆ ಸಾಕು, ಆ ಫೋನ್ ಗಳನ್ನು ಬಳಸಿಕೊಂಡು ಕೂಡ ಆನ್ಲೈನ್ ನಲ್ಲಿ ನಿಮ್ಮ ದಾಖಲಾತಿಗಳನ್ನೆಲ್ಲ ಸಲ್ಲಿಕೆ ಮಾಡುವ ಮುಖಾಂತರ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಕಳೆದ ವರ್ಷ ಮೇ ತಿಂಗಳಿನಲ್ಲಿ ಚುನಾವಣೆ ಕೂಡ ನಡೆದಿತ್ತು. ಆ ಒಂದು ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಕೂಡ ಜಾರಿಗೆ ತರಲಾಯಿತು. ಆ ಯೋಜನೆಗಳನ್ನೆಲ್ಲ ಜಾರಿ ತಂದ ಬಳಿಕ ಸರ್ಕಾರ ಒಂದು ಹೊಸ ನಿಯಮವನ್ನು ಜಾರಿಗೊಳಿಸಿದ್ದು, ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಒಂದಿರುತ್ತಾರೋ ಅಂತವರೆಲ್ಲರೂ ಕೂಡ ಪಂಚ ಗ್ಯಾರಂಟಿ ಯೋಜನೆಗಳ ಮುಖಾಂತರ ಸಾಕಷ್ಟು ಪ್ರಯೋಜನಕಾರಿಯಾದ ಸೌಲಭ್ಯವನ್ನು ಕೂಡ ಪಡೆಯಬಹುದು ಎಂದು ಸರ್ಕಾರ ಒಂದು ಹೊಸ ನಿಯಮವನ್ನು ಕೂಡ ಜಾರಿಗೊಳಿಸಿತು.
ಆ ಎಲ್ಲಾ ಹೊಸ ನಿಯಮವನ್ನು ಕಂಡುಕೊಂಡ ಜನರು ಎಲ್ಲರೂ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಮುಂದಾದರು. ಆದರೆ ಸರ್ಕಾರ ಈ ಒಂದು ಅರ್ಜಿ ಸಲ್ಲಿಕೆಗೆ ಕೂಡ ಅವಕಾಶವನ್ನು ನೀಡಲಿಲ್ಲ. ಏಕೆಂದರೆ ಮುಂಚಿತ ದಿನಗಳಲ್ಲಿಯೇ ಸರ್ಕಾರಕ್ಕೆ ಗೊತ್ತಿತ್ತು, ಲಕ್ಷಾಂತರ ಜನರು ಈ ಯೋಜನೆಗಳನ್ನು ಜಾರಿಗೊಳಿಸಿದ ಬಳಿಕವೇ ಲಕ್ಷಾಂತರ ರೇಷನ್ ಕಾರ್ಡ್ ಗಳನ್ನು ಅರ್ಜಿ ಸಲ್ಲಿಕೆ ಕೂಡ ಆಗುತ್ತವೆ. ಆದ್ದರಿಂದ ನಾವು ಈ ಒಂದು ವರ್ಷದಲ್ಲಿ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಕೂಡ ಅವಕಾಶವನ್ನು ನೀಡಬಾರದು ಎಂದು ಸರ್ಕಾರ ಮುಂಚಿತವಾಗಿಯೇ ಒಂದು ನಿರ್ಧಾರವನ್ನು ಮಾಡಿ, 2023 ನೇ ಸಾಲಿನಲ್ಲಿ ಯಾವುದೇ ರೀತಿಯ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕೂಡ ಮಾಡಿಕೊಡಲಿಲ್ಲ.
ಆದ್ದರಿಂದ ಎಲ್ಲಾ ಲಕ್ಷಾಂತರ ಜನರು ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆ ಒಂದು ಸಂದರ್ಭ ಮುಂದಿನ ತಿಂಗಳಿನಲ್ಲಿಯೇ ಬರುತ್ತದೆ. ಆ ಒಂದು ದಿನದಲ್ಲಿ ನೀವು ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ. ಇವತ್ತಿನ ದಿನದಂದು ಯಾವೆಲ್ಲ ದಾಖಲಾತಿಗಳು ಬೇಕು ಎಂಬುದನ್ನು ತಿಳಿದುಕೊಂಡು ಆ ಎಲ್ಲಾ ದಾಖಲಾತಿಗಳನ್ನು ಕೂಡ ಒಂದು ಕಡೆ ಎತ್ತಿಟ್ಟುಕೊಂಡು ಆ ನಿಗದಿ ದಿನ ಬಂದ ನಂತರ ಅರ್ಜಿಯನ್ನು ಕೂಡ ಸುಲಭವಾಗಿ ಸಲ್ಲಿಕೆ ಮಾಡಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…