ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…. ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ, ಹೊಸ ರೇಷನ್ ಕಾರ್ಡ್ ಗೆ ಸರ್ಕಾರವು ಏಪ್ರಿಲ್ ಒಂದನೇ ತಾರೀಖಿನಿಂದಲೂ ಕೂಡ ಅರ್ಜಿಯನ್ನು ಸಲ್ಲಿಸಲು ಅನುವು ಮಾಡಿಕೊಟ್ಟಿದೆ, ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಲು ಆಫ್ಲೈನ್ ಮುಖಾಂತರವೂ ಕೂಡ ಲಭ್ಯವಿದೆ ಆದರೆ ನೀವೇನಾದರೂ ಮೊಬೈಲ್ ಮುಖಾಂತರವೇ ಸುಲಭವಾಗಿ ರೇಷನ್ ಕಾರ್ಡ್ ಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆವರೆಗೂ ನೋಡಿ ಉಪಯುಕ್ತವಾದಂತ ಮಾಹಿತಿಯನ್ನು ಪಡೆದುಕೊಳ್ಳಿ.
ಸ್ನೇಹಿತರೆ ಈಗಾಗಲೇ ಗೊತ್ತಾಗಿದೆ ಹೊಸ ರೇಷನ್ ಕಾರ್ಡ್ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಕೂಡ ಯಾವುದೇ ರೀತಿಯಾದಂತಹ ಮುಕ್ತಾಯ ದಿನಾಂಕವನ್ನು ಸರ್ಕಾರವು ಪ್ರಕಟಿಸಿಲ್ಲ ಏಪ್ರಿಲ್ ನಿಂದ ಆರಂಭ ಮಾಡಿದೆ ರೇಷನ್ ಕಾರ್ಡ್ ಎಂಬುದು, ಅತಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಇದು ಎಲ್ಲರಿಗೆ ಅಗತ್ಯವಾಗಿರುವಂತಹ ಒಂದು ದಾಖಲೆ. ಇದರಿಂದ ಹಲವಾರು ರೀತಿಯ ಪ್ರಯೋಜನಗಳು ಜನಗಳಿಗೆ ಸಿಗುತ್ತವೆ, ಯಾವ ಯಾವ ಪ್ರಯೋಜನಗಳು ಸಿಗುತ್ತವೆ ಎಂದರೆ, ಇದರ ಮುಖಾಂತರ ಅಕ್ಕಿಯನ್ನು ಮತ್ತು ಧಾನ್ಯಗಳನ್ನು ಕೂಡ ಪಡೆದುಕೊಳ್ಳಬಹುದು.
ಜೊತೆಗೆ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಕೂಡ ಈ ಒಂದು ರೇಷನ್ ಕಾರ್ಡ್ ತುಂಬಾ ಮುಖ್ಯವಾಗುತ್ತದೆ. ಅದೇ ರೀತಿಯಾಗಿ ಆರೋಗ್ಯ ಸರಿಪಡಿಸಿಕೊಳ್ಳಲು ಆಸ್ಪತ್ರೆಗೆ ತೋರಿಸುವಲ್ಲಿಯೂ ಕೂಡ ಈ ಒಂದು ರೇಷನ್ ಕಾರ್ಡ್ ತುಂಬಾ ಅನುಕೂಲವಾಗುತ್ತದೆ.
ಸರ್ಕಾರ ಯಾವುದೇ ಒಂದು ಯೋಜನೆಯನ್ನು ಜಾರಿಗೆ ತಂದರೆ ಮುಖ್ಯವಾಗಿ ಅದಕ್ಕೆ ರೇಷನ್ ಕಾರ್ಡ್ ಎಂಬುವುದು ದಾಖಲೆ ಅತಿ ಮುಖ್ಯವಾಗಿರುತ್ತದೆ. ರೇಷನ್ ಕಾರ್ಡ್ ಅನ್ನು ಹೊಂದಿಲ್ಲ ಎಂದರೆ ಯಾವುದೇ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ, ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಕೂಡ ಪಡೆಯಲು ಸಾಧ್ಯವಿಲ್ಲ.ಹಾಗಾ ಗಿರೇಷನ್ ಕಾರ್ಡ್ ಎಲ್ಲರಿಗೂ ತುಂಬಾ ಅನುಕೂಲವಾಗಿರುವಂಥದ್ದು,
ಸರ್ಕಾರವು ಈಗಾಗಲೇ ಹಲವಾರು ರೇಷನ್ ಕಾರ್ಡುಗಳನ್ನು ರದ್ದು ಮಾಡಿದೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ನಕಲಿ ರೇಷನ್ ಕಾರ್ಡ್ ಗಳನ್ನು ಕೂಡ ಬಳಸಿಕೊಂಡು ಧಾನ್ಯಗಳನ್ನು ಪಡೆಯುತ್ತಿದ್ದಾರೆ ಮತ್ತು ಒಂದೇ ಮನೆಯಲ್ಲಿ ವಾಸವಾಗಿದ್ದು ಎರಡು ಮೂರು ರೇಷನ್ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ. ಯಾರಿಗೆ ಅಗತ್ಯವಿದೆಯೋ ಅವರು ಮಾತ್ರ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಿದೆ. ಅನಗತ್ಯವಾಗಿ ಉಪಯೋಗಿಸುವವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಮುಖ್ಯವಾಗಿ ಹೊಂದಿರಬೇಕಾದಂತಹ ಅರ್ಹತೆಗಳು ಯಾವುವು ಎಂದರೆ :-
- ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
- 18 ವರ್ಷ ಮೇಲ್ಪಟ್ಟವರು ಮಾತ್ರ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯ
- ನಿಮ್ಮ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರಿಯಲ್ಲಿದ್ದರೆ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ ಏಕೆಂದರೆ ಸರ್ಕಾರಿ ಕೆಲಸವನ್ನು ಹೊಂದಿದವರಿಗೆ ರೇಷನ್ ಕಾರ್ಡನ್ನು ನೀಡುವುದಿಲ್ಲ ಸರ್ಕಾರ.
- ಈಗಾಗಲೇ ರೇಷನ್ ಕಾರ್ಡನ್ನು ಹೊಂದಿದ್ದು ಮತ್ತೆ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ ನೀವು ರೇಷನ್ ಕಾರ್ಡನ್ನು ಒಂದೇ ಇಲ್ಲ ಎಂದರೆ ಮಾತ್ರ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯ.
- ಐದು ಅಥವಾ ಅದಕ್ಕಿಂತ ಹೆಚ್ಚು ಎಕ್ಕರೆ ಜಮೀನನ್ನು ಹೊಂದಿದವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅಗತ್ಯವಾಗಿರುವಂತಹ ದಾಖಲೆಗಳು ಯಾವುವು ಎಂದರೆ :
- ನಿಮ್ಮ ವೋಟರ್ ಐಡಿ
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಡ್ರೈವಿಂಗ್ ಲೈಸೆನ್ಸ್
- ಕುಟುಂಬದ ಎಲ್ಲಾ ಸದಸ್ಯರ ವಿವರ ಮತ್ತು ಅವರ ಆಧಾರ್ ಕಾರ್ಡ್ ಗಳು
- ನೋಂದಾಯಿತ ಮೊಬೈಲ್ ಸಂಖ್ಯೆ
- ವಿದ್ಯುತ್ ಬಿಲ್
- ಕುಟುಂಬದ ಎಲ್ಲಾ ಸದಸ್ಯರ ಫೋಟೋ
ಈಗ ನಾನು ತಿಳಿಸಿದಂತಹ ಎಲ್ಲಾ ದಾಖಲೆಗಳು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅಗತ್ಯವಾಗಿರುವಂತಹ ದಾಖಲೆಗಳಾಗಿರುತ್ತವೆ. ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಈ ಎಲ್ಲಾ ದಾಖಲೆಗಳನ್ನು ಕೂಡ ಬಂದಿರಲೇಬೇಕು.
ಹೊಸ ರೇಷನ್ ಕಾರ್ಡಿಗೆ ಯಾವ ರೀತಿಯಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು ಎಂದರೆ :
- ಮೊದಲಿಗೆ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು,
- ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸುವ ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
- ನಂತರ ಅಲ್ಲಿ ನಿಮ್ಮ ವಿಳಾಸವನ್ನು ನೀಡಲಾಗುತ್ತದೆ ನಿಮ್ಮ ಶಾಶ್ವತ ವಿಳಾಸವನ್ನು ಟೈಪ್ ಮಾಡಿ.
- ನಂತರ ನೀವು ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಈ ಮೂರು ಆಪ್ಷನ್ ನಲ್ಲಿ ಬಂದು ಆಪ್ಷನ್ ಅನ್ನು ಆಯ್ಕೆ ಮಾಡಿ ನಿಮಗೆ ಯಾವ ಕಾರ್ಡ್ ಬೇಕೋ ಆ ಕಾರ್ಡನ್ನು ಆಯ್ಕೆ ಮಾಡಿಕೊಳ್ಳಿ.
- ಬಳಿಕ ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಭರ್ತಿ ಮಾಡಿ.
- ಇದಾದ ನಂತರ ಸಂಬಂಧಪಟ್ಟಂತಹ ದಾಖಲಾತಿಗಳನ್ನು ಕೂಡ ಅಪ್ಲೋಡ್ ಮಾಡಿ.
- ಇದೆಲ್ಲಾ ಆದ ನಂತರ ನಿಮಗೆ ಎಕ್ನೋಲೆಜ್ಮೆಂಟ್ ಸಂಖ್ಯೆಯನ್ನು ಕೊಡಲಾಗುತ್ತದೆ. ಇದು ಪಡಿತರ ಚೀಟಿಯ ಸ್ಥಿತಿಯನ್ನು ಚೆಕ್ ಮಾಡಲು ಸಹಾಯಮಾಡುತ್ತದೆ.
- ನಿಮ್ಮ ಅರ್ಜಿ ಸಂಪೂರ್ಣವಾಗಿ ಸ್ವೀಕಾರವಾದ ನಂತರ 15 ರಿಂದ ಒಂದು ತಿಂಗಳ ಒಳಗಡೆ ಹೊಸ ರೇಷನ್ ಕಾರ್ಡ್ ನಿಮ್ಮ ಕೈಗೆ ಬಂದು ಸೇರುತ್ತದೆ.
ನೀವು ಆನ್ಲೈನ್ ಮುಖಾಂತರ ಸಲ್ಲಿಸುವುದು ಸ್ವಲ್ಪ ಕಷ್ಟವಾಗುತ್ತದೆ ಎಂದರೆ ನೀವು ಆಫ್ಲೈನ್ ಮುಖಾಂತರವೂ ಕೂಡ ರೇಷನ್ ಕಾರ್ಡ್ ಗೆ ಹೊಸದಾಗಿ ಅರ್ಜಿಯನ್ನು ಕೂಡ ಸಲ್ಲಿಸಬಹುದು ಯಾವುದೇ ರೀತಿಯ ಸಮಸ್ಯೆ ಇಲ್ಲ ಒಟ್ಟಾರೆ ನೀವು ಆನ್ಲೈನ್ ಮುಖಾಂತರವಾದರೂ ಸಲ್ಲಿಸಬಹುದು ಅಥವಾ ಆಫ್ ಲೈನ್ ಮುಖಾಂತರವಾದರೂ ಅರ್ಜಿಯನ್ನು ಸಲ್ಲಿಸಿಯೋ ರೇಷನ್ ಕಾರ್ಡನ್ನು ಪಡೆಯಬಹುದು ಎರಡಕ್ಕೂ ಕೂಡ ಸರ್ಕಾರವು ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…