ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವೇನಾದರೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾ? ಅಥವಾ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಕಾದು ಕುಳಿತಿದ್ದೀರಾ? ನಿಮಗೆ ಒಂದು ಸೂಕ್ತವಾದ ಮಾಹಿತಿಯನ್ನು ನೀಡಲು ಈ ಲೇಖನವನ್ನು ಕೊನೆಯವರೆಗೂ ಓದಿ.
ನೀವು ಈ ತರಹದ ಸುದ್ದಿಗಳನ್ನು ಓದಲು ಇಷ್ಟಪಡುತ್ತಿದ್ದರೆ ನೀವು ನಮ್ಮ ಜಾಲತಾಣದ ಚಂದದಾರರಾಗಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಅಲ್ಲಿ ನಿಮಗೆ ಇದೇ ತರಹದ ಸುದ್ದಿಗಳು ದಿನ ನಿತ್ಯವೂ ಕೂಡ ಉಚಿತವಾಗಿ ದೊರಕುತ್ತವೆ.
ಹೊಸ ರೇಷನ್ ಕಾರ್ಡ್ ಅರ್ಜಿಗಳು ಯಾವಾಗ ಆರಂಭ?
ಕೆಲವು ದಿನಗಳ ಹಿಂದೆ ಅಂದರೆ 21ನೇ ತಾರೀಕು ಮೇ ತಿಂಗಳ ದಿನದಂದು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಅದಾದ ನಂತರ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಜೂನ್ 7ರ ನಂತರ ಅವಕಾಶ ಕಲ್ಪಿಸಿಕೊಡಲಾಗುವುದು ಎಂಬ ಸುಳಿವು ಇದೆ.
ಜೂನ್ 7 ರವರೆಗೂ ಯಾವುದೇ ರೀತಿಯ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಿ ಕೊಡುವ ಯಾವುದೇ ಸಂಭವ ಇಲ್ಲ. ಆದಕಾರಣ ಯಾವುದೇ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ. ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಸುಲಭವಾದ ಮಾರ್ಗವನ್ನು ಈ ಕೆಳಗೆ ನೀಡಿರುತ್ತೇನೆ ನೋಡಿ.
ನೀವೇನಾದರೂ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಬೇಕಾ? ಅಥವಾ ತಿದ್ದುಪಡಿ ಮಾಡಿಸಬೇಕಾ? ನೀವು ಮಾಡಬೇಕಾದದ್ದು ಇಷ್ಟೇ, ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಬೇಕಾಗುವ ದಾಖಲೆಗಳನ್ನು ಮೊದಲು ಕೊಟ್ಟಿರಿ, ಯಾಕೆಂದರೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಕೆಲವೇ ಗಂಟೆಗಳ ಕಾಲಾವಕಾಶ ಕಲ್ಪಿಸಿಕೊಡಲಗುವುದರಿಂದ, ಸಮಯದ ಅಭಾವ ಇರುತ್ತದೆ ಆದಕಾರಣ ಆದಷ್ಟು ಬೇಗ ಅವರು ನಿಮ್ಮ ದಾಖಲೆಗಳನ್ನು ನೋಡಿಕೊಂಡು ಅರ್ಜಿ ಸಲ್ಲಿಸುತ್ತಾರೆ.
ಓದುಗರ ಗಮನಕ್ಕೆ: ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಯಾವುದೇ ರೀತಿಯ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸರ್ಕಾರದ ಕಡೆಯಿಂದ ಅವಕಾಶ ಕಲ್ಪಿಸಿ ಕೊಟ್ಟಾಗ ತಿದ್ದುಪಡಿ ಮಾಡಿಸತಕ್ಕದ್ದು ನಿಮ್ಮ ಜವಾಬ್ದಾರಿ. ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಟ್ಟ ತಕ್ಷಣವೇ ನಿಮಗೆ ತಿಳಿಸುವುದು ನಮ್ಮ ಜವಾಬ್ದಾರಿ ಆಗಿರುತ್ತದೆ.