ಎಲ್ಲರಿಗೂ ನಮಸ್ಕಾರ ಸ್ನೇಹಿತರೇ…. ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರವು ಅವಕಾಶ ನೀಡಿದೆ. ನೀವು ಕೇಳಬಹುದು ಯಾವ ದಿನಾಂಕದಂದು ಅರ್ಜಿಯನ್ನು ಸಲ್ಲಿಸಬೇಕು ಎಂದು ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ದಿನಾಂಕ ಯಾವುದು ಎಂಬ ಎಲ್ಲಾ ಉಪಯುಕ್ತವಾದಂತ ಮಾಹಿತಿಯನ್ನು ಪಡೆದುಕೊಳ್ಳಿ.
ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಪಡೆದುಕೊಳ್ಳಿರಿ. ಸರ್ಕಾರವು ಈಗಾಗಲೇ ಎರಡು ವರ್ಷಗಳಿಂದಲೂ ಕೂಡ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವಂತಹ ಆಯ್ಕೆಯನ್ನು ಜನರಿಗೆ ನೀಡಿರಲಿಲ್ಲ ಆದರೆ ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವಂತಹ ಅವಕಾಶವನ್ನು ಕಲ್ಪಿಸಿದೆ, ರೇಷನ್ ಕಾರ್ಡ್ ಎಂಬುದು ಪ್ರತಿಯೊಬ್ಬರಿಗೂ ಬೇಕಾದಂತಹ ಮುಖ್ಯ ದಾಖಲೆ ಏಕೆಂದರೆ ಸರ್ಕಾರದ ಯಾವುದೇ ರೀತಿಯ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕು ಎಂದರೆ ರೇಷನ್ ಕಾರ್ಡ್ ತುಂಬಾ ಮುಖ್ಯವಾಗಿರುತ್ತದೆ.
ಅದರಿಂದ ರೇಷನ್ ಕಾರ್ಡ್ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಉಪಯೋಗವಾಗುತ್ತದೆ. ನೀವೇನಾದ್ರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಂದುಕೊಂಡಿದ್ದೀರಾ ಹಾಗಿದ್ದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ದಿನಾಂಕ ಯಾವುದು ಎಂದರೆ ಜೂನ್ ನಾಲ್ಕನೇ ತಾರೀಕಿನಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವು ಸಿಗುತ್ತದೆ. ಈಗಾಗಲೇ ಅವಕಾಶ ಸಿಕ್ಕಿದೆ.
ಆದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವಂತಹ ಲಿಂಕ್ ಓಪನ್ ಆಗುವುದು ಜೂನ್ 4 ರಿಂದ ಮಾತ್ರ,ಗ್ರಾಮವನ್ ಕೇಂದ್ರಗಳಲ್ಲೂ ಕೂಡ ಜೂನ್ ನಾಲ್ಕನೇ ತಾರೀಕಿನಿಂದ ಅರ್ಜಿಯನ್ನು ಸಲ್ಲಿಸಲು ಆರಂಭಿಸುತ್ತಾರೆ ನೀವು ಈಗ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದರೆ ಅದು ಸಾಧ್ಯವಿಲ್ಲ ಜೂನ್ ಜೂನ್ 4ನೇ ತಾರೀಖಿನಿಂದ ಅರ್ಜಿ ಆರಂಭವಾಗುತ್ತದೆ ಆದ್ದರಿಂದ ನೀವು ಕೂಡ ಏನಾದರೂ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಜೂನ್ 4ನೇ ತಾರೀಕು ಅರ್ಜಿಯನ್ನು ಸಲ್ಲಿಸಿ.
ಸರ್ಕಾರವು ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದು ಈಗಾಗಲೇ ಸಾವಿರಾರು ರೇಷನ್ ಕಾರ್ಡುಗಳನ್ನು ರದ್ದುಗೊಳಿಸಿದೆ ಏಕೆಂದರೆ ಅನಗತ್ಯವಾಗಿ ಉಪಯೋಗಿಸಿಕೊಳ್ಳುತ್ತಿದ್ದಂತವರ ರೇಷನ್ ಕಾರ್ಡುಗಳನ್ನು ಸರ್ಕಾರವು ರದ್ದುಗೊಳಿಸಿದೆ ಯಾರಿಗೆ ಅವಶ್ಯಕತೆ ಇದೆಯೋ ರೇಷನ್ ಕಾರ್ಡ್ ಅವರಿಗೆ ಮಾತ್ರ ರೇಷನ್ ಕಾರ್ಡನ್ನು ನೀಡಲು ಸರ್ಕಾರವು ಮುಂದಾಗಿದೆ, ಅನಗತ್ಯವಾಗಿ ರೇಷನ್ ಕಾರ್ಡನ್ನು ಉಪಯೋಗಿಸಿಕೊಂಡು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದರೆ.
ವಿನಹ ರೇಷನ್ ಕಾರ್ಡ್ ನಲ್ಲಿ ನೀಡುವಂತಹ ಅಕ್ಕಿಯನ್ನು ಪಡೆಯುತ್ತಿರಲಿಲ್ಲ ಆದ್ದರಿಂದ ಇಂತಹ ರೇಷನ್ ಕಾರ್ಡುಗಳನ್ನು ರದ್ದುಗೊಳಿಸಿದೆ ಅವರಿಗೆಲ್ಲ ರೇಷನ್ ಕಾರ್ಡ್ ಉಪಯೋಗವಿಲ್ಲ ಆದರೆ ಸರ್ಕಾರಿ ಯೋಜನೆಗೆ ಮಾತ್ರ ರೇಷನ್ ಕಾರ್ಡ್ ಬಳಸುತ್ತಿದ್ದರು. ಆದ್ದರಿಂದ ಇಂತಹ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಿ ಈಗ ರೇಷನ್ ಕಾರ್ಡ್ ಇಲ್ಲದೆ ಇರುವಂತವರಿಗೆ ಅಂದರೆ ರೇಷನ್ ಕಾರ್ಡ್ ಅಗತ್ಯವಾಗಿ ಇರುವಂತವರಿಗೆ ಮಾತ್ರ ರೇಷನ್ ಕಾರ್ಡ್ ಅನ್ನು ತಲುಪಿಸಲು ಮುಂದಾಗಿದೆ.
ಸರ್ಕಾರವು ತಂದಿರುವಂತಹ ಪಂಚ ಗ್ಯಾರಂಟಿ ಯೋಜನೆಗಲ್ಲಿ ಎರಡು ಯೋಜನೆಗಳಿಗೆ ರೇಷನ್ ಕಾರ್ಡ್ ಅಲ್ಲಿ ತುಂಬಾ ಮುಖ್ಯವಾದಂತ ದಾಖಲೆ ಏಕೆಂದರೆ ರೇಷನ್ ಕಾರ್ಡ್ ಆಧಾರದ ಮೇಲೆ ಆ ಯೋಜನೆಗಳ ಪ್ರಯೋಜನ ಸಿಗುತ್ತದೆ ಆ ಯೋಜನೆ ಯಾವುದು ಎಂದು ನಿಮಗೆ ಈಗಾಗಲೇ ತಿಳಿದಿರುತ್ತದೆ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ, ಈ ಎರಡು ಯೋಜನೆಗೂ ಕೂಡ ರೇಷನ್ ಕಾರ್ಡ್ ತುಂಬಾ ಮುಖ್ಯವಾದ ಅಂತಹ ದಾಖಲೆ ಅದರಿಂದಾಗಿ ರೇಷನ್ ಕಾರ್ಡ್ ಸರ್ಕಾರವು ತರುವಂತಹ ಎಲ್ಲ ಯೋಜನೆಗಳಿಗೂ ಕೂಡ ಅನುಕೂಲವಾಗಿರುತ್ತದೆ.
ಹಾಗಿದ್ದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅಗತ್ಯವಿರುವಂತಹ ದಾಖಲೆಗಳು ಯಾವುವು ಎಂದರೆ :-
- ಮೊದಲಿಗೆ ಮುಖ್ಯವಾಗಿ ಬೇಕಾಗುವಂತಹ ದಾಖಲೆ ಯಾವುದು ಎಂದರೆ ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್.
- ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
- ಜಾತಿ ಪ್ರಮಾಣ ಪತ್ರ ಆದಾಯ
- ಪ್ರಮಾಣ ಪತ್ರ
- ಪ್ರತಿಯೊಬ್ಬ ಸದಸ್ಯನ ಮೊಬೈಲ್ ಸಂಖ್ಯೆ ಅಂದರೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ.
- ಮನೆಯ ಯಜಮಾನಿಯ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿರಬೇಕು
- ಈಗ ನಾನು ತಿಳಿಸಿದಂತಹ ಎಲ್ಲಾ ದಾಖಲೆಗಳು ಕೂಡ ಅತಿ ಮುಖ್ಯವಾಗಿರುವಂತಹ ದಾಖಲೆಗಳಾಗಿರುತ್ತವೆ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು.
- ಈ ಎಲ್ಲಾ ದಾಖಲೆಗಳಿಗೂ ಕೂಡ ಈಕೆ ವೈಸಿ ಮಾಡಿಸುವದು ಕಡ್ಡಾಯವಾಗಿ ಇರುತ್ತದೆ.
ನೋಡಿದ್ರಲ್ಲ ಸ್ನೇಹಿತರೆ ಯಾವ ರೀತಿಯಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು ಇದಕ್ಕೆ ಅರ್ಜಿಯನ್ನು ಸಲ್ಲಿಸಲು ಆರಂಭವಾಗುವ ದಿನಾಂಕ ಯಾವುದು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…