driving licence: ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ತಿಳಿಸುವಂತಹ ಮಾಹಿತಿ ಯಾವುದೆಂದರೆ ಜೂನ್ ಒಂದರಿಂದ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಗೆ ಹೊಸ ನಿಯಮ ಜಾರಿಯಾಗಲಿದೆ. ಆ ನಿಯಮ ಯಾವುದು ಯಾರಿಗೆಲ್ಲ ಅನ್ವಯವಾಗುತ್ತದೆ ಎಂಬುದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನೀವು ಕೂಡ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಯಾವ ನಿಯಮವೆಂದು ನೋಡಿರಿ.
ಡ್ರೈವಿಂಗ್ ಲೈಸೆನ್ಸ್ {driving licence} ಪಡೆಯಲು ಹೊಸ ನಿಯಮ ಅನ್ವಯ !
ಹಲವಾರು ವರ್ಷಗಳಿಂದಲೂ ಕೂಡ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಸರ್ಕಾರಿ ಪ್ರಾದೇಶಿಕ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರೀಕ್ಷೆಯನ್ನು ಕೂಡ ತೆಗೆದುಕೊಂಡು ಆನಂತರ ಡ್ರೈವಿಂಗ್ ಲೈಸೆನ್ಸ್ ಅನ್ನು ಕೂಡ ಪಡೆಯಬಹುದಾಗಿತ್ತು, ಆದರೆ ಇನ್ಮುಂದೆ ಈ ರೀತಿಯ ಒಂದು ನಿಯಮ ಯಾರಿಗೂ ಕೂಡ ಅನ್ವಯವಾಗುವುದಿಲ್ಲ. ಯಾರೆಲ್ಲ ಮುಂದಿನ ದಿನಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬೇಕೆಂದುಕೊಂಡಿದ್ದೀರಾ ಅಂತವರೆಲ್ಲರೂ ಕೂಡ ಹೊಸ ನಿಯಮದೊಂದಿಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಕೂಡ ಸುಲಭವಾಗಿ ವಿಧಾನದಲ್ಲಿಯೇ ಪಡೆಯಬಹುದಾಗಿದೆ.
ಡ್ರೈವಿಂಗ್ ಲೈಸೆನ್ಸ್{driving licence}ಪಡೆಯಲು RTO ಆಫೀಸ್ಗೆ ಹೋಗಬೇಕೇ ?
ಇನ್ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಆರ್ ಟಿ ಓ ಆಫೀಸ್ ಗೆ ಹೋಗುವಂತಹ ಅವಶ್ಯಕತೆ ಇಲ್ಲ. ಏಕೆಂದರೆ ನೀವು ತರಬೇತಿ ಪಡೆಯುವಂತಹ ಖಾಸಗಿ ವಲಯಗಳ ತರಬೇತಿ ಕೇಂದ್ರಗಳಲ್ಲಿಯೂ ಕೂಡ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದಾಗಿದೆ. ಈ ಒಂದು ನಿಯಮವು ಜೂನ್ ಒಂದರಿಂದ ಜಾರಿಯಾಗಲಿದೆ. ಇದುವರೆಗೂ ಸಾಕಷ್ಟು ವರ್ಷಗಳಿಂದಲೂ ಕೂಡ ಆರ್‌ಟಿಓ ಆಫೀಸ್ ಗಳಿಗೆ ಭೇಟಿ ನೀಡಿ. ಆರ್ ಟಿ ಓ ಗೆ ಹೋಗಿಯೇ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬೇಕಿತ್ತು ಆದರೆ ನೀವು ಕಲಿಯುವಂತಹ ತರಬೇತಿ ಕೇಂದ್ರಗಳಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ಪ್ರಮಾಣ ಪತ್ರವನ್ನು ಕೂಡ ಪಡೆಯಬಹುದು.
ಖಾಸಗಿ ತರಬೇತಿ ಕೇಂದ್ರಗಳಲ್ಲಿಯೂ ಕೂಡ ಶುಲ್ಕವನ್ನು ನೀಡಬೇಕು.
ಈಗಾಗಲೇ ನಿಮ್ಮ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಕೂಡ ಇದ್ದು ಆ ಒಂದು ಡ್ರೈವಿಂಗ್ ಲೈಸೆನ್ಸ್ ನವೀಕರಣವನ್ನು ಮಾಡಿಸಬೇಕು ಎಂದರೆ ನೀವು ಕಡ್ಡಾಯವಾಗಿ ಈ ಒಂದು ಕೇಂದ್ರಗಳಲ್ಲಿಯೇ ಮಾಡಿಸಬಹುದಾಗಿದೆ. 200 ರೂ ಹಣವನ್ನು ಕೇಂದ್ರಕ್ಕೆ ನೀಡಿ ಮತ್ತೆ ನವೀಕರಣ ಪಡೆದಂತಹ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದು. ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾವಿರಾರು ಹಣವನ್ನು ಶುಲ್ಕವಾಗಿ ಪಾವತಿ ಮಾಡಬೇಕು.
ಹಾಗೂ ಶಾಶ್ವತ ಪರವಾನಗಿ ಲೈಸೆನ್ಸ್ ಪಡೆಯಲು 200 ರೂ ಹಣ ಶುಲ್ಕವಾಗಿ ವಿಧಿಸಲಾಗುತ್ತದೆ. ನೀವು ಕಲಿಕಾ ಡ್ರೈವಿಂಗ್ ಲೈಸನ್ಸ್ ಪಡೆಯುವಿರಿ ಎಂದರೆ ಆ ಒಂದು ಡ್ರೈವಿಂಗ್ ಲೈಸನ್ಸ್ ಪಡೆಯಲು ಕೂಡ 200 ರೂ ಹಣ ಶುಲ್ಕವಾಗಿ ಅನ್ವಯವಾಗಲಿದೆ. ಈ ರೀತಿಯಾಗಿ ನಾನಾ ರೀತಿಯ ನವೀಕರಣಗಳಿಗೆ ಹಾಗೂ ಕಲಿಕಾ ತರಬೇತಿಗಳಿಗೆ ಡ್ರೈವಿಂಗ್ ಲೈಸೆನ್ಸ್ ಶುಲ್ಕವು ಕೂಡ ಹಂಚಿಕೆಯಾಗಿದೆ.
ಆನ್ಲೈನ್ ಮುಖಾಂತರ ಡ್ರೈವಿಂಗ್ ಲೈಸೆನ್ಸ್ ಅನ್ನು ಈ ರೀತಿ ಪಡೆದುಕೊಳ್ಳಿ.
ಮೊದಲಿಗೆ ಎಲ್ಲಾ ಅಭ್ಯರ್ಥಿಗಳಿಗೂ ಡ್ರೈವಿಂಗ್ ತರಬೇತಿ ಕಲಿತಿರಬೇಕು. ಆನಂತರ ಆ ವ್ಯಕ್ತಿಗಳು ಈ ಒಂದು ಲಿಂಕನ್ನು ಕ್ಲಿಕ್ಕಿಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡತಕ್ಕದ್ದು. ಭೇಟಿ ನೀಡಿದ ಬಳಿಕ ಅರ್ಜಿ ನಮೂನೆ ತೆಗೆದುಕೊಳ್ಳುತ್ತದೆ. ಆ ಒಂದು ಅರ್ಜಿ ನಮೂನೆಯನ್ನು ನೀವು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು. ತೆಗೆದಿಟ್ಟುಕೊಂಡ ಪ್ರಿಂಟ್ ಔಟ್ ಅನ್ನು ನೀವು ಭರ್ತಿ ಮಾಡತಕ್ಕದ್ದು.
ನಿಮ್ಮೆಲ್ಲ ದಾಖಲಾತಿಗಳನ್ನು ಆ ಒಂದು ಪ್ರಿಂಟೌಟ್ ನಲ್ಲಿ ಬರ್ತಿ ಮಾಡಿ ಅರ್ಜಿ ನಮೂನೆಯನ್ನು ಕೂಡ ನೀವು ಆರ್ ಟಿ ಓ ಆಫೀಸ್ ಗಳಿಗೆ ಹೋಗಿ ಸಲ್ಲಿಕೆ ಮಾಡಬೇಕು. ನಿಮ್ಮ ಡ್ರೈವಿಂಗ್ ಕೌಶಲ್ಯವನ್ನು ಕೂಡ ಆರ್ ಟಿ ಓ ಕಚೇರಿಯ ಸಿಬ್ಬಂದಿಗಳು ಪರಿಶೀಲನೆ ಮಾಡಿ ಆನಂತರ ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಬೇಕು ಇಲ್ಲವೋ ಎಂಬುದನ್ನು ಅವರೇ ನಿಮಗೆ ತಿಳಿಸುತ್ತಾರೆ ಆನಂತರ ನೀವು ಡ್ರೈವಿಂಗ್ ಲೈಸೆನ್ಸ್ ಗಳನ್ನು ಕೂಡ ಪಡೆಯಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…