ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ರಾಷ್ಟ್ರೀಯ ಸ್ಕಾಲರ್ಶಿಪ್ ಪೋರ್ಟಲ್ ಆದ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಅಂದರೆ ಎನ್ ಎಸ್ ಪಿ(NSP) ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಬೇಕಾಗುವ ಲೀಗ್ ಮತ್ತು ಯಾವ ದಾಖಲೆಗಳು ಬೇಕಾಗುತ್ತೆ ಮತ್ತು ಯಾವೆಲ್ಲ ಅರ್ಹತೆಗಳು ಬೇಕಾಗುತ್ತವೆ ಎಂಬುವುದನ್ನು ಇದೇ ಲೇಖನದಲ್ಲಿ ಕೊಟ್ಟಿರುತ್ತೇನೆ ಕೊನೆಯವರೆಗೂ ಓದಿ.
ರಾಷ್ಟ್ರೀಯ ವಿದ್ಯಾರ್ಥಿ ವೇತನ ತಂತ್ರಾಂಶ ಅಂದರೆ ಎನ್ ಎಸ್ ಪಿ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ವತಿಯಿಂದ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಲು ವಿದ್ಯಾರ್ಥಿಗಳಿಗೆ ಆಹ್ವಾನಿಸಲಾಗಿದೆ ಯಾವೆಲ್ಲ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ಬಯಸುತ್ತೀರಾ ಅಂತವರು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಇದೇ ರೀತಿ ಹೆಚ್ಚಿನ ಸುದ್ದಿಗಳು ಮತ್ತು ಉದ್ಯೋಗದ ಮಾಹಿತಿಗಳು ಹಾಗೂ ಕರ್ನಾಟಕ ಸರ್ಕಾರದ ಇತ್ತೀಚಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
NSP Scholarship ಗೆ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:
https://scholarships.gov.in/fresh/loginPage
ಈ ಮೇಲೆ ಇರುವ ಲಿಂಕ್ ಅನ್ನು ಬಳಸಿಕೊಂಡು ನೀವು ಎನ್ ಎಸ್ ಪಿ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಅರ್ಜಿ ಸಲ್ಲಿಸಲು ಕೆಲವು ಮಾಹಿತಿಗಳು ಈ ಕೆಳಗಿದೆ ನೋಡಿ.
NSP ವಿದ್ಯಾರ್ಥಿವೇತನ ಕ್ಕೆ ಅರ್ಜಿಯನ್ನು ಆಹ್ವಾನಿಸಿರುವ ಇಲಾಖೆಗಳ ಇಲ್ಲಿವೆ:
- ಕಾರ್ಮಿಕ ಮತ್ತು ಉದ್ಯೋಗ ಇಲಾಖೆ
- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ
- ಉನ್ನತ ಶಿಕ್ಷಣ ಇಲಾಖೆ
- ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಂಸ್ಥೆ
- ನಾರ್ತ್ ಈಸ್ಟರ್ನ್ ಕೌನ್ಸಿಲ್ [NEC]
- WARB ಗೃಹ ವ್ಯವಹಾರಗಳ ಇಲಾಖೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಇ ಮೇಲ್ ಐಡಿ
- ವಿಳಾಸ
- ಹಿಂದಿನ ವರ್ಷದ ಅಂಕಪಟ್ಟಿ
ಅದೇ ರೀತಿಯಾಗಿ ಎನ್ ಎಸ್ ಪಿ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು ಏಕೆಂದರೆ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ.
ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಟ್ಟು ಅರ್ಜಿಯನ್ನು ಸಲ್ಲಿಸಬಾರದು ಕೊಟ್ಟಿದ್ದೆ ಆದಲ್ಲಿ ರಿಜೆಕ್ಟ್ ಆಗುವ ಸಾಧ್ಯತೆ ತುಂಬಾ ಇರುತ್ತದೆ.
NSP ಸ್ಕಾಲರ್ಶಿಪ್ ಯೋಜನೆಯಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ಎಲ್ಲ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ