ನಮಸ್ಕಾರ ಸ್ನೇಹಿತರೇ…. ಈ ಒಂದು ಲೇಖನದ ಮುಖಾಂತರ ಓಮ್ರಾನ್ ಹೆಲ್ತ್ ಕೇರ್ ಸ್ಕಾಲರ್ಶಿಪ್ ನ ಮಾಹಿತಿಯನ್ನು ನೀಡಲಾಗಿದೆ. ಸಂಪೂರ್ಣವಾದ ಮಾಹಿತಿಯನ್ನು ತಿಳಿದು, ನೀವು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿರಿ. ಈ ಒಂದು ವಿದ್ಯಾರ್ಥಿ ವೇತನದಡಿಯಲ್ಲಿ 20 ಸಾವಿರ ಹಣವನ್ನು ನೀಡಲಾಗುತ್ತದೆ. ಯಾರೆಲ್ಲಾ ಅರ್ಹತಾ ಮಾನದಂಡಗಳ ಶಿಕ್ಷಣವನ್ನು ಪ್ರಸ್ತುತವಾಗಿ ಓದುತ್ತಿದ್ದಾರೋ, ಅಂತಹ ವಿದ್ಯಾರ್ಥಿನಿಯರಿಗೆ ಈ ಒಂದು ವಿದ್ಯಾರ್ಥಿ ವೇತನದ ಹಣ ಕೂಡ ದೊರೆಯುತ್ತದೆ. ಈ ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿರಿ.
ಓಮ್ರಾನ್ ಹೆಲ್ತ್ ಕೇರ್ ಸ್ಕಾಲರ್ಶಿಪ್ 2024 !
ಪ್ರಸ್ತುತವಾಗಿ ಶಿಕ್ಷಣವನ್ನು ಪಡೆಯುತ್ತಿರುವಂತಹ ವಿದ್ಯಾರ್ಥಿಗಳಿಗೆ ಓದಲು ಕಷ್ಟವಾಗುತ್ತಿದೆ ಅಂದರೆ, ಆರ್ಥಿಕವಾದ ಹಣದ ಸಹಾಯವು ಕೂಡ ಬೇಕಾಗುತ್ತದೆ. ಎಂಬುದನ್ನು ವಿದ್ಯಾರ್ಥಿಗಳು ಕೂಡ ಅರಿತುಕೊಂಡಿರುತ್ತಾರೆ. ಏಕೆಂದರೆ ಪುಸ್ತಕಗಳನ್ನು ಖರೀದಿಸಲು ಕೂಡ ಹಣ ಬೇಕು,
ಹಾಗೂ ಇನ್ನಿತರ ಟುಶನ್ ಶುಲ್ಕಗಳಿಗೆ ಮತ್ತು ಇನ್ನಿತರ ಕೆಲಸಗಳಿಗೂ ಕೂಡ ಹಣದ ಅವಶ್ಯಕತೆ ವಿದ್ಯಾರ್ಥಿಗಳಿಗೂ ಕೂಡ ತುಂಬಾ ಇದೆ. ಸಾಕಷ್ಟು ವಿದ್ಯಾರ್ಥಿಗಳು ಹಣವಿಲ್ಲದ ಕಾರಣದಿಂದಲೂ ಕೂಡ ಶಾಲಾ-ಕಾಲೇಜುಗಳನ್ನು ಅರ್ಧದಲ್ಲಿ ನಿಲ್ಲಿಸಿ ಬಿಡುತ್ತಾರೆ. ಆ ರೀತಿಯ ಒಂದು ಶಿಕ್ಷಣವನ್ನು ಅಲ್ಲಿಯೇ ನಿಲ್ಲಿಸಿ, ಬೇರೆ ರೀತಿಯ ಕೆಲಸವನ್ನು ಕೂಡ ಹುಡುಕಿಕೊಳ್ಳುತ್ತಾರೆ.
ಯಾರೆಲ್ಲಾ ಈ ರೀತಿಯ ಒಂದು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೋ, ಅಂತಹ ವಿದ್ಯಾರ್ಥಿಗಳೇ ವಿದ್ಯಾವಂತರಾಗಿರುತ್ತಾರೆ. ಯಾಕೆಂದರೆ ಸಾಕಷ್ಟು ಬಾರಿ ಹಣದ ಕೊರತೆಯಿಂದ ಮಾತ್ರ ಅವರು ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದಿದ್ದರೂ ಕೂಡ ಹೆಚ್ಚಿನ ಅಂಕವನ್ನು ಪ್ರಸ್ತುತವಾಗಿ ಓದುತ್ತಿರುವಂತಹ ತರಗತಿಯಲ್ಲಿ ತೆಗೆದುಕೊಂಡಿರುತ್ತಾರೆ. ಆದರೂ ಕೂಡ ಹಣದ ಕೊರತೆ ಅಡ್ಡಿಯಾಗುತ್ತದೆ ಮುಂದಿನ ಶಿಕ್ಷಣವನ್ನು ಮುಂದುವರಿಸಲು, ಅಂತಹ ವಿದ್ಯಾರ್ಥಿಗಳಿಗೆ ಇಲ್ಲೊಂದು ವಿದ್ಯಾರ್ಥಿ ವೇತನದಿಂದ ಹಣ ಕೂಡ ದೊರೆಯುತ್ತದೆ.
ವಿದ್ಯಾರ್ಥಿಗಳಿಗೆ ಇರಬೇಕಾದಂತಹ ಅರ್ಹತೆಗಳಿವು.
- ಕಡ್ಡಾಯವಾಗಿ 9 ರಿಂದ 12ನೇ ತರಗತಿಯ ಒಳಗಿನ ತರಗತಿಯನ್ನು ಓದುತ್ತಿರಬೇಕು.
- ಅವರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಪ್ರಸ್ತುತವಾಗಿ ಓದುತ್ತಿರುವಂತಹ ಶಿಕ್ಷಣದ ಇಂದಿನ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ 75 ಪರ್ಸೆಂಟ್ ಅಂಕವನ್ನು ಗಳಿಸಿರಬೇಕಾಗುತ್ತದೆ.
- ದೇಶಾದ್ಯಂತ ಎಲ್ಲಾ ವಿದ್ಯಾರ್ಥಿನಿಯರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
- ವಿದ್ಯಾರ್ಥಿನಿಯರಿಗೆ ಮಾತ್ರ ಈ ಸ್ಕಾಲರ್ಶಿಪ್ ದೊರೆಯುತ್ತದೆ.
- ಒಬ್ಬರೇ ಪೋಷಕರನ್ನು ಹೊಂದಿರುವಂತಹ ವಿದ್ಯಾರ್ಥಿಗೆ ಮೊದಲ ಆದ್ಯತೆ ಕೂಡ ಇದೆ. ಹಾಗೂ ಅನಾಥ ಮಕ್ಕಳಿಗೆ ಮತ್ತು ಇನ್ನಿತರ ಕಡುಬಡತನದ ಮಕ್ಕಳಿಗೂ ಕೂಡ ಮೊದಲ ಆದ್ಯತೆಯನ್ನು ಈ ಸ್ಕಾಲರ್ಶಿಪ್ ನೀಡುತ್ತದೆ.
- ಖಾಸಗಿ ವಲಯದ ಶಾಲಾ ಕಾಲೇಜು ಮಕ್ಕಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ಈ ಹಣದಿಂದ ನೀವು ಯಾವೆಲ್ಲ ಕೆಲಸವನ್ನು ನಿರ್ವಹಿಸಬಹುದು ?
ಸ್ನೇಹಿತರೆ ನೀವು ಕೂಡ ಒಂಬತ್ತರಿಂದ ಹನ್ನೆರಡನೇ ತರಗತಿ ಒಳಗಿನ ಶಿಕ್ಷಣವನ್ನು ಪ್ರಸ್ತುತವಾಗಿ ಓದುತ್ತಿದ್ದೀರಿ ಎಂದರೆ, ನಿಮಗೂ ಕೂಡ ಈ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ ಎಂದರ್ಥ, ಬರೋಬ್ಬರಿ 20,000 ಹಣವನ್ನು ಪಡೆದುಕೊಳ್ಳಲು ವಿದ್ಯಾರ್ಥಿನಿಯರು ಕೂಡ ಅರ್ಹರಾಗಿರುತ್ತಾರೆ.
ಈ ಒಂದು ಸ್ಕಾಲರ್ಶಿಪ್ ಮುಖಾಂತರ ನೀವು ಟ್ಯೂಷನ್ ಫೀಸ್ ಅನ್ನು ಕೂಡ ಕಟ್ಟಬಹುದು. ಹಾಗೂ ಶಾಲಾ-ಕಾಲೇಜಿನ ಶುಲ್ಕವನ್ನು ಕೂಡ ಪಾವತಿ ಮಾಡಬಹುದು. ಮತ್ತು ಇನ್ನಿತರ ವಸತಿ ನಿಲಯದ ಶುಲ್ಕ, ಬಸ್ಸುಗಳ ಶುಲ್ಕ, ಇದೇ ರೀತಿಯ ಇನ್ನಿತರ ಶೈಕ್ಷಣಿಕ ಕೆಲಸಗಳಿಗೂ ಕೂಡ ಈ ಒಂದು ಹಣವನ್ನು ಉಪಯೋಗ ಮಾಡಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತವೆ.
- ವಿದ್ಯಾರ್ಥಿಗಳ ಆಧಾರ್ ಕಾರ್ಡ್
- ಇಂದಿನ ವರ್ಷದ ಶೈಕ್ಷಣಿಕ ಅಂಕಪಟ್ಟಿ
- ಪ್ರವೇಶಾತಿ ಪಡೆದ ಶಾಲಾ ಅಥವಾ ಕಾಲೇಜಿನ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವಿಳಾಸದ ಮಾಹಿತಿ
- ಪಿಡಬ್ಲ್ಯೂಡಿ ಅಭ್ಯರ್ಥಿಗಳಾಗಿದ್ದಲ್ಲಿ ಪ್ರಮಾಣ ಪತ್ರ
- ಭಾವಚಿತ್ರ
ಈ ವಿದ್ಯಾರ್ಥಿವೇತನಕ್ಕೆ ಈ ರೀತಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಮೊದಲಿಗೆ ಎಲ್ಲರೂ ಕೂಡ ಈ https://www.buddy4study.com/page/omron-healthcare-sch ಲಿಂಕನ್ನು ಕ್ಲಿಕ್ಕಿಸುವ ಮುಖಾಂತರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಆನಂತರ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ. ಅರ್ಜಿ ಸಲ್ಲಿಕೆ ಮಾಡಿದ ನಂತರ ಒಮ್ರಾನ್ ಹೆಲ್ತ್ ಕೇರ್ ಸ್ಕಾಲರ್ಶಿಪ್ ನ ಸಿಬ್ಬಂದಿಗಳು ನಿಮ್ಮ ಅರ್ಜಿ ಸಲ್ಲಿಕೆಯ ಮಾಹಿತಿಯನ್ನು ಕೂಡ ಒಂದು ಬಾರಿ ಚೆಕ್ ಮಾಡುತ್ತಾರೆ. ಆ ಪರಿಶೀಲನೆ ನಡೆದ ಬಳಿಕ, ವಿದ್ಯಾರ್ಥಿಗಳನ್ನು ಶೈಕ್ಷಣಿಕ ಅಂಕ ಪಟ್ಟಿಗಳ ಮುಖಾಂತರ ಸೆಲೆಕ್ಟ್ ಮಾಡಿಕೊಂಡು, ನಿಮಗೆ ದೂರವಾಣಿ ಮುಖಾಂತರ ಸಂಪರ್ಕ ಮಾಡಿ ಕೆಲವೊಂದು ಸಂದರ್ಶನವನ್ನು ಕೂಡ ಮಾಡುತ್ತಾರೆ.
ಆನಂತರ ನೀವು ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹರಾಗಿದ್ದೀರಿ ಎಂದರೆ, ಮಾತ್ರ ಇಪ್ಪತ್ತು ಸಾವಿರ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ. ಒಂದೇ ಬಾರಿಯಲ್ಲಿ 20 ಸಾವಿರ ಹಣವನ್ನು ಪಡೆದುಕೊಳ್ಳಲು ನೀವು ಕೂಡ ಮುಂದಾಗಿರಿ. ಅರ್ಜಿ ಸಲ್ಲಿಕೆ ಮಾಡಿದ್ರೆ ಸಾಕು ನೀವು 20,000 ಹಣವನ್ನು ಕೂಡ ಒಂದೇ ಬಾರಿಯಲ್ಲಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು 31-5-2024 ಕೊನೆಯ ದಿನಾಂಕವಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….