ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ಯಾರೆಲ್ಲ ಪ್ಯಾನ್ ಕಾರ್ಡ್ಗಳನ್ನು ಇನ್ನು ಮಾಡಿಸಿಲ್ಲವೋ ಅಂತವರು ಹೊಸ ಪ್ಯಾನ್ ಕಾರ್ಡ್ ಗಳಿಗೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಕೇವಲ ಐದು ನಿಮಿಷ ಇದ್ದರೆ ಸಾಕು ಈ ವೊಂದು ಆನ್ಲೈನ್ ಪ್ರಕ್ರಿಯೆಯ ಮೂಲಕ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದಾಗಿದೆ.
ನೀವು ಯಾವುದೇ ಸೆಂಟರ್ ಗಳಿಗೆ ಭೇಟಿ ನೀಡದೆ ಹೊಸ ಪ್ಯಾನ್ ಕಾರ್ಡ್ ಗಳಿಗೂ ಕೂಡ ಮನೆಯಲ್ಲಿಯೇ ಇದ್ದು ನಿಮ್ಮ ಫೋನ್ ಗಳನ್ನು ಬಳಕೆ ಮಾಡಿಕೊಂಡು ಕೂಡ ಹೊಸ ಪ್ಯಾನ್ ಕಾರ್ಡ್ಗಳನ್ನು ಪಡೆದುಕೊಳ್ಳಬಹುದು ಆಧಾರ್ ಕಾರ್ಡ್ ಸಂಖ್ಯೆ ಇದ್ರೆ ಸಾಕು ಈ ಹೊಸ ಪ್ಯಾನ್ ಕಾರ್ಡ್ ಕೂಡ ದೊರೆಯುತ್ತದೆ.
ಪ್ಯಾನ್ ಕಾರ್ಡ್ ಯಾವೆಲ್ಲ ಕೆಲಸಕ್ಕೆ ಬೇಕಾಗುತ್ತದೆ !
ಸ್ನೇಹಿತರೆ ಈ ಒಂದು ಪ್ಯಾನ್ ಕಾರ್ಡ್ ನಮ್ಮ ಹಣಕಾಸಿನ ವಹಿವಾಟಿನ ಪ್ರಕ್ರಿಯೆಗೆ ಬೇಕಾಗುತ್ತದೆ. ಇದು ಕಡ್ಡಾಯವಾಗಿ ಇದ್ದರೆ ಮಾತ್ರ ನಿಮ್ಮ ಹಣ ಬೇರೆ ವ್ಯಕ್ತಿಗಳಿಗೆ ತಲುಪಲು ಸಾಧ್ಯ. ಈ ಒಂದು ಪ್ಯಾನ್ ಕಾರ್ಡ್ಗಳನ್ನು ಆದಾಯ ತೆರಿಗೆ ಇಲಾಖೆಯು ಪರಿಚಯಿಸಿದೆ. ಇದನ್ನು ಎಲ್ಲರೂ ಕೂಡ ಹೊಂದಿರಬೇಕು. ಯಾರೆಲ್ಲ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ವಹಿವಾಟು ನಡೆಸುತ್ತಾರೋ ಅಂತಹ ವ್ಯಕ್ತಿಗಳೆಲ್ಲರೂ ಕೂಡ ಈ ಪ್ಯಾನ್ ಕಾರ್ಡ್ಗಳನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.
PAN ( ಪರ್ಮನೆಂಟ್ ಅಕೌಂಟ್ ನಂಬರ್ ಎಂದರ್ಥ ) ಇದು 10 ಅಂಕೆಯ ಸಂಖ್ಯೆಗಳಾಗಿರುತ್ತದೆ ಈ ಒಂದು ಸಂಖ್ಯೆಯಲ್ಲಿ ಪ್ಯಾನ್ ಕಾರ್ಡ್ಗಳನ್ನು ಆದಾಯ ತೆರಿಗೆ ಇಲಾಖೆಯು ನಿಮಗೆ ನೀಡುವುದು. ಈ ಪ್ಯಾನ್ ಕಾರ್ಡ್ಗಳ ಮುಖಾಂತರ ಸಾಕಷ್ಟು ಕೆಲಸವು ಕೂಡ ಆಗುತ್ತದೆ ಬ್ಯಾಂಕಿನ ಕೆಲಸವಾಗಿದ್ದರು ಕೂಡ ಈ ಪ್ಯಾನ್ ಕಾರ್ಡ್ನ ಮುಖಾಂತರ ಆಗಲಿದೆ.
ಯಾರೆಲ್ಲ ಇನ್ನೂ ಕೂಡ ಹೊಸ ಪ್ಯಾನ್ ಕಾರ್ಡ್ಗಳನ್ನು ಪಡೆದಿಲ್ಲವೋ ಅಂತವರು ನಿಮ್ಮ ಮೊಬೈಲ್ ಅನ್ನು ಬಳಕೆ ಮಾಡಿ ಆಧಾರ್ ಕಾರ್ಡ್ ಗಳ ಸಂಖ್ಯೆಯನ್ನು ನೀಡಿ ಹೊಸ ಪ್ಯಾನ್ ಕಾರ್ಡ್ ಗಳಿಗೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಅರ್ಜಿ ಸಲ್ಲಿಕೆ ಮಾಡುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿರಿ.
ಇನ್ಸ್ಟಂಟ್ ಪಾನ್ ಕಾರ್ಡ್ ಪಡೆಯಲು ಈ ದಾಖಲಾತಿಗಳು ಕಡ್ಡಾಯ !
- ಇದುವರೆಗೂ ಪ್ಯಾನ್ ಕಾರ್ಡ್ಗಳಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರಬಾರದು.
- ಪ್ಯಾನ್ ಕಾರ್ಡ್ಗಳಿಗೆ ಲಿಂಕ್ ಆಗದೆ ಇರುವಂತಹ ಆಧಾರ್ ಕಾರ್ಡ್ ಗಳನ್ನು ಕೂಡ ಬಳಕೆ ಮಾಡಿ ಹೊಸ ಪ್ಯಾನ್ ಅನ್ನು ಪಡೆಯಬಹುದು.
- ನಿಮ್ಮ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ ಕೂಡ ಬೇಕು.
- ಈ ಎರಡು ದಾಖಲೆಗಳೊಂದಿಗೆ ನೀವು ಆನ್ಲೈನ್ ನಲ್ಲಿ ಫೋನೇನ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಹೊಸ ಪ್ಯಾನ್ ಕಾರ್ಡ್ ಗಳಿಗೆ ಈ ರೀತಿ ಅರ್ಜಿ ಸಲ್ಲಿಸಿ !
- ಈ ಒಂದು https://eportal.incometax.gov.in/iec/foservices/#/pre-login/eVerifyReturn-bl ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಹೊಸ ಪ್ಯಾನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
- ನಂತರ ನೀವು Instant PAN Through Adhar ಎಂಬುದನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕಿಸಿರಿ.
- ನಂತರ Get New Pan ಎಂಬುದು ಕಾಣುತ್ತದೆ ಅದನ್ನು ಕ್ಲಿಕ್ಕಿಸಿ.
- ನಂತರ ನೀವು ನಿಮ್ಮ ಆಧಾರ್ ನಲ್ಲಿರುವಂತಹ ಸಂಖ್ಯೆಯನ್ನು ಹಾಕಬೇಕು.
- ಹಾಕಿದ ಬಳಿಕವೇ ಕ್ಯಾಪ್ಚಾ ಕೊಡನ್ನು ಹಾಕಿ ಗೆಟ್ ಓಟಿಪಿ ಎಂಬುದನ್ನು ಕ್ಲಿಕ್ಕಿಸಿರಿ ನಿಮ್ಮ ಆಧಾರ್ ಸಂಖ್ಯೆಗೆ ಯಾವ ಮೊಬೈಲ್ ಸಂಖ್ಯೆ ಲಿಂಕ್ ಆಗಿರುತ್ತದೆಯೋ ಮೊಬೈಲ್ ಸಂಖ್ಯೆಗೆ ಓಟಿಪಿ ಕೂಡ ಬಂದಿರುತ್ತದೆ.
- ನಂತರ ಓಟಿಪಿಯನ್ನು ನಮೂದಿಸಿ. Validate Adhar OTP and continue ಎಂಬುದನ್ನು ಕ್ಲಿಕ್ಕಿಸಿರಿ.
- ಕ್ಲಿಕಿಸಿದ ನಂತರವೇ ಹೊಸ ಪುಟಕ್ಕೆ ಹೋಗುವಿರಿ.
- ಆ ಒಂದು ಪುಟದಲ್ಲಿ ನೀವು ಆಧಾರ್ ವಿವರಗಳನ್ನು ಕೂಡ ಭರ್ತಿ ಮಾಡಬೇಕು ಭರ್ತಿ ಮಾಡಿದ ನಂತರ Submit Pan request ಮೇಲೆ ಕ್ಲಿಕಿಸಿರಿ.
- ಕ್ಲಿಕ್ಕಿಸಿದ ನಂತರವೇ ನಿಮಗೆ acknowledgement ನಂಬರನ್ನು ನೀವು ಸ್ವೀಕರಿಸುತ್ತೀರಿ ಆ ಒಂದು ನಂಬರ್ ಗಳ ಮುಖಾಂತರ ನಿಮ್ಮ ಪ್ಯಾನ್ ಕಾರ್ಡ್ ಸ್ಥಿತಿಯನ್ನು ಕೂಡ ನೋಡಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…