pan card link with aadhar: ಪಾನ್ ಕಾರ್ಡಿಗೆ ಆಧಾರ್ ಲಿಂಕ್ ಕಡ್ಡಾಯ ! ಲಿಂಕ್ ಮಾಡದಿದ್ದರೆ ಹೆಚ್ಚಿನ ಟಿಡಿಎಸ್ ಕಡಿತ.

pan card: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ಪ್ಯಾನ್ ಕಾರ್ಡ್ಗಳನ್ನು ಹೊಂದಿದ್ದೀರೋ ಅಂತವರಿಗೆ ಇದು ಬಿಗ್ ಅಪ್ಡೇಟ್ ಎಂದು ಹೇಳಬಹುದು. ಏಕೆಂದರೆ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅನ್ನು ನೀವು ಕಡ್ಡಾಯವಾಗಿ ಲಿಂಕ್ ಮಾಡಿಸತಕ್ಕದ್ದು. ಆದಾಯ ತೆರಿಗೆ ಇಲಾಖೆಯು ಈಗಾಗಲೇ ಈ ಹಿಂದೆ ಈ ಒಂದು ಮಾಹಿತಿಯನ್ನು ಕೂಡ ಹೊರಡಿಸಿದ್ದು ಆದರೆ ಕೆಲವೊಬ್ಬರು ಇನ್ನೂ ಕೂಡ ಆಧಾರ್ ಕಾರ್ಡ್ಗಳನ್ನು ಪ್ಯಾನ್ ಕಾರ್ಡ್ಗಳಿಗೆ ಲಿಂಕ್ ಮಾಡಿಸಿಲ್ಲ,

ಅಂತವರು ಯಾವ ನಿಗದಿ ದಿನಾಂಕದೊಳಗೆ ಲಿಂಕ್ ಮಾಡಿಸಬೇಕು ಹಾಗೂ ಮೊಬೈಲಿನಲ್ಲಿ ಪ್ಯಾನ್ ಕಾರ್ಡ್ ಗೆ ಯಾವ ರೀತಿ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಬಹುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗುತ್ತಿದೆ. ನೀವು ಕೂಡ ಈ ಒಂದು ಲೇಖನವನ್ನು ಕೊನೆವರೆಗೂ ಓದಿರಿ.

ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡಿಗೆ ಏಕೆ ಲಿಂಕ್ ಮಾಡಿಸಬೇಕು ?

ಸ್ನೇಹಿತರೆ ಈಗಾಗಲೇ ಆದಾಯ ತೆರಿಗೆ ಇಲಾಖೆಯು ಆಧಾರ್ ಕಾರ್ಡ್ ಗಳನ್ನು ಪ್ಯಾನ್ ಕಾರ್ಡ್ಗಳಿಗೆ ಕಡ್ಡಾಯವಾಗಿ ಲಿಂಕ್ ಮಾಡಿಸಬೇಕು ಎಂದು ಅಧಿಕೃತವಾಗಿಯೇ ಮಾಹಿತಿಯನ್ನು ಕೂಡ ಹೊರಡಿಸಿತು. ನೀವೇನಾದರೂ ಇನ್ನೂ ಕೂಡ ಪ್ಯಾನ್ ಕಾರ್ಡ್ಗಳಿಗೆ ಆಧಾರನ್ನು ಜೋಡನೆ ಮಾಡಿಲ್ಲವೆಂದರೆ ಕೂಡಲೇ ಈ ಕೆಳಕಂಡ ಮಾಹಿತಿಯಂತೆಯೇ ಮಾಡಿರಿ. ಮನೆಯಲ್ಲಿಯೇ ಇದ್ದು ಫೋನ್ ಬಳಕೆ ಮಾಡಿಕೊಂಡು ಪ್ಯಾನ್ ಕಾರ್ಡ್ಗಳಿಗೆ ಆಧಾರ್ ಕಾರ್ಡ್ ಗಳನ್ನು ಕೂಡ ಸುಲಭವಾಗಿ ಲಿಂಕ್ ಮಾಡಿರಿ.

 

ಈ ರೀತಿ ಲಿಂಕ್ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಹೆಚ್ಚಿನ ಟಿಡಿಎಸ್ ಕೂಡ ಕಡಿತವಾಗುವುದಿಲ್ಲ. ನೀವೇನಾದರೂ ಲಿಂಕ್ ಮಾಡದಿದ್ದರೆ ನೀವು ಇನ್ಮುಂದೆ ಪ್ಯಾನ್ ಕಾರ್ಡ್ಗಳನ್ನು ಕೂಡ ಬೇರೆ ಕೆಲಸಗಳಿಗೆ ಬಳಕೆ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಆದಕಾರಣ ಎಲ್ಲಾ ಅಭ್ಯರ್ಥಿಗಳು ಕೂಡ ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ಗಳಿಗೆ ಇವತ್ತಿನ ದಿನದಂದೇ ಜೋಡಣೆ ಮಾಡಲು ಮುಂದಾಗಿರಿ. ನೀವೇನಾದರೂ ಜೋಡಣೆ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಕೂಡ ನಿಷ್ಕ್ರಾಯಗೊಳಿಸುತ್ತದೆ ಆದಾಯ ತೆರಿಗೆ ಇಲಾಖೆ. ಆದ ಕಾರಣ ಎಲ್ಲರೂ ಕೂಡ ಕಡ್ಡಾಯವಾಗಿ ಆಧಾರ್ ಕಾರ್ಡ್ಗಳನ್ನು ಕೂಡ ಲಿಂಕ್ ಮಾಡಬೇಕು.

ಯಾರೆಲ್ಲ 2017ರ ನಂತರ ಪ್ಯಾನ್ ಕಾರ್ಡ್ಗಳನ್ನು ಪಡೆದುಕೊಂಡಿದ್ದೀರಾ ಅಂತವರಿಗೆ ಇದು ಕಡ್ಡಾಯವಾಗುವಂತಹ ಮಾಹಿತಿ ಅಲ್ಲ ಏಕೆಂದರೆ ಆ ಒಂದು ಸಂದರ್ಭದಲ್ಲಿ ಅವರು ಆಧಾರ್ ಕಾರ್ಡ್ ಗಳನ್ನು ಕೂಡ ಪಡೆದುಕೊಂಡಿರುತ್ತಾರೆ. ಅಂತವರಿಗೆ ಈ ಒಂದು ನಿಯಮ ಅನ್ವಯವಾಗುವುದಿಲ್ಲ.

ಯಾರೆಲ್ಲ 2017ರ ಮುಂಚಿತ ದಿನಗಳಲ್ಲಿ ಪ್ಯಾನ್ ಕಾರ್ಡ್ಗಳನ್ನು ಬೇರೆ ದಾಖಲಾತಿಗಳನ್ನು ನೀಡಿ ಪಡೆದುಕೊಂಡಿರುತ್ತಾರೆ ಅಂತವರಿಗೆ ಮಾತ್ರ ಈ ಒಂದು ನಿಯಮ ಕಡ್ಡಾಯವಾಗಿದೆ. ಅಂತಹ ಅಭ್ಯರ್ಥಿಗಳು ಇನ್ನೂ ಕೂಡ ಪ್ಯಾನ್ ಕಾರ್ಡ್ಗಳನ್ನು ಆಧಾರ್ ಕಾರ್ಡ್ಗಳಿಗೆ ಲಿಂಕ್ ಮಾಡದಿದ್ದರೆ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಮಾಡಿರಿ.

ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಈ ರೀತಿ ಲಿಂಕ್ ಮಾಡಿ.

  • ಮೊದಲಿಗೆ ಎಲ್ಲರೂ ಕೂಡ ಈ ಒಂದು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ಕ್ವಿಕ್ ಲಿಂಕ್ ಎಂಬುದನ್ನು ಕ್ಲಿಕ್ಕಿಸಿರಿ ಆನಂತರ ಆಧಾರ್ ಲಿಂಕ್ ಎಂಬುದನ್ನು ಕ್ಲಿಕ್ಕಿಸಿರಿ.
  • ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿರಿ.
  • ನಮೂದಿಸಿದ ನಂತರ ಮೌಲಿಕರಿಸಿ ಎಂಬುದನ್ನು ಕ್ಲಿಕ್ಕಿಸಿ.
  • ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿರಿ ಬಳಿಕ ಲಿಂಕ್ ಆದರ್ ಎಂಬುದನ್ನು ಕ್ಲಿಕ್ಕಿಸಿ.
  • ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ರವಾನೆ ಆಗಿರುತ್ತದೆ ಆ ಒಂದು ಓಟಿಪಿಯನ್ನು ಇಲ್ಲಿ ನಮೂದಿಸುವ ಮುಖಾಂತರ ಮೌಲಿಕರಿಸು ಎಂಬುದನ್ನು ಕ್ಲಿಕ್ಕಿಸಿರಿ.
  • ಬಳಿಕ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಕೂಡ ಆಗಿರುತ್ತದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *