Phone Pay and GPay new update: ಬೇರೆಯವರ ಖಾತೆಗೆ ತಪ್ಪಾಗಿ ಹಣ ಹೋದರೆ ನಾವು ಏನು ಮಾಡಬೇಕು?
ಇಂದು ಆನ್ಲೈನ್ (online) ಮೂಲಕ ಹಣ ಪಾವತಿ ಮಾಡುವುದು ಎಷ್ಟು ಸುಲಭವಾಗಿದೆಯೋ ಅಷ್ಟೇ ನಾವು ಸ್ವಲ್ಪ ಯಾಮಾರಿದರು ಸಾಕು, ಹಣವನ್ನೇ ಕಳೆದುಕೊಳ್ಳುವ ಸ್ಥಿತಿ ಪರಿಸ್ಥಿತಿ ಬರುತ್ತದೆ.
ಅದರಲ್ಲೂ ಯುಪಿಐ ಐಡಿ ಹಾಕುವಾಗ ಒಂದು ಸಣ್ಣ ಮಿಸ್ಟೇಕ್ (mistake) ಮಾಡಿದರು ನೀವು ಯಾರ ಖಾತೆಗೆ (Bank Account) ಹಣ ಹಾಕಲು ಹೊರಟಿದ್ದೀರೋ ಅವರಿಗೆ ಆ ಹಣ ತಲುಪದೆ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗುವ ಹೆಚ್ಚಿನ ಸಾಧ್ಯತೆಗಳು ಹೆಚ್ಚು.
ಹಾಗಂದ ಮಾತ್ರಕ್ಕೆ ನೀವು ಬೇರೆಯವರ ಖಾತೆಗೆ ಹಣ ಹಾಕಿದ್ರೆ ಆ ಹಣವನ್ನು ಹಿಂಪಡೆಯಲು ಕೂಡ ಸಾಧ್ಯವಿಲ್ಲ ಎಂದೇನು ಇಲ್ಲ. ಖಂಡಿತವಾಗಿಯೂ ಅದನ್ನ ಹಿಂಪಡೆಯಬಹುದು. ಅದಕ್ಕೆ ಈ ಕೆಳಗಿನ ಕೆಲವು ಈ ಒಂದು ಮಾರ್ಗಗಳನ್ನು ಅನುಸರಿಸಿ ಸಾಕು.
ಯಾರ ಖಾತೆಗೆ ಹಣ ಹೋಗಿದ್ಯೋ ಅವರನ್ನು ನೀವು ಸಂಪರ್ಕಿಸಿ! (Contact the person)
ಈ ಕೆಲಸವನ್ನು ನೀವು ಮೊದಲು ಮಾಡಬಹುದು, ಯಾಕೆಂದರೆ ನೀವು ಯಾವ ಯುಪಿಐ ಐಡಿ ಬಳಸಿ ಯಾರ ಖಾತೆಗೆ ಹಣ ಹಾಕಿದ್ದೀರಿ ಎನ್ನುವುದು ಮೊಬೈಲ್ ನಲ್ಲಿ ಹಿಸ್ಟರಿ ಚೆಕ್ ಮಾಡಿದರೆ ತಿಳಿಯುತ್ತದೆ, ಈಗಲೇ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿ.
ಅದೃಷ್ಟ ಇದ್ರೆ ಖಂಡಿತವಾಗಿಯೂ ನಿಮ್ಮ ಹಣ ಅವರಾಗಿಯೇ ಮರುಪಾವತಿ ಮಾಡುವ ಸಾಧ್ಯತೆ ಕೂಡ ಇರುತ್ತದೆ . ಹಾಗಾಗಿ ತಪ್ಪಾಗಿ ನಿಮ್ಮ ಖಾತೆಗೆ ಹಣ ಬಂದಿದೆ ಎಂಬುದನ್ನು ಅವರಿಗೆ ತಿಳಿಸಿ ಹಣವಾನ್ನು ಹಿಂಪಡೆಯಲು ಪ್ರಯತ್ನಿಸಿ.
ಕಸ್ಟಮರ್ ಕೇರ್ ಗೆ ಕರೆ ಮಾಡಿ! (Contact Customer care)
ಆರ್ ಬಿ ಐ (RBI) ಕೂಡ ಯುಪಿಐ ಪೇಮೆಂಟ್ ಬಗ್ಗೆ ಈ ವಿಚಾರವನ್ನು ಇದೀಗ ಸ್ಪಷ್ಟಪಡಿಸಿದೆ, ನೀವು ಒಂದು ವೇಳೆ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡಿದ್ದರೆ ತಕ್ಷಣ ಕಸ್ಟಮರ್ ಕೇರ್ ಕರೆ ಮಾಡಿ ಮಾಹಿತಿಯನ್ನೂ ನೀಡಬಹುದು.
ಯುಪಿಐ ಕಸ್ಟಮರ್ ಕೇರ್ ಅಥವಾ ನೇರವಾಗಿ ನಿಮ್ಮ ಬ್ಯಾಂಕ್ ಕಸ್ಟಮರ್ ಕೇರ್ ಗೆ ಕರೆಯನ್ನೂ ಮಾಡಿ ಮಾಹಿತಿಯನ್ನೂ ನೀಡಬಹುದು. ಅಥವಾ ಮೇಲ್ ಕಳುಹಿಸಿ ಪೇಮೆಂಟ್ ಮಾಡಿರುವ ಸ್ಕ್ರೀನ್ಶಾಟ್ (screenshot) ಅಪ್ಲೋಡ್ ಮಾಡಿ ನಿಮ್ಮ ಕಂಪ್ಲೇಂಟ್ ಅನ್ನು (complaint) ದಾಖಲಿಸಿಕೊಳ್ಳಿ.
ಈ ರೀತಿ ಮಾಡುವುದರಿಂದ 24 ರಿಂದ 48 ಗಂಟೆಗಳ ಒಳಗಡೆ ನಿಮ್ಮ ಸಮಸ್ಯೆಯು ಪರಿಹಾರವಾಗುತ್ತದೆ. ಅದರಲ್ಲೂ ನಿಮ್ಮ ಬ್ಯಾಂಕ್ (Bank) ಹಾಗೂ ಯಾರ ಖಾತೆಗೆ ಹಣ ಹಾಕಿದ್ದೀರ ಅವರ ಖಾತೆ ಇರುವ ಬ್ಯಾಂಕ್ ಒಂದೇ ಆಗಿದ್ದರೆ ಹಣ ಮರುಪಾವತಿ ಮಾಡುವುದು ಬ್ಯಾಂಕಿಗೆ ಬಹಳ ಸುಲಭವಾಗುತ್ತದೆ.
ಈ ಸಹಾಯವಾಣಿ ಸಂಖ್ಯೆಗೆ ನಿಮ್ಮ ಸಮಸ್ಯೆಯ ಮಾಹಿತಿ ತಿಳಿಸಿ!
ಅನಾಮಿಕ ವ್ಯಕ್ತಿಗೆ ನೀವು ಹಣವನ್ನು ವರ್ಗಾವಣೆ ಮಾಡಿದರೆ ನಿಮ್ಮ ಹಣವನ್ನು ಹಿಂಪಡೆಯಲು ವರ್ಗಾವಣೆ ಆದ ನಂತರ ತಕ್ಷಣದಲ್ಲಿ ಈ ನಂಬರ್ ಗೆ 1800 120 1740 ಈ ಸಂಖ್ಯೆಗೆ ಕರೆಯನ್ನೂ ಮಾಡಬಹುದು. ಅಥವಾ ನೇರವಾಗಿ ನಿಮ್ಮ ಬ್ಯಾಂಕ್ ನ ಶಾಖೆಗೆ ಹೋಗಿ ಮ್ಯಾನೇಜರ್ ಗೆ ವಿಷಯ ತಿಳಿಸಿ ಅವರಿಂದ ಸಹಾಯ ಕೂಡ ಪಡೆಯಬಹುದು, ನೀವು ಒಂದು ಕಂಪ್ಲೇಂಟ್ ನೀಡಿ ಬ್ಯಾಂಕ್ ನಿಂದ ಬೇರೆಯವರ ಖಾತೆಯ ಹಣವೂ ಹಿಂಪಡೆಯಲು ಸಾಧ್ಯವಿದೆ.
ಇನ್ನು ಬ್ಯಾಂಕು ಒಂದು ವೇಳೆ ತಕ್ಷಣಕ್ಕೆ ಸ್ಪಂದಿಸದೆ ಇದ್ದರೆ, ಆರ್‌ಬಿಐ ನ https://m.rbi.org.in//Scripts/bs_viewcontent.aspx?Id=159 ಈ ವೆಬ್ ಸೈಟ್ ನಲ್ಲಿ ದೂರು ಅನ್ನು ದಾಖಲಿಸಿ.