pm awas yojana 2024: ಭಾರತದಲ್ಲಿರುವಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಸ್ವಂತ ಮನೆಗಳನ್ನು ಹೊಂದಲು ಸಾಧ್ಯವಿಲ್ಲ, ಎಲ್ಲೋ ಅಪರೂಪದ ದುಡಿಮೆಯಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿದಂತಹ ಅಭ್ಯರ್ಥಿಗಳು ಮಾತ್ರ ಸ್ವಂತ ಮನೆಗಳಲ್ಲೂ ನಿರ್ಮಿಸಿ, ನೆಮ್ಮದಿ ಆದ ಜೀವನವನ್ನು ಸಾಗಿಸುತ್ತಿರುತ್ತಾರೆ. ಅವರಂತೆ ನೀವು ಕೂಡ ನಿಮ್ಮದೇ ಆದ ಸ್ವಂತ ಕನಸಿನ ಮನೆಯನ್ನು ನಿರ್ಮಾಣ ಮಾಡಬೇಕು ಎಂಬ ಆಸೆ ಎಲ್ಲರದು ಕೂಡ ಆಗಿರುತ್ತದೆ. ನಿಮಗೆ ಹಣದ ಸಹಾಯವು ಕೂಡ ಬೇಕು, ಆ ಒಂದು ಹಣವನ್ನು ಸರ್ಕಾರವೇ ನೀಡುತ್ತದೆ, ನೀವು ನಿಮ್ಮ ಮನೆಯಲ್ಲಿ ನಿಮ್ಮ ಕನಸನ್ನು ನನಸು ಮಾಡಿದ್ರೆ ಸಾಕು.
ನಿಮಗೂ ಕೂಡ ಸಾಕಷ್ಟು ಸರ್ಕಾರಿ ಯೋಜನೆ ಮುಖಾಂತರ ಹಣ ಕೂಡ ಸಿಗಲಿದೆ. ಹಾಗಾದ್ರೆ ಈ ಯೋಜನೆಯ ಯಾವುದು ಮತ್ತು ಯಾರು ಈ ಒಂದು ಯೋಜನೆಗೆ ಅರ್ಹರು ಎಂಬುದನ್ನು ಈ ಒಂದು ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಬಯಸುವವರು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಮಂತ್ರಿಯ ಆವಾಸ್ ಯೋಜನೆ 2024 !
ಸ್ನೇಹಿತರೆ ಈಗಾಗಲೇ ಮೇಲ್ಕಂಡ ಮಾಹಿತಿಯಲ್ಲಿ ತಿಳಿಸಿದ ಹಾಗೆ ಎಲ್ಲಾ ಸಾಮಾನ್ಯ ಜನರಿಗೂ ಕೂಡ ಪ್ರಧಾನಮಂತ್ರಿ ಆವಾಸ್ ಯೋಜನೆ ಕಡೆಯಿಂದ ಹಣ ದೊರೆಯುತ್ತದೆ. ಅವರು ಕೆಲವೊಂದು ಸರಕಾರದಿಂದ ಸಿಗುವಂತಹ ಯೋಜನೆ ಅಡಿಯಲ್ಲಿ ಹಣ ಪಡೆಯಲು ಅರ್ಹರಾಗಿದ್ದರೆ ಮಾತ್ರ, ಅಂತಹ ಅಭ್ಯರ್ಥಿಗಳು ಹಣವನ್ನು ಪಡೆದು ತಮ್ಮ ಸ್ವಂತ ಮನೆಯನ್ನು ಕೂಡ ನಿರ್ಮಿಸಿಕೊಳ್ಳಬಹುದು. ಈ ಒಂದು ಮನೆಗಳು ಶಾಶ್ವತ ಮನೆಗಳಾಗಿ ನಿರ್ಮಾಣವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಾಮಾನ್ಯ ಜನರು ಕೂಡ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಹೌದು ಸ್ನೇಹಿತರೆ ಈಗಾಗಲೇ ಕೋಟ್ಯಂತರ ಕುಟುಂಬದ ಅಭ್ಯರ್ಥಿಗಳು ಮನೆಗಳನ್ನು ಕೂಡ ಯೋಜನೆ ಮುಖಾಂತರ ಪಡೆದಿದ್ದಾರೆ.
ಮೇ 2014ರಂದು ನರೇಂದ್ರ ಮೋದಿಜಿ ಅವರು ಪ್ರಧಾನ ಮಂತ್ರಿಯಾದರು ಆ ನಿಗದಿ ವರ್ಷಗಳಲ್ಲಿಯೇ ಹಲವಾರು ಯೋಜನೆಗಳನ್ನು ಕೂಡ ಸಾಮಾನ್ಯ ಜನರಿಗೆ ಜಾರಿಗೊಳಿಸಿದರು ಅದೇ ರೀತಿ 2015 ನೇ ಸಾಲಿನಲ್ಲಿಯೂ ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂಬ ಹೊಸ ಯೋಜನೆಯನ್ನು ಕೂಡ ಜಾರಿಗೆ ತಂದರು. ಆ ಯೋಜನೆ ಮುಖಾಂತರ ಈವರೆಗೂ ಕೋಟ್ಯಾಂತರ ಜನರು ಶಾಶ್ವತ ಮನೆಗಳನ್ನು ಪಡೆದಿದ್ದಾರೆ. ಇನ್ನೂ ಕೆಲ ಅಭ್ಯರ್ಥಿಗಳು ಹಣದ ಸಹಾಯವನ್ನು ಕೂಡ ಪಡೆದುಕೊಂಡು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಈ ರೀತಿಯ ಯೋಜನೆಯಲ್ಲಿ ನಿಮಗೂ ಕೂಡ ಹಣ ಬೇಕು ಎಂದರೆ, ನೀವು ಈ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಅರ್ಜಿ ಸಲ್ಲಿಸಿ ಹಣ ಪಡೆದು ಶಾಶ್ವತ ಮನೆಯನ್ನು ನಿರ್ಮಾಣ ಮಾಡಿರಿ.
ಅರ್ಜಿದಾರರಿಗೆ ಇರಬೇಕಾದಂತಹ ಅರ್ಹತೆ !
- ಭಾರತದಲ್ಲಿಯೇ ಈವರೆಗೂ ವಾಸವಾಗಿರಬೇಕಾಗುತ್ತದೆ. ಅಂದರೆ ನೀವು ಭಾರತೀಯರಾಗಿರಬೇಕು, ಭಾರತೀಯರಿಗೆ ಮಾತ್ರ ಈ ಒಂದು ಯೋಜನೆ ಹಣವನ್ನು ನೀಡುತ್ತದೆ.
- ಕೆಲ ವರ್ಗದ ಅಭ್ಯರ್ಥಿಗಳಿಗೆ ಹಾಗೂ ಬಡ ಕುಟುಂಬದ ಅಭ್ಯರ್ಥಿಗಳಿಗೆ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆ ಮುಖಾಂತರ ಮನೆಗಳು ಕೂಡ ದೊರೆಯುತ್ತವೆ.
- ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈವರೆಗೂ ಸ್ವಂತ ಮನೆಗಳು ಇರಬಾರದು.
- ಸ್ವಂತ ಸೂರು ಇರುವವರಿಗೆ ಈ ಯೋಜನೆ ಕಡೆಯಿಂದ ಮನೆ ದೊರೆಯುವುದಿಲ್ಲ.
- ಅಭ್ಯರ್ಥಿಗಳ ಕುಟುಂಬ ಆದಾಯವು ಮೂರು ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
- ಅಂಗವಿಕಲತೆ ಹೊಂದಿದಂತಹ ಅಭ್ಯರ್ಥಿಗಳು ಹಾಗೂ ಮಹಿಳೆಯರಿಗೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಇದೆ.
- ಪ್ರಸ್ತುತ ಯೋಜನೆಗೆ ಅರ್ಜಿ ಸಲ್ಲಿಸುವವರು ಈವರೆಗೂ ಯಾವ ಯೋಜನೆ ಕಡೆಯಿಂದಲೂ ಕೂಡ ಹಣವನ್ನು ಪಡೆದುಕೊಂಡಿರಬಾರದು.
ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಕಡ್ಡಾಯ.
- ಅಭ್ಯರ್ಥಿಯ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ವಿಳಾಸ ದಾಖಲಾತಿ
- ಮನೆ ಬಾಡಿಗೆದಾರರು ಎಂಬ ದಾಖಲಾತಿ
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಆಫ್ ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ !
ಆನ್ಲೈನ್ ಮುಖಾಂತರವೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಅಥವಾ ಆಫ್ಲೈನ್ ಮುಖಾಂತರವೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈ ಎರಡು ವಿಧಾನಗಳಲ್ಲಿಯೂ ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಆ ಒಂದು ಪ್ರಕ್ರಿಯೆಯಲ್ಲಿಯೇ ಸಲ್ಲಿಕೆ ಮಾಡಬೇಕು ಅರ್ಜಿಯನ್ನು, ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ದಾಖಲಾತಿಗಳನ್ನು ಕೂಡ ಸಲ್ಲಿಸತಕ್ಕದ್ದು. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ನಿಮ್ಮ ಊರಿನಲ್ಲಿರುವಂತಹ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.
ಆನ್ಲೈನ್ ಮುಖಾಂತರ ಈ ರೀತಿ ಅರ್ಜಿ ಸಲ್ಲಿಸಿ.
- ಈ ಒಂದು https://pmayg.nic.in/netiayHome/home.aspx ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿರಿ.
- ರಿಜಿಸ್ಟ್ರೇಷನ್ ಆಗುವ ಮುಖಾಂತರ ಮುಂದಿನ ಪ್ರಕ್ರಿಯೆಗೆ ಹೋಗಿರಿ.
- ನಮ್ಮ ಈ ಲೇಖನದಲ್ಲಿ ತಿಳಿಸಿರುವಂತಹ ಎಲ್ಲಾ ದಾಖಲಾತಿಗಳನ್ನು ಈ ಒಂದು ಪುಟದಲ್ಲಿ ಸಲ್ಲಿಕೆ ಮಾಡಿರಿ.
- ನೀವು ಈ ಯೋಜನೆಗೆ ಅರ್ಹರಾಗಿದ್ದೀರಿ ಎಂದರೆ ಮಾತ್ರ ನಿಮಗೆ ಅರ್ಜಿ ಸಲ್ಲಿಕೆ ಕೂಡ ಆಗಿ ಹಣ ಕೂಡ ಮಂಜೂರಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಒಟ್ಟು 2.55 ಲಕ್ಷ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ. ಸಬ್ಸಿಡಿ ಮೂಲಕ ಈ ಒಂದು ಹಣ ನಿಮ್ಮ ಕೈ ಸೇರಲಿದೆ ಈ ಹಣದಿಂದಲೇ ನೀವು ನಿಮ್ಮ ಕನಸಿನ ಸೂರನ್ನು ಕೂಡ ಕಟ್ಟಿಕೊಂಡು ನೆಮ್ಮದಿಯಾದ ಜೀವನವನ್ನು ನಡೆಸಬಹುದಾಗಿದೆ.