PM Awas Yojane: ಮನೆ ಇಲ್ಲದವರಿಗೆ, ಮನೆ ಕಟ್ಟಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಸಹಾಯಧನ!

PM Awas Yojane: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಮನೆ ಇಲ್ಲದಂತಹ ಬಡಜನರು ಉಚಿತ ಮನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು. ಮತ್ತು ಇದರ ಲಾಭ ಯಾವ ರೀತಿ ಪಡೆಯಬೇಕು? ಎಂಬುದನ್ನು ತಿಳಿಸಿಕೊಟ್ಟಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.

ಪ್ರಧಾನ ಮಂತ್ರಿ ಆವಾಸ್ ಯೋಜನೆ! (PM Awas Yojane)

2015 ರಲ್ಲಿ ಪ್ರಾರಂಭವಾದ ಯೋಜನೆಯು 2022ರ ವೇಳೆಗೆ ಎಲ್ಲಾ ಪಡ ಕುಟುಂಬಗಳಿಗೂ ಉಚಿತವಾಗಿ ಮನೆಯನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ಈ ಯೋಜನೆಯ ಬಡ ಕುಟುಂಬಗಳಿಗೆ ಉಚಿತ ಮನೆ ನಿರ್ಮಾಣ ಮಾಡಲು ಸಹಾಯ ಮಾಡುತ್ತದೆ. ಈ ಯೋಜನೆಯ ದಿನಾಂಕವನ್ನು ಡಿಸೆಂಬರ್ 31 2024ರ ವರೆಗೆ ವಿಸ್ತರಿಸಲಾಗಿರುತ್ತದೆ.

ಇದನ್ನು ಸಹ ಓದಿ: BPL ರೇಷನ್ ಕಾರ್ಡ್ ಇದ್ದವರಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್! ಮೋದಿ ಗ್ಯಾರೆಂಟಿ!

ಈ ಯೋಜನೆಯ ಲಾಭವನ್ನು SC,ST ಹಾಗೂ ಹಿಂದುಳಿದ ವರ್ಗಗಳಿಗೆ ಮೊದಲ ಪ್ರಾಮುಖ್ಯತೆಯನ್ನು ನೀಡುತ್ತದೆ ಹಾಗೂ ಮಹಿಳಾ ಅಭ್ಯರ್ಥಿಗಳು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆರ್ಥಿಕವಾಗಿ ದುರ್ಬಲವಿರುವ ವರ್ಗಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.

PM Awas ಯೋಜನೆಗೆ ಯಾರು ಅರ್ಜಿ ಸಲ್ಲಿಸಲು ಅರ್ಹರು?

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ವಯಸ್ಸು 25 ವರ್ಷ ಮೇಲ್ಪಟ್ಟಿರಬೇಕು. ಹಾಗೂ ಅನಕ್ಷರಸ್ಥರಾಗಿರಬೇಕು. 
  • 16 ರಿಂದ 59 ವರ್ಷದ ಒಳಗಿನ ಪುರುಷರನ್ನು ಹೊಂದಿರಬಾರದು. ಅಂತಹ ಕುಟುಂಬಗಳು ಅರ್ಜಿ ಸಲ್ಲಿಸಬಹುದು. 
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕುಟುಂಬಗಳು ಅರ್ಜಿ ಸಲ್ಲಿಸಬಹುದು.
  • ಭೂಮಿಯನ್ನು ಹೊಂದಿರದ ಕುಟುಂಬಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. 

PM Awas Yojane ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು! 

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಭಾರತೀಯ ನಿವಾಸಿಯಾಗಿರಬೇಕು. 
  • ಸ್ವಂತ ಮನೆಯನ್ನು ಹೊಂದಿರಬಾರದು. 
  • ಅರ್ಜಿದಾರನ ವಯಸ್ಸು 18 ವರ್ಷ ತುಂಬಿರಬೇಕು. 
  • ಬಿಪಿಎಲ್ ಕಾರ್ಡ್ ಹೊಂದಿರಬೇಕು. 
  • ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರಬೇಕು ಹಾಗೂ ವೋಟರ್ ಐಡಿ ಕೂಡ ಹೊಂದಿರಬೇಕು. 
  • ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು. 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? 

  • ಆಧಾರ್ ಕಾರ್ಡ್ 
  • ಪಾಸ್ ಪೋರ್ಟ್ ಸೈಜ್ ಫೋಟೋ 
  • ಬ್ಯಾಂಕ್ ಪಾಸ್ ಬುಕ್ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  • ಮೊಬೈಲ್ ನಂಬರ್ 

ಈ ಮೇಲಿನ ದಾಖಲೆಗಳನ್ನು ನೀವು ಸರಿಪಡಿಸಿಕೊಂಡು ಪ್ರಧಾನಮಂತ್ರಿಯ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್

https://pmaymis.gov.in

ಮೇಲೆ ಕೊಟ್ಟಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಅಥವಾ ಗ್ರಾಮವನ್ನು ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸುವುದು ಸೂಕ್ತ.

WhatsApp Group Join Now
Telegram Group Join Now
error: Content is protected !!