Pm kisan samman nidhi: ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ನಿಮಗೆ ತಿಳಿಸುವುದೇನೆಂದರೆ ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಬಿಡುಗಡೆಗೆ ಹೊಸ ದಿನಾಂಕದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿಕೊಳ್ಳಿ.
ಪಿಎಂ ಕಿಸಾನ್ ಸಮ್ಮಾನ ನಿಧಿ 16ನೇ ಕಂತಿನ ಹೊಸ ದಿನಾಂಕ ಯಾವಾಗ?
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀವು ಕೂಡ ಅರ್ಜಿ ಸಲ್ಲಿಸಿದ್ದರೆ, ಮುಂಬರುವ 16 ನೇ ಕಂತಿನ ಸಮಯದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೀವು ಕೆಲವು ಪ್ರಮುಖ ಕಾರ್ಯಗಳನ್ನು ಮುಂಚಿತವಾಗಿ ಪೂರ್ಣಗೊಳಿಸಬೇಕು ಎಂದು ಹೇಳಲು ಬಯಸುತ್ತೇನೆ.
e-KYC ಅನ್ನು ಪೂರ್ಣಗೊಳಿಸುವುದು ಅತಿ ಮುಖ್ಯ
ನೀವು ನಿಮ್ಮ e-KYC ಅನ್ನು ಪೂರ್ಣಗೊಳಿಸುವುದು ಮೊದಲ ಮತ್ತು ಪ್ರಮುಖ ಕಾರ್ಯವಾಗಿದೆ ಅಂತನೇ ಹೇಳಬಹುದು! ನಿಮ್ಮ ಹತ್ತಿರದ CSC ಕೇಂದ್ರ, ಬ್ಯಾಂಕ್ ಅಥವಾ ರೈತ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು ಅದನ್ನು ಪೂರ್ಣಗೊಳಿಸಬಹುದು ಎಂದು ತಿಳಿಸಲಾಗಿದೆ. ನಿಮ್ಮ ಇ-ಕೆವೈಸಿ ಮಾಡಿಲ್ಲ ಅಂದ್ರೆ 16ನೇ ಕಂತು ನಿಮ್ಮ ಖಾತೆಗೆ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಲಾಗಿದೆ.
ಭೂ ಪರಿಶೀಲನೆಯನ್ನು ಮಾಡಿಸುವುದು ಕೂಡ ತಿಳಿಸಲಾಗಿದೆ
ಭೂ ಪರಿಶೀಲನೆಯನ್ನು ಮಾಡುವುದು ಕೂಡ ಮುಖ್ಯವಾಗಿದೆ. ಇದರಲ್ಲಿ ಸೂಚಿಸಿರುವ ಹೊಸ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಫಲಾನುಭವಿಯು ಭೂ ಪರಿಶೀಲನೆಯನ್ನು ಹೊಂದಿರುವುದು ಅವಶ್ಯಕ, ಅದನ್ನು ಪೂರ್ಣಗೊಳಿಸುವುದು ತುಂಬಾ ಮುಖ್ಯ ಕೆಲಸ ಆಗಿದೆ!
ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ನಂಬರ್ ಅನ್ನು ಲಿಂಕ್ ಮಾಡುವುದು ಕೂಡ ಮುಖ್ಯ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PMKSN) ಯೋಜನೆ ಅಡಿಯಲ್ಲಿ, ಎಲ್ಲಾ ಫಲಾನುಭವಿ ರೈತರ(Formers)ಆಧಾರ್ ಕಾರ್ಡ್ ಅನ್ನು ಅವರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದು ನಿಮಗೆ ಮುಖ್ಯವಾಗಿದೆ ಎಂದು ತಿಳಿಸಲಾಗಿದೆ. ಅದು ಮಾಡದಿದ್ದರೆ, ನೀವು ಮುಂದಿನ ಕಂತನ್ನು ಕಳೆದುಕೊಳ್ಳಬಹುದು.
ಕೇಂದ್ರ ಸರಕಾರ ಇದುವರೆಗೆ 15 ಕಂತುಗಳನ್ನು ರೈತರಿಗೆ ಬಿಡುಗಡೆ ಮಾಡಿದ್ದು, ಈಗ ನಾವೆಲ್ಲರೂ 16ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದೇವೆ. ಈ ಕಂತಿನ ಹಣ ಯಾವಾಗ ವರ್ಗಾವಣೆಯಾಗುತ್ತದೆ ಎಂಬ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆಯು ಬಂದಿಲ್ಲ, ಆದರೆ ಮೂಲತಃ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಇದನ್ನು ಪಡೆಯಬಹುದು ಎಂದು ಕೇಳಿ ಬರುತ್ತಿದೆ.
ಸ್ನೇಹಿತರೇ, ನೀವು ನಿಮ್ಮ ಅರ್ಜಿಯನ್ನು ಇದೀಗ ಸರಿಪಡಿಸಿ ಮತ್ತು ನಿಮ್ಮ ಖಾತೆಯನ್ನು ನವೀಕರಿಸಿದರೆ, ನಿಮಗೆ 16 ನೇ ಕಂತಾಗಿ ₹2000 ಬದಲಿಗೆ ₹4000 ಸಿಗುತ್ತದೆ ಎಂದು ತಿಳಿಸಲಾಗಿದೆ!
ಸ್ನೇಹಿತರೇ,ಇಷ್ಟು ಮಾತ್ರವಲ್ಲದೆ ಸರ್ಕಾರ ಈಗ 15 ಹಾಗೂ 16ನೇ ಕಂತಿನ ಹಣವನ್ನು ಅವರ ಖಾತೆಗೆ ವರ್ಗಾಯಿಸಲಿದೆ ಎಂದು ಕೂಡ ತಿಳಿಸಲಾಗಿದೆ. ಇದರೊಂದಿಗೆ ರೈತ ಬಂಧುಗಳು ಒಂದನ್ನು ಪಡೆಯುವುದಷ್ಟೇ ಅಲ್ಲ, ಎರಡೂ ಕಂತುಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಬಹುದು.