Pm kisan samman nidhi: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ 17ನೇ ಕಂತಿನ ಹಣ ಯಾವಾಗ ಬಿಡುಗಡೆ ಮಾಡಲಾಯಿದೆ ಎಂಬ ಪ್ರಮುಖ ಮಾಹಿತಿಯನ್ನು ಕುರಿತು ಇವತ್ತಿನ ವರದಿಯಲ್ಲಿ ಚರ್ಚಿಸಲಾಗಿದೆ ಆದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 17ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಎಂದು ರೈತರಲ್ಲಿ ಕುತೂಹಲ ಮೂಡಿದೆ ಕೇಂದ್ರ ಸರ್ಕಾರವು ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿದಿದ್ದರೂ ಕೆಲವು ಸುಳಿವುಗಳು ಸಿಕ್ಕವೇ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ :
ಭಾರತದ ಅನ್ನದಾತರಿಗೆ ಭರವಸೆಯ ಕಿರಣವಾಗಿ ಬಂದಿರುವವಂತ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ ಈ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ₹6000/- ಆರ್ಥಿಕ ನೆರವನ್ನು ನೀಡಲಾಗುತ್ತದೆ ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆ ಗಳಿಗೆ ಜಮಾ ಮಾಡುವ ಮೂಲಕ ಯಾವುದೇ ಮಧ್ಯವರ್ತಿಗಳಿಲ್ಲದೆ ಅವರಿಗೆ ನೆರವನ್ನು ನೀಡಲಾಗುತ್ತದೆ.
ಈ ಯೋಜನೆಯು ಯಶಸ್ಸಿನಿಂದಾಗಿ ಕೋಟ್ಯಾಂತರ ರೈತರು ಪ್ರಯೋಜನವನ್ನು ಪಡೆದಿದ್ದಾರೆ ಈ ಯೋಜನೆಯಲ್ಲಿ ರೈತರ ಜೀವನ ಮಟ್ಟವನ್ನು ಸುಧಾರಣೆ ಮಾಡಲು ಮತ್ತು ಕೃಷಿ ಕ್ಷೇತ್ರವನ್ನು ಬಲಪಡಿಸಲು ಈಯೋಜನೆ ಉತ್ತಮ ಕ್ರಮವಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ₹6000/- ನೀಡಲಾಗುತ್ತದೆ ಈ ಯೋಜನೆಯಡಿ ಈಗಾಗಲೇ 16 ನೇ ಕಂತುಗಳ ಹಣ ರೈತರ ಖಾತೆಗಳಿಗೆ ಜಮಾ ಈಗಾಗಲೇ ಮಾಡಲಾಗಿದೆ ಈಗ 17ನೇ ಕಂತುಗಳ ಹಣ ಯಾವಾಗ ಬರುತ್ತದೆ ಎಂಬುದರ ಕುರಿತು ಮಾಹಿತಿ ಮೂಡಿ ಬಂದಿದೆ.
ಸಾಮನ್ಯವಾಗಿ ಕೇಂದ್ರ ಸರ್ಕಾರವು ದೇಶದಲ್ಲಿನ ರೈತರಿಗೆ ವಾರ್ಷಿಕವಾಗಿ ₹6,000/- ಆರ್ಥಿಕ ನೆರವನ್ನು ನೀಡುತ್ತದೆ ಈ ಯೋಜನೆಯಡಿ ರೈತರಿಗೆ ಮೂರು ಕಂತುಗಳಲ್ಲಿ ಈ ರೀತಿ ಹಣವನ್ನು ಜಮಾ ಮಾಡಲಾಗುತ್ತದೆ:
- ₹2000/- ನಾಲ್ಕು ತಿಂಗಳಿಗೊಮ್ಮೆ ಬರುತ್ತದೆ
- ₹6000/- ಒಟ್ಟು ವಾರ್ಷಿಕವಾಗಿ ಬರುತ್ತದೆ
- ರೈತರ ಬ್ಯಾಂಕ್ ಖಾತೆಗಳಿಗೆ ಈ ಹಣವನ್ನು ನೇರವಾಗಿಯೇ ಜಮಾ ಮಾಡಲಾಗುತ್ತದೆ ಈ ಯೋಜನೆಯನ್ನು ರೈತರ ಕೃಷಿ ಖರ್ಚುಗಳನ್ನು ಭರಿಸಲು ಹಾಗೂ ಅವರ ಜೀವನ ಮಟ್ಟವನ್ನು ಸುಧಾರಿಸಲಿಕೆ ಸಹಾಯ ಮಾಡುತ್ತದೆ
- ಫೆಬ್ರವರಿ ತಿಂಗಳಲ್ಲಿ ಅಂತ್ಯದಲ್ಲಿ ಮೋದಿ ಸರ್ಕಾರವು ಕಿಸಾನ್ ಯೋಜನೆಯ 16ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ ಈಗ 17ನೇ ಕಂತು ಕೂಡ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಕುರಿತು ಕುತೂಹಲಕಾರಿ ಮೂಡಿದೆ.
ವರದಿಗಳ ಪ್ರಕಾರ ಕೇಂದ್ರ ಸರ್ಕಾರವ ಜುಲೈ 2024ರಲ್ಲಿ 17ನೇ ಕಂತುಗಳ ಹಣವನ್ನು ರೈತ ಖಾತೆಗಳಿಗೆ ಜಮಾ ವನ್ನು ಮಾಡಬಹುದು ಎಂದು ಮಾಹಿತಿ ಬಂದಿದೆ ಈ ಕಂತು ಬಂದರೆ ರೈತರು ಈ ಯೋಜನೆಯಡಿ ಒಟ್ಟು ₹34,000/-ಪಡೆದಂತಾಗುತ್ತದೆ ಚುನಾವಣೆಯ ಹಿನ್ನೆಲೆಯಲ್ಲಿ ಪಿಎಂ ಕಿಸಾನ್ ಹಣವನ್ನು ಹೆಚ್ಚಾಗಬಹುದು ಎಂಬ ನಿರೀಕ್ಷೆಗಳೂ ಇದ್ದವು ಆದರೆ ಮೋದಿ ಸರ್ಕಾರವು ಈ ವಿಚಾರವಾಗಿ ಪಿಎಂ ಕಿಸಾನ್ ಮೊತ್ತವನ್ನು ಹೆಚ್ಚಿಸುವ ವಿಷಯದಲ್ಲಿ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆಯಡಿ ಲಾಭವನ್ನು ಪಡೆಯಲು KYC ಪೂರ್ಣಗೊಳಿಸುವುದು ಅತ್ಯಗತ್ಯ ವಾಗಿದೆ KYC ಪೂರ್ಣಗೊಳಿಸದಿದ್ದರೆ ಅಥವಾ ಖಾತೆಯ ಲಿಂಕ್ ಸರಿಯಾಗಿಲ್ಲದಿದ್ದರೆ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿಯೇ ರೈತರು ಮೊದಲಿಗೆ KYC ಯನ್ನು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಪಿಎಂ ಕಿಸಾನ್ ಯೋಜನೆಗೆ ಯಾರು ಯಾರು ಅರ್ಹರು:
ತೆರಿಗೆದಾರರು ಈ ಯೋಜನೆಯಡಿಯಲ್ಲಿ ಯಾವುದೇ ಪ್ರಯೋಜನವನ್ನು ಪಡೆಯುವಂತಿಲ್ಲ.
ಯಾವುದೇ ಕೃಷಿ ಭೂಮಿಯ ಹೊಂದಿರುವ ವ್ಯಕ್ತಿಯೂ ಈ ಯೋಜನೆಗೆ ಅರ್ಹರಾಗಿದ್ದಾರೆ ಅವರು ಕೃಷಿಯನ್ನು ಒಂದು ವೃತ್ತಿಯಾಗಿ ಅವಲಂಬಿಸಿರಬೇಕಾಗಿಲ್ಲ.
ಈ ಯೋಜನೆಯಡಿಯಲ್ಲಿ ಒಂದು ಮನೆಯಿಂದ ಒಬ್ಬ ವ್ಯಕ್ತಿಗೆ ಮಾತ್ರ ಪ್ರಯೋಜನವು ಸಿಗುತ್ತದೆ.
ಜಮೀನು ಪತಿ ಹಾಗೂ ಪತ್ನಿಯರ ಹೆಸರಲ್ಲಿದ್ದರೆ ಅವರಲ್ಲಿ ಒಬ್ಬರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆಯಡಿ ಹಣ ಸಿಗುತ್ತದೆ.
ಇನ್ನೂ ಈ ಯೋಜನೆಗೆ ಸೇರ್ಪಡೆಯಾಗದ ರೈತರು ಈಗಲೇ ಸೇರಿ ಈ ಯೋಜನೆಯನ್ನು ಪ್ರಯೋಜನಗಳನ್ನು ಪಡೆಯಬಹುದು ಆಧಾರ್ ಕಾರ್ಡ್ ಪಡಿತರ ಚೀಟಿ ಬ್ಯಾಂಕ್ ಖಾತೆ ಫಾರ್ಮ್ ಪಟ್ಟಾ ಆಧಾರ್ ಲಿಂಕ್ ಮೊಬೈಲ್ ನಂಬರ್ ಮೂಲಕ ಈ ಯೋಜನೆಗೆ ಸೇರ್ಪಡೆಯಾಬಹುದು.
ನನ್ನ ಪ್ರಿಯ ಓದುಗರೆ ಗಮನಕ್ಕೆ : ನಿಮ್ಮ ಕರ್ನಾಟಕ ಶಿಕ್ಷಣ ತನ್ನ ಓದುಗರಿಗೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಮತ್ತು ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ಅನುಸರಿಸಿ.
ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು :