ರೈತರು ಪಿಎಂ ಕಿಸಾನ್ ಯೋಜನೆ ಹಣ ಬೇಕು ಅಂದ್ರೆ ಈ ಕೆಲಸ ಮಾಡೋದು ಕಡ್ಡಾಯ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಕೇಂದ್ರ ಸರ್ಕಾರವೂ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM Kisan Scheme) ಕೂಡ ಯಾವಾಗಲೋ ಹೊರತಂದಿದೆ. ಇದೊಂದು ಕೇಂದ್ರದ ಒಂದು ಯೋಜನೆಯಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ 2019ರಲ್ಲಿ (PM Narendra Modi) ರೈತರಿಗಾಗಿ ಈ ಯೋಜನೆಯನ್ನು ಪರಿಚಯಿಸಿದ್ದಾರೆ.

ಈ ಯೋಜನೆಯಡಿ ರೈತರು ಪ್ರತಿ ವರ್ಷ 3 ಕಂತುಗಳಲ್ಲಿ ಹಣವನ್ನ ಪಡೆಯುತ್ತಿದ್ದಾರೆ. ಪ್ರತಿ ರೈತರ ಬ್ಯಾಂಕ್ ಖಾತೆಗೆ 2 ಸಾವಿರ ಹಣ ಕೂಡ ಜಮಾ ಆಗುತ್ತದೆ. ಅಂದರೆ ವರ್ಷಕ್ಕೆ 6,000 ಬರುತ್ತದೆ. ಈವರೆಗೆ ಕೇಂದ್ರ ಸರ್ಕಾರ 15 ಕಂತು ಹಣ ನೀಡಿದ್ದು, 16ನೇ ಕಂತಿನ ಹಣಕ್ಕಾಗಿ ರೈತರು ಇದೀಗ ಕಾಯುತ್ತಿದ್ದಾರೆ ಅಂತಾನೆ ಹೇಳಬಹುದು.

16ನೇ ಕಂತಿನ ಹಣ ಯಾವಾಗ ಬರುತ್ತೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16 ನೇ ಕಂತಿನ ಹಣ ಫೆಬ್ರವರಿ ಅಥವಾ ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ. ಆದರೆ, ನಿಖರವಾದ ದಿನಾಂಕವನ್ನು ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಕೂಡ ಖಚಿತಪಡಿಸಿಲ್ಲ ಅಂತ ಹೇಳಬಹುದು.

eKYC ಮಾಡಿದರೆ ಅಷ್ಟೇ ಹಣ ಸಿಗುತ್ತೆ!

ಫಲಾನುಭವಿಗಳು ರೂ 2,000 ಕಂತು ಪಡೆಯಲು ತಮ್ಮ ONLINE eKYC ಅನ್ನು ಪೂರ್ಣಗೊಳಿಸಬೇಕಾಗಿದೆ. KYC ಮಾಡಲು ಕೊನೆಯ ದಿನಾಂಕ 31 ಜನವರಿ 2024 ಆಗಿದ್ದು, ಈ ದಿನಕ್ಕೂ ಮುನ್ನವೇ ಇದನ್ನು ಮಾಡಬೇಕು ಎಂದು ಇದೀಗ ತಿಳಿಸಲಾಗಿದೆ.

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡುವುದು ಹೇಗೆ?

ಮೊದಲು ನೀವು pmkisan.gov.in. ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.

ಈಗ NEW Former ರಿಜಿಸ್ಟ್ರೇಷನ್‌ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಮೊಬೈಲ್ ನಂಬರ್, ಆಧಾರ್ ಕಾರ್ಡ್ ಸಂಖ್ಯೆ, ರಾಜ್ಯದ ಹೆಸರು ಮತ್ತು ಹೆಚ್ಚಿನವುಗಳಂತಹ ಅಗತ್ಯವಿರುವ ಎಲ್ಲಾ ವಿವರಗಳನ್ನು ಅಲ್ಲಿ ಭರ್ತಿ ಮಾಡಬೇಕು.

ನಂತರ  Get OTP ಮೇಲೆ ಕ್ಲಿಕ್ ಮಾಡಿ.

ಹೀಗೆ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ OTP ಬರುತ್ತದೆ. ನಂತರ ಆ OTP ಯನ್ನು ಅಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ನಂತರ ನೋಂದಣಿ ಮಾಡಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *