ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಮಹಿಳೆಯರಿಗೆ ಸಿಗುತ್ತಿರುವಂತಹ ಹನ್ನೊಂದು ಸಾವಿರ ಹಣದ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಅರ್ಜಿಯನ್ನು ಆನ್ಲೈನ ಮುಖಾಂತರ ಸಲ್ಲಿಕೆ ಮಾಡಿ. ಅಥವಾ ಆಫ್ಲೈನ್ ಮುಖಾಂತರವು ಸಲ್ಲಿಕೆ ಮಾಡುವ ಮೂಲಕ ಹಣವನ್ನು ಪಡೆಯಬಹುದು. ಈ ಒಂದು ಯೋಜನೆ ಮಹಿಳ ಅಭ್ಯರ್ಥಿಗಳಿಗೆ ಮಾತ್ರ ಜಾರಿಯಾಗಿದೆ. ಆ ಮಹಿಳಾ ಅಭ್ಯರ್ಥಿಗಳಿಗೆ ವಾರ್ಷಿಕವಾಗಿ 11,000 ಹಣ ದೊರೆಯುತ್ತದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಮಹಿಳಾ ಅಭ್ಯರ್ಥಿಗಳಿಗೆ ಸಿಗುತ್ತೆ 11,000 ಹಣ !
ಹೌದು ಸ್ನೇಹಿತರೆ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಪ್ರಧಾನಮಂತ್ರಿ ಮಾತೃತ್ವ ವಂದನಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ 2017ನೇ ಸಾಲಿನಿಂದಲೂ ಹಣ ಮಹಿಳಾ ಅಭ್ಯರ್ಥಿಗಳ ಖಾತೆಗೆ ಜಮಾ ಆಗುತ್ತಿದೆ. ನೀವು ಕೂಡ ಆ ಅಭ್ಯರ್ಥಿಗಳಂತೆ ಹಣ ಪಡೆಯಬೇಕು ಎಂದರೆ, ನೀವು ಮೊದಲಿಗೆ ಸರ್ಕಾರದ ಒಂದು ನಿಯಮ ಹಾಗೂ ಕೆಲವು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು.
ಪ್ರಸ್ತುತ ದಿನಗಳಲ್ಲಿ ಮಹಿಳಾ ಅಭ್ಯರ್ಥಿಗಳು ಗರ್ಭಾವತಿಯಾದ ಸಂದರ್ಭದಲ್ಲಿ ತಮ್ಮನ್ನು ತಾವು ಆರೋಗ್ಯಕರವಾಗಿ ಹೇಗೆ ಇರುವುದು ಎಂಬುದನ್ನು ಕೂಡ ಉಚಿತವಾಗಿಯೆ ಅದರ ಬಗ್ಗೆ ಮಾರ್ಗಸೂಚಿಗಳನ್ನು ಕೂಡ ಪಡೆಯಬಹುದು. ಹಾಗೂ ಪ್ರಸ್ತುತ ದಿನಗಳಲ್ಲಿ ಯಾರು ಕೂಡ ಪೌಷ್ಟಿಕತೆ ಇರುವಂತಹ ಆಹಾರವನ್ನು ಸೇವಿಸುತ್ತಿಲ್ಲ. ಎಲ್ಲರೂ ಕೂಡ ಅಪೌಷ್ಟಿಕತೆ ಆಹಾರದ ಕಡೆ ಮೊರೆ ಹೋಗಿದ್ದಾರೆ.
ಆ ರೀತಿ ಮಾಡುವುದರಿಂದ ನಿಮ್ಮ ಮುಂದಿನ ದಿನಗಳಲ್ಲಿ ಜನನ ವಾಗುವಂತಹ ಮಗುವಿಗೂ ಕೂಡ ತೊಂದರೆಯಾಗುತ್ತದೆ. ಆ ರೀತಿ ಯಾರೂ ಕೂಡ ಮಾಡಬೇಡಿ ಪೌಷ್ಟಿಕತೆ ನಿಮಗೂ ಕೂಡ ಸಿಗಬೇಕು ಎಂದು ಸರ್ಕಾರ ನಿಮಗಾಗಿಯೇ ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆಯನ್ನು ಜಾರಿಗೊಳಿಸಿದೆ, ಮಗು ಹಾಗೂ ನೀವು ಕೂಡ ಆರೋಗ್ಯಕರವಾಗಿರಬೇಕು ಎಂಬುದು ಈ ಒಂದು ಯೋಜನೆಯ ಉದ್ದೇಶವಾಗಿದೆ.
ಇದನ್ನು ಓದಿ :- 5 ಲಕ್ಷ ಹೂಡಿಕೆ ಮಾಡಿದ್ರೆ 10 ಲಕ್ಷ ಹಣ ಸಿಗುತ್ತೆ,ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಎಲ್ಲಾ ಮಹಿಳಾ ಅಭ್ಯರ್ಥಿಗಳು ಕೂಡ ಮದುವೆಯಾದ ಬಳಿಕ ಗರ್ಭಾವತಿ ಹಾಗುವುದು ಸಹಜ. ಆ ಮಹಿಳೆಯರಿಗಾಗಿಯೇ ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೊಳಿಸಿ ಹಣವನ್ನು ಕೂಡ ನೀಡುತ್ತಿದೆ. ಎರಡು ಕಂತುಗಳಲ್ಲಿ ಈ ಒಂದು ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ.
ಅರ್ಜಿ ಸಲ್ಲಿಸಿದರೆ ಮಾತ್ರ ನಿಮಗೆ ಈ ಒಂದು ಹಣ ಖಾತೆಗೆ ಜಮಾ ಆಗೋದು, ಆಫ್ಲೈನ್ ಮುಖಾಂತರವೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಆಫ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುತ್ತೀವಿ ಎಂದು ಬಯಸುವವರು ನಿಮ್ಮ ಊರಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಹೆಸರನ್ನು ಕೂಡ ನೋಂದಾಯಿಸಿಕೊಳ್ಳಬಹುದು.
ಯಾರು ಈ ಯೋಜನೆಗೆ ಅರ್ಹರಾಗಿರುತ್ತಾರೆ ?
- 19 ವರ್ಷ ಮೇಲ್ಪಟ್ಟ ಎಲ್ಲಾ ಗರ್ಭವತಿಯರು ಅರ್ಜಿ ಸಲ್ಲಿಕೆ ಮಾಡಬಹುದು.
- ಪ್ರಸ್ತುತವಾಗಿ ಹಾಲುಣಿಸುವಂತಹ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು.
- ಅಂಗನವಾಡಿ ಕಾರ್ಯಕರ್ತೆಯರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
- ಅಂಗನವಾಡಿ ಸಹಾಯಕಿ ಅಭ್ಯರ್ಥಿಗಳು ಕೂಡ ಗರ್ಭವತಿಯಾದ ಸಂದರ್ಭದಲ್ಲಿ ಈ ಯೋಜನೆ ಮುಖಾಂತರ ಹಣವನ್ನು ಪಡೆಯಬಹುದಾಗಿದೆ.
- ಭಾರತೀಯರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿ !
- ಮಹಿಳಾ ಅಭ್ಯರ್ತಿಯ ಆಧಾರ್ ಕಾರ್ಡ್
- ಜನನ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ಆದಾಯ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಮಾಹಿತಿ !
ಈ ಒಂದು ಯೋಜನೆಗೆ ಎರಡು ವಿಧಾನಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ಒಂದು ಆಫ್ಲೈನ್ ಮುಖಾಂತರ ಇನ್ನೊಂದು ಆನ್ಲೈನ್ ಮುಖಾಂತರ, ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ಎಲ್ಲಾ ಮೇಲ್ಕಂಡ ದಾಖಲಾತಿಗಳೊಂದಿಗೆ ಈ Apply Online ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…