pm surya ghar yojane : ನಮಸ್ಕಾರ ಗೆಳೆಯರೇ, ಈ ಲೇಖನದಲ್ಲಿ ಕರ್ನಾಟಕ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರ ಪಿಎಂ ಸೂರ್ಯ ಘರ್ ಯೋಜನೆ(pm Surya Ghar yojana)ಗೆ ಚಾಲನೆ ನೀಡಿದ್ದಾರೆ ಈ ಯೋಜನೆ ಅಡಿ ಉಚಿತವಾಗಿ 300 ಯೂನಿಟ್ ವಿದ್ಯುತ್ ಸಿಗುತ್ತೆ. ನೀವು ಕೂಡ ಅರ್ಜಿ ಸಲ್ಲಿಸಬೇಕಾ ಹಾಗಿದ್ದಲ್ಲಿ ಲೇಖನ ಕೊನೆವರೆಗೂ ಓದಿ.
pm surya ghar yojana ಬಗ್ಗೆ ಮಾಹಿತಿ!
ಪಿಎಂ ಸೂರ್ಯ ಘರ್ ಯೋಜನೆ(pm Surya Ghar yojana) ಅಡಿ ದೇಶದ 1 ಕೋಟಿ ಮನೆಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ 300 ಯೂನಿಟ್ ವಿದ್ಯುತ್ ಒದಗಿಸುವುದು ಮುಕ್ಯ ಉದ್ದೇಶವಾಗಿದೆ.
ಒಂದು ವೇಳೆ ನೀವು ತಿಂಗಳಿಗೆ 300 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಸುತ್ತಿದ್ದರೆ ಇಂಥವರಿಗೆ 3 ರ ಮೇಲೆ ಸೋಲಾರ್ ರೂಪ್ ಟಾಪ್ ಗಳನ್ನೂ ಕೂಡ ನೀಡುತ್ತಿದ್ದಾರೆ. ಇಷ್ಟೇ ಅಲ್ಲದೆ ಇಂಥವರಿಗೆ ಸಬ್ಸಿಡಿ ರೂಪದಲ್ಲಿ 78,000 ರೂ. ಹಣವೂ ಕೂಡ ಸಿಗಲಿದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?
ನೀವು ಸೂರ್ಯ ಘರ್ ಯೋಜನೆ ಅಡಿ ಉಚಿತ ವಿದ್ಯುತ್ ಯೋಜನೆ ಪ್ರಯೋಜನಗಳನ್ನು ಪಡೆಯಲು ಅರ್ಜಿದಾರರು ಮೊದಲು ಭಾರತೀಯ ಪ್ರಜೆಯಾಗಿರಬೇಕು.
ಈ ಯೋಜನೆಯ ಪ್ರಯೋಜನವನ್ನು ನೀವು ಕೂಡ ಪಡೆಯಲು ಅರ್ಜಿದಾರ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿ ಗಿಂತ ಕಡಿಮೆ ಇರಬೇಕು.
ಈ ಯೋಜನೆ ಅಡಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿ ಅಥವಾ ಆ ವ್ಯಕ್ತಿಯ ಕುಟುಂಬ ಒಬ್ಬರು ಕೂಡ ಯಾವುದೇ ರೀತಿಯ ಸರ್ಕಾರಿ ನೌಕರಿಯಲ್ಲಿ ಇರಬಾರದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಸ್ವಂತ ಮನೆ ಹೊಂದಿರಬೇಕು ಎಂದು ಕೂಡ ತಿಳಿಸಲಾಗಿದೆ.
ಅಷ್ಟೇ ಅಲ್ಲದೆ ಮನೆಯ ಮೇಲೆ ಸೌರಫಲಕಗಳನ್ನು ಅಳವಡಿಸಿಕೊಳ್ಳಲು ಜಾಸ್ತಿ ಸ್ಥಳಾವಕಾಶ ಹೊಂದಿರಬೇಕು ಎಂದು ತಿಳಿಸಲಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಜನರು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರಬೇಕು ಇದು ಕಡ್ಡಾಯ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಜಾತಿ ಹಾಗೂ ಆದಾಯ ಪ್ರಮಾಣ ಪತ್ರ.
- ವಿದ್ಯುತ್ ಬಿಲ್ ಪುರಾವೆಗಳು
- ರೇಷನ್ ಕಾರ್ಡ್
- ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಗಾತ್ರದ ಫೋಟೋ.
- ಬ್ಯಾಂಕ್ ಪಾಸ್ ಬುಕ್.
ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಸ್ನೇಹಿತರೆ,ಮೊದಲನೇದಾಗಿ ಈ ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಇದು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಅಧಿಕೃತ ಜಾಲತಾಣ.
ಸ್ನೇಹಿತರೆ,ಇಲ್ಲಿ ನಿಮ್ಮ ರಾಜ್ಯದ ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ. ಹಾಗೂ ನಿಮ್ಮ ವಿದ್ಯುತ್ ಗ್ರಾಹಕರ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ನಮೂದಿಸಿ.
ನೀವು ಮೊಬೈಲ್ ನಂಬರ್ ನೊಂದ್ದಿಗೆ ಲಾಗಿನ್ ಮಾಡಿ ಆದಮೇಲೆ ನೀವು ರೂಫ್ ಟಾಪ್ ಸೋಲಾರ್ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ನೀವು ಒಮ್ಮೆ ಈ ಯೋಜನೆಯ ವರದಿಯನ್ನು ಪಡೆದುಕೊಂಡರೆ ಅದಾದ ಮೇಲೆ ಇದರ ಮೂಲಕ ಬ್ಯಾಂಕ್ ಖಾತೆ ವಿವರಗಳು ಅಪ್ಲೋಡ್ ಮಾಡಿ ಮುಂಬರುವ 30 ದಿನಗಳಲ್ಲಿ ನಿಮ್ಮ ಸಬ್ಸಿಡಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ ಎಂದು ತಿಳಿಸಲಾಗಿದೆ.