pm yashasvi yojana: ಪಿಎಂ ಯಶಸ್ವಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ! 1,25,000 ಹಣವನ್ನು ಪಡೆಯಲು ಅರ್ಜಿ ಸಲ್ಲಿಸಿ

pm yashasvi yojana: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ಯಾರೆಲ್ಲಾ ವಿದ್ಯಾರ್ಥಿಗಳು ಪ್ರಸ್ತುತ ದಿನಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೋ ಅಂತವರಿಗೆ ಸರ್ಕಾರದ ಕಡೆಯಿಂದ ಪಿಎಂ ಯಶಸ್ವಿ ಯೋಜನೆಯ ಮುಖಾಂತರ 75,000 ದಿಂದ ಒಂದ ಲಕ್ಷದ 25 ವರೆಗೂ ಕೂಡ ಹಣ ದೊರೆಯುತ್ತದೆ. ಆ ಒಂದು ಹಣವನ್ನು ಯಾವ ರೀತಿ ಪಡೆಯಬೇಕು ಎಂಬುದರ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ತಿಳಿಸಲಾಗುತ್ತಿದೆ.

ನೀವು ಕೂಡ ವಿದ್ಯಾರ್ಥಿಗಳೇ ಆಗಿದ್ದಲ್ಲಿ ನಿಮಗೂ ಕೂಡ ಈ ಒಂದು ವಿದ್ಯಾರ್ಥಿ ವೇತನ ಹಣ ದೊರೆಯಲಿದೆ. ಈ ಹಣವನ್ನು ಪಡೆಯಲು ಯಾವೆಲ್ಲ ದಾಖಲಾತಿಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು ಹಾಗೂ ಯಾವ ಅರ್ಹತೆಯನ್ನು ಹೊಂದಿದಂತಹ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಕೆ ಆಗಿ ಹಣ ಕೂಡ ದೊರೆಯುತ್ತದೆ, ಎಂಬುದರ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ತಿಳಿದುಕೊಳ್ಳಿರಿ.

ಪಿಎಂ ಯಶಸ್ವಿ ಯೋಜನೆ 2024 !

ಪಿಎಂ ಯಶಸ್ವಿ ಯೋಜನೆಯು 2024ನೇ ಸಾಲಿನಲ್ಲಿಯೇ ಜಾರಿಯಾಯಿತು. ನರೇಂದ್ರ ಮೋದಿಜಿ ಅವರು ಈ ಒಂದು ಯೋಜನೆಯನ್ನು ಜಾರಿಗೊಳಿಸಿದರು. ಈ ಒಂದು ಯೋಜನೆಯು ವಿದ್ಯಾರ್ಥಿ ವೇತನವಾಗಿ ವಿದ್ಯಾರ್ಥಿಗಳಿಗೆ ಸಹಾಯಧನವಾಗಿ ಸಿಗುತ್ತಿದೆ. ಹಾಗೂ ವಿದ್ಯಾರ್ಥಿಗಳು ಈ ಒಂದು ಹಣದಿಂದ ಅವರ ಕಾಲೇಜಿನ ಶುಲ್ಕವನ್ನು ಕೂಡ ಪಾವತಿ ಮಾಡಬಹುದು. ಹಾಗೂ ಶಾಲಾ ಶುಲ್ಕವನ್ನು ಕೂಡ ಪಾವತಿ ಮಾಡಬಹುದಾಗಿದೆ. ಯಾರೆಲ್ಲ ಪ್ರಸ್ತುತ ದಿನಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದೀರಾ ಅಂತವರಿಗೆ ಇದು ಸಹಾಯಧನವಾಗಿ ದೊರೆಯುತ್ತದೆ. ನೀವು ಅರ್ಜಿ ಸಲ್ಲಿಕೆ ಮಾಡಿದ್ರೆ ಸಾಕು ನಿಮಗೆ ಪಿಎಂ ಯಶಸ್ವಿ ಯೋಜನೆಯ ಹಣ ಕೂಡ ದೊರೆಯುತ್ತದೆ.

ಪಿಎಂ ಯಶಸ್ವಿ ಯೋಜನೆಯ ಅರ್ಹತೆ ಏನು ?

ಪ್ರಸ್ತುತ 2023-24ನೇ ಸಾಲಿನಲ್ಲಿ 8ನೇ ತರಗತಿಯನ್ನು ಪಾಸ್ ಮಾಡಿದಂತಹ ವಿದ್ಯಾರ್ಥಿಗಳು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ. 2024-25 ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ 9ನೇ ತರಗತಿಯನ್ನು ಕೂಡ ಓದುತ್ತಿರಬೇಕು ಹಾಗೂ ಯಾರೆಲ್ಲ ಇದೆ ವರ್ಷದೊಂದು ಹತ್ತನೇ ತರಗತಿಯಲ್ಲಿ ಪಾಸಾಗಿದ್ದಾರೋ ಅಂತವರು ಕೂಡ ಪ್ರಸ್ತುತ ದಿನಗಳಲ್ಲಿ 11ನೇ ತರಗತಿಯನ್ನು ಕೂಡ ಓದುತ್ತಿರಬೇಕಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೂ ಕೂಡ 1,25,000 ಹಣ ಅವರ ಖಾತೆಗೆ ಜಮಾ ಆಗುತ್ತದೆ.

ಆ ಒಂದು ಹಣದಿಂದ ಅವರು ಕಾಲೇಜಿನ ಶುಲ್ಕವನ್ನು ಕೂಡ ಪಾವತಿ ಮಾಡಬಹುದಾಗಿದೆ ಎಂದು ಸರ್ಕಾರ ನಿರ್ಧಾರ ಮಾಡಿಕೊಂಡು ಈ ಯೋಜನೆಯನ್ನು ಕೂಡ ಜಾರಿಗೊಳಿಸಿದೆ. ನೀವು 8ನೇ ತರಗತಿಯಿಂದ 9ನೇ ತರಗತಿಗೆ ಹೋಗುತ್ತಿದ್ದೀರಿ ಎಂದರೆ ನಿಮಗೆ 75,000 ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ. ಈ ಹಣ ಪಡೆಯಲು ಈ ಕೆಳಕಂಡ ದಾಖಲಾತಿ ಹಾಗೂ ಅರ್ಹತೆಯನ್ನು ಹೊಂದಿರಬೇಕು.

ವಿದ್ಯಾರ್ಥಿಗಳಿಗೆ ಇರಬೇಕಾದಂತಹ ಅರ್ಹತೆಗಳು !

  • 9ನೇ ತರಗತಿ ವಿದ್ಯಾರ್ಥಿಗಳು ಕಳೆದ ಹಿಂದಿನ ವರ್ಷದ 8ನೇ ತರಗತಿಯ ಪರೀಕ್ಷೆಯಲ್ಲಿ 60% ಅಂಕವನ್ನು ಗಳಿಸಿರಬೇಕು.
  • ನೀವು 11ನೇ ತರಗತಿಯಲ್ಲಿ ಓದುತ್ತಿದ್ದೀರಿ ಎಂದರೆ ಕಳೆದ ಹಿಂದಿನ ಶೈಕ್ಷಣಿಕ ಪರೀಕ್ಷೆಯಲ್ಲಿ 60% ಅಂಕವನ್ನು ಕೂಡ ಗಳಿಸಬೇಕಾಗುತ್ತದೆ.
  • OBC, EBC, DNT, NT, SNT ಈ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
  • ವಿದ್ಯಾರ್ಥಿಗಳ ಕುಟುಂಬದ ಆದಾಯವು ಎರಡುವರೆ ಲಕ್ಷಕ್ಕಿಂತ ಕಡಿಮೆ ಇರಬೇಕು.

ಈ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿ.

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಎಂಟನೇ ತರಗತಿ ಅಂಕಪಟ್ಟಿ ಅಥವಾ 10ನೇ ತರಗತಿ ಅಂಕಪಟ್ಟಿ
  • ಜಾತಿ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆಯ ಮಾಹಿತಿ !

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕೃತ ವೆಬ್ಸೈಟ್ಗೆ ವಿದ್ಯಾರ್ಥಿಗಳು ಭೇಟಿ ನೀಡಬೇಕು. ಭೇಟಿ ನೀಡಿದ ನಂತರವೇ ಬೇಕಾಗುವಂತಹ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ. ಎಲ್ಲಾ ರೀತಿಯ ದಾಖಲಾತಿಗಳನ್ನು ಒದಗಿಸಿದ್ದೀರಿ ಎಂದರೆ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಅರ್ಜಿಯನ್ನು ಪೂರ್ಣಗೊಳಿಸಬಹುದು ಈ ರೀತಿಯಾಗಿ ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಕೆ ಮಾಡಿ 25,000 ದಿಂದ 1,25,000 ವರೆಗೂ ಕೂಡ ಹಣವನ್ನು ಪಡೆಯಬಹುದಾಗಿದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *