ನಮಸ್ಕಾರ ಸ್ನೇಹಿತರೇ… ನೀವು ಕೂಡ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದುಕೊಂಡಿದ್ದೀರಾ ? ಹಾಗಾದ್ರೆ ಈ ರೀತಿಯ ಒಂದು ಉದ್ಯೋಗಕ್ಕೂ ಕೂಡ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾರೆಲ್ಲ ಅಂಚೆ ಕಚೇರಿ ಉದ್ಯೋಗಗಳನ್ನು ಪಡೆಯಲು ಬಯಸುತ್ತೀರೋ ಅಂತವರು ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಹತೆ 10ನೇ ತರಗತಿಯಾಗಿದೆ. 10ನೇ ತರಗತಿಯಲ್ಲಿ ಪಾಸಾದಂತಹ ಅಭ್ಯರ್ಥಿಗಳಿಗೆ ಈ ಉದ್ಯೋಗ ನೇಮಕಾತಿಯಾಗುತ್ತದೆ. ಯಾವುದೇ ರೀತಿಯ ಪರೀಕ್ಷೆಗಳು ಕೂಡ ಇರುವುದಿಲ್ಲ. ಈ ಹುದ್ದೆಯ ಹೆಚ್ಚಿನ ಮಾಹಿತಿ ಕೆಳಕಂಡಂತಿದೆ ಓದಿ.
32 ಸಾವಿರ ಹುದ್ದೆಗಳು ಬರ್ತಿಗೆ ಅಧಿಸೂಚನೆ ಬಿಡುಗಡೆ.
ಈ 2024ನೇ ಸಾಲಿನಲ್ಲಿ ಅಂಚೆ ಇಲಾಖೆಯು ಒಟ್ಟು 32 ಸಾವಿರ ಉದ್ಯೋಗವನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಯಾರೆಲ್ಲಾ 10ನೇ ತರಗತಿಯನ್ನು ಪಾಸ್ ಮಾಡಿ ಉದ್ಯೋಗವನ್ನು ಹುಡುಕುತ್ತಿರುತ್ತಾರೋ ಅಂತವರಿಗೆ ಉದ್ಯೋಗವಕಾಶವನ್ನು ಒದಗಿಸಿಕೊಟ್ಟಿದೆ. ಭರ್ಜರಿ ಉದ್ಯೋಗಾವಕಾಶ ಎಂದೇ ಹೇಳಬಹುದು. ಏಕೆಂದರೆ ಸಾಕಷ್ಟು ಬಾರಿ ಕಡಿಮೆ ಸಂಖ್ಯೆಯ ಹುದ್ದೆಯನ್ನು ಭರ್ತಿ ಮಾಡುತ್ತಿದ್ದ ಅಂಚೆ ಇಲಾಖೆ ಬರೋಬ್ಬರಿ ಈ ವರ್ಷದಂದು 32 ಸಾವಿರ ಹುದ್ದೆಗಳು ಬರ್ತೀ ಮಾಡಲು ಮುಂದಾಗಿದೆ.
ಅಭ್ಯರ್ಥಿಗಳ ವಯೋಮಿತಿಯ ಮಾಹಿತಿ !
ಅರ್ಜಿ ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗೆ ಕಡ್ಡಾಯವಾಗಿ 18 ವರ್ಷ ವಯೋಮಿತಿ ಆಗಿರಬೇಕಾಗುತ್ತದೆ. 18ರಿಂದ 40 ವರ್ಷದೊಳಗಿನ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೇ, ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷದ ವೈಯಕ್ತಿ ಸಲ್ಲಿಕೆ ಕೂಡ ಇರುತ್ತದೆ. ಈ ಸಡಿಲಿಕೆಯನ್ನು ಕೂಡ ಬಳಸಿಕೊಂಡು ಅಭ್ಯರ್ಥಿಗಳು ನೇರವಾಗಿ ನೇಮಕಾತಿ ಆಗಬಹುದಾಗಿದೆ.
ಇದನ್ನು ಓದಿ :- SSLC ಪರೀಕ್ಷಾ ಫಲಿತಾಂಶ ಬಿಡುಗಡೆಗೆ ಮುಹೂರ್ತ ಫಿಕ್ಸ್ ! ಫಲಿತಾಂಶದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಅಭ್ಯರ್ಥಿಗಳ ವಿದ್ಯಾಹರ್ತೆಯ ಮಾಹಿತಿ :-
ಸ್ನೇಹಿತರೆ ಈ ಒಂದು ಹುದ್ದೆಯು ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿಯಾಗುತ್ತಿರುವಂತಹ ಕಾರಣದಿಂದ 10ನೇ ತರಗತಿ ಪಾಸಾದವರಿಗೆ ನೇಮಕಾತಿ ಕೂಡ ಮಾಡಿಕೊಳ್ಳಲಾಗುತ್ತದೆ. ಮೆರಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಿ, ಆ ಮೆರಿಟ್ ಲಿಸ್ಟ್ ನಲ್ಲಿ ಯಾರೆಲ್ಲ ಬಂದಿರುತ್ತಾರೆ. ಅಂತವರಿಗೆ ಉದ್ಯೋಗವನ್ನು ನೀಡುತ್ತಿದೆ ಅಂಚೆ ಇಲಾಖೆ, ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳಿಗೆ ದೊರೆಯುತ್ತದೆ ಪೋಸ್ಟ್ ಮ್ಯಾನ್ ಹುದ್ದೆ, ಹಾಗೂ ಅಂಚೆ ಕಚೇರಿಯಲ್ಲಿ ಇರುವಂತಹ ನಾನಾ ರೀತಿಯ ವಿವಿಧ ಹುದ್ದೆಗಳು ಕೂಡ ನೇಮಖಾತಿಯಾಗುತ್ತದೆ.
ಪ್ರತಿ ತಿಂಗಳ ಸಂಬಳದ ಮಾಹಿತಿ !
ನೇಮಕಾತಿಯಾಗುವಂತಹ ಅಭ್ಯರ್ಥಿಗೆ 12 ರಿಂದ 14 ಸಾವಿರ ಹಣವನ್ನು ಪ್ರತಿ ತಿಂಗಳು ಕೂಡ ನೀಡಲಾಗುತ್ತದೆ. ಹಾಗೂ ಸರ್ಕಾರದ ಸೌಲಭ್ಯವನ್ನು ಕೂಡ ಒದಗಿಸಲಾಗುತ್ತದೆ. ಈ ಅಭ್ಯರ್ಥಿಗಳಿಗೆ ಇನ್ನು ಅನೇಕ ಸೌಲಭ್ಯದೊಂದಿಗೆ ಕೆಲಸವನ್ನು ಕೂಡ ನಿರ್ವಹಿಸಬಹುದು.
ಅರ್ಜಿ ಶುಲ್ಕ ಮಾಹಿತಿ !
ಎಸ್ಸಿ ಎಸ್ಟಿ ಪಿಡಬಲ್ಯು ಅಭ್ಯರ್ಥಿಗಳನ್ನು ಹೊರತುಪಡಿಸಿ ಸಾಮಾನ್ಯ ವರ್ಗದವರು ಮಾತ್ರ 100 ಹಣವನ್ನು ಅರ್ಜಿ ಶುಲ್ಕವಾಗಿ ಪಾವತಿ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಒಂದು ಅರ್ಜಿ ಶುಲ್ಕವನ್ನು ಕೂಡ ಪಾವತಿ ಮಾಡಬೇಕಾಗುತ್ತದೆ.
ಪೋಸ್ಟ್ ಮ್ಯಾನ್ ಹುದ್ದೆಯ ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ.
ಯಾರೆಲ್ಲಾ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುತ್ತಿರೊ ಅಂತವರು ಯಾವುದೇ ರೀತಿಯ ಪರೀಕ್ಷೆಯನ್ನು ಕೂಡ ಬರೆಯುವ ಹಾಗಿಲ್ಲ, ಯಾವುದೇ ಲಿಖಿತ ಪರೀಕ್ಷೆಗಳು ಕೂಡ ಈ ಹುದ್ದೆಗಳಿಗೆ ನೇರವಾಗಿ ಅಭ್ಯರ್ಥಿಗಳು ಕೂಡ ನೇಮಕಾತಿಯಾಗುತ್ತಾರೆ. ಮೆರಿಟ್ ಲಿಸ್ಟ್ ಆಧಾರದ ಮೇರೆಗೆ ಈ ಹುದ್ದೆಗಳು ಕೂಡ ನೇಮಕಾತಿಯಾಗುತ್ತವೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….