ರೈತರ ಖಾತೆಗೆ ₹6,000 ಹಣ ಜಮಾ! `ಪಿಎಂ ಕಿಸಾನ್ ಸಮ್ಮಾನ್ ನಿಧಿ` ಯೋಜನೆಯ ಹಣ ಯಾವಾಗ ಬರುತ್ತೆ?

Pradhan mantri kisan samman nidhi yojane: ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಸಮಸ್ತ ಜನತೆಯಲ್ಲಿ ತಿಳಿಸುವ ವಿಷಯವೇನೆಂದರೆ ಬಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಒಂದು ವರ್ಷಕ್ಕೆ ಆರು ಸಾವಿರ ರೂಪಾಯಿ ಪ್ರತಿ 4 ತಿಂಗಳಿಗೆ ಒಮ್ಮೆ ವರ್ಷಕ್ಕೆ 3 ಕಂತುಗಳಲ್ಲಿ ನೀಡುವ ಹಣದ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.ಲೇಖನವನ್ನು ಕೊನೆಯವರೆಗೂ ಓದಿ.

ಭಾರತ ಸರ್ಕಾರವು(Indian Government)ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Pradhan mantri kisan samman nidhi yojane)ಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ಯೋಜನೆಯ ಮಾರ್ಗಸೂಚಿಯಂತೆ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತರ(Formers)ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಒಂದು ವರ್ಷಕ್ಕೆ 6000 ರೂ. ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ ನೀಡಲಾಗುತ್ತಿದೆ ಎಂದು ನಿಮಗೆ ಗೊತ್ತೇ ಇದೆ.

ಸಾಗುವಳಿ ಭೂಮಿ ಅಂದ್ರೆ ಉಳುಮೆ ಮಾಡುವ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರನ್ನು ಈ ಯೋಜನೆ(Scheme)ಯ ವ್ಯಾಪ್ತಿಗೆ ತರಲು ಫೆಬ್ರವರಿ 12 ರಿಂದ 21 ರವರೆಗೆ 10 ದಿನಗಳ ರಾಷ್ಟ್ರವ್ಯಾಪಿ ವಿಶೇಷ ಅಭಿಯಾನವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಅರ್ಹ ರೈತರ ನೋಂದಣಿ(Registration)ಯೊಂದಿಗೆ ಈಗಾಗಲೇ ನೋಂದಣಿಯಾಗಿರುವ ರೈತರ ಬಾಕಿಯಿರುವ ಇ-ಕೆವೈಸಿ(e-KYC)ಮಾಡಿಸಲು ಮತ್ತು ರೈತರ ಬ್ಯಾಂಕ್ ಖಾತೆ(Bank Account)ಗೆ ಆಧಾ‌ರ್ ಜೋಡಣೆ(Adhar Card Link)ಮಾಡಿಸಿಕೊಳ್ಳುವ ಮೂಲಕ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೂಡ ತಿಳಿಸಲಾಗಿದೆ.

ರೈತರು ಅವರ ಆಧಾ‌ರ್ ಕಾರ್ಡ್(Adhar Card)ಹಾಗೂ ಮೊಬೈಲ್‌ನೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್ (Grama One)ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಪಿಎಂ ಕಿಸಾನ್ ಇ-ಕೆವೈಸಿ(e-KYC) ಮಾಡಿಸುವಂತೆ ಎಲ್ಲರಿಗೂ ತಿಳಿಸಿದ್ದಾರೆ.

WhatsApp Group Join Now
Telegram Group Join Now