ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ರ ವಿವರ! (Pradhanmantri Ujjwala Yojana 2.0)
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಇಂದು ಎಲ್ಲಾ ಮಹಿಳೆಯರು ತಮ್ಮ ಮನೆಗೆ ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ಯಾರ ಮನೆಗೆ ಇದುವರೆಗೆ ಎಲ್ಪಿಜಿ ಗ್ಯಾಸ್ ಕನೆಕ್ಷನ್ (LPG gas connection) ಇಲ್ಲವೋ ಅಂತವರು ಮಾತ್ರ ಈ ಯೋಜನೆಯ ಫಲಾನುಭವಿಗಳು ಆಗಬಹುದು. ಮತ್ತು ಇದು ಮಹಿಳೆಯರಿಗೆ ಮಾತ್ರ ಲಭ್ಯವಿರುವ ಒಂದು ಯೋಜನೆಯಾಗಿದೆ.
ಉಚಿತ ಗ್ಯಾಸ್ ಕನೆಕ್ಷನ್ ಹೇಗೆ ಪಡೆದುಕೊಳ್ಳಬೇಕು? (Free gas connection)
ದೇಶದಲ್ಲಿ ಸಾಕಷ್ಟು ಮಹಿಳೆಯರು ಉಚಿತ ಗ್ಯಾಸ್ ಕಲೆಕ್ಷನ್ ಪ್ರಯೋಜನವನ್ನ ಕೂಡ ಪಡೆದುಕೊಂಡಿದ್ದಾರೆ. ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಕಲೆಕ್ಷನ್ ನ ಜೊತೆಗೆ, ಒಂದು ಗ್ಯಾಸ್ ಸ್ಟವ್, ಒಂದು ಸಿಲಿಂಡರ್ ಹಾಗೂ ಲೈಟರ್ ಇರುವ ಕಿಟ್ ಕೂಡ ಉಚಿತವಾಗಿ ಕೊಡಲಾಗುತ್ತದೆ. ಒಂದು ವರ್ಷದಲ್ಲಿ 12 ಸಿಲೆಂಡರ್ ಗಳನ್ನು ತಲ 605 ರೂಪಾಯಿಗಳಿಗೆ ಖರೀದಿ ಮಾಡಲು ಕೂಡ ಸಾಧ್ಯವಿದೆ ಎಂದು ತಿಳಿಸಲಾಗಿದೆ.
ಅರ್ಹತೆ:
- 18 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಅರ್ಜಿಯನ್ನ ಸಲ್ಲಿಸಬಹುದು.
- ಈಗಾಗಲೇ ನಿಮ್ಮ ಹತ್ತಿರ ಗ್ಯಾಸ್ ಕನೆಕ್ಷನ್ ಇದ್ದರೆ ಮತ್ತೆ ಗ್ಯಾಸ್ ಉಚಿತವಾಗಿ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
- ಅಂತ್ಯೋದಯ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಅರ್ಜಿಯನ್ನ ಸಲ್ಲಿಸಬಹುದು.
- ಬಡತನ ರೇಖೆಗಿಂತ ಕೆಳಗಿರುವವರು, S.C, S.T ಮಹಿಳೆಯರು, ಬುಡಕಟ್ಟು ಜನಾಂಗ ಮೊದಲಾದವರು ಅರ್ಜಿಯನ್ನ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು (documents to apply)
- ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್ ನಂಬರ್
- ರೇಷನ್ ಕಾರ್ಡ್ ( BPL ರೇಷನ್ ಕಾರ್ಡ್)
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರಗಳು (EKYC ಕಡ್ಡಾಯ)
- ಮನೆಯ ವಿಳಾಸದ ಪುರಾವೆ ಕೂಡ ಬೇಕು
ಅರ್ಜಿ ಸಲ್ಲಿಸುವುದು ಹೇಗೆ? (Apply now)
https://www.pmuy.gov.in/ujjwala2.html
ಮೇಲೆ ಇರುವ ಲಿಂಕ್ ಕ್ಲಿಕ್ ಮಾಡಿ.ಉಜ್ವಲ 2.0 ಎನ್ನುವ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿ.
ಈಗ ನಿಮ್ಮ ನುಂದೆ ಮೂರು ಗ್ಯಾಸ್ ಕಂಪನಿಯ ಹೆಸರುಗಳು ಕಾಣಿಸುತ್ತದೆ. ಭಾರತ್ ಗ್ಯಾಸ್(Bharat Gas), ಹೆಚ್ ಪಿ ಗ್ಯಾಸ್(HP Gas) ಹಾಗೂ ಇಂಡಿಯನ್ ಗ್ಯಾಸ್ (Indane gas) . ಈ ಮೂರಲ್ಲಿ ನೀವು ಬೇಕಾಗಿರುವ ಗ್ಯಾಸ್ ಕಂಪನಿಯನ್ನು ಆಯ್ದುಕೊಳ್ಳಬೇಕು.
ಆ ಒಂದು ಕಂಪನಿಯ ಲೋಗೋವನ್ನ ಕ್ಲಿಕ್ ಮಾಡುತ್ತಿದ್ದಂತೆಯೆ ಕಂಪನಿಯ ನೇರವಾದ ಜಾಲತಾಣ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಅಗತ್ಯ ಇರುವವರಗಳನ್ನು ನೀಡಬೇಕು, ಅರ್ಜಿ ಫಾರ್ಮ್ ಭರ್ತಿ ಮಾಡಬೇಕು, ದಾಖಲೆಗಳನ್ನು ಅಪ್ಲೋಡ್ ಮಾಡಬೇಕು, ನಿಮ್ಮ ಅರ್ಜಿಯನ್ನು ಒಪ್ಪಿಸಬೇಕು.
ಇನ್ನು offline ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ನೀವು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ (Gas Agency) ಹೋಗಿ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಯನ್ನು ನೀಡಿ ಅರ್ಜಿಯನ್ನಾ ಸಲ್ಲಿಸಬಹುದು ಆಗಿದೆ. ಸಾಕಷ್ಟು ಸಂದರ್ಭಗಳಲ್ಲಿ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಸ್ಥಳ ಪರಿಶೀಲನೆಯನ್ನಾ ಕೂಡ ಮಾಡಬಹುದು ಆಗಿದೆ. ನಂತರ ಕೆಲವೇ ದಿನಗಳಲ್ಲಿ ನಿಮ್ಮ ಅರ್ಜಿ ಅಪ್ರೂವ್ ಆಗಿದ್ದರೆ ಗ್ಯಾಸ್ ಕನೆಕ್ಷನ್ ಉಚಿತವಾಗಿ ಸಿಗುತ್ತದೆ ಅಂತ ಹೇಳಬಹುದು ಆಗಿದೆ.